25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮಾಲಾಡಿ: ಬೆನ್ನುನೋವಿನ ಸಮಸ್ಯೆಯಿಂದ ಮನನೊಂದು ವ್ಯಕ್ತಿ ನೇಣುಬಿಗಿದು ಆತ್ಮಹತ್ಯೆ

ಮಾಲಾಡಿ: ಇಲ್ಲಿಯ ಕೊಲ್ಪೆದಬೈಲ್ ಅತಿ೯ಲ‌ ನಿವಾಸಿ ವಲೇರಿಯನ್ ಡಿಸೋಜಾ(78ವ) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೇ 15 ರಂದು ವರದಿಯಾಗಿದೆ.


ಈ ಬಗ್ಗೆ ರೀಟಾ ಲೋಬೋ ಪೊಲೀಸರಿಗೆ ದೂರು ನೀಡಿ, ತನ್ನ ಗಂಡ ವಲೇರಿಯನ್ ಡಿಸೋಜಾ ಇತ್ತಿಚೀಗೆ ಗ್ಯಾಸ್ಟ್ರಿಕ್ ಮೂಲವ್ಯಾಧಿ, ಹಾಗೂ ವಿಪರೀತ ಬೆನ್ನುನೋವಿನ ಸಮಸ್ಯೆಯಿಂದ ಬಳಲುತ್ತಿದ್ದು, ಅದಕ್ಕೆ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಮೇ 14 ರಂದು ತನ್ನ ಮಗ, ಮಕ್ಕಳೊಂದಿಗೆ ಆತನ ಹೆಂಡತಿಯ ಅಕ್ಕನ ಮನೆಗೆ ಹೋಗಿ ಬರುವುದಾಗಿ ತಿಳಿಸಿ ಹೋಗಿರುತ್ತಾರೆ. ಮನೆಯಲ್ಲಿ ನಾನು ಹಾಗೂ ಗಂಡ ವಲೇರಿಯನ್ ಡಿಸೋಜಾ ಮಾತ್ರ ಇದ್ದೆವು. ಮೇ 15 ರಂದು ಬೆಳಿಗ್ಗೆ 6 ಗಂಟೆಗೆ ನಾನು ಮಡಂತ್ಯಾರು ಚರ್ಚ್ ಗೆ ಹೋಗಿ ಬೆಳಿಗ್ಗೆ 7:30ಕ್ಕೆ ಮನೆಗೆ ವಾಪಾಸು ಬಂದು ಗಂಡನನ್ನು ಕರೆದಾಗ ಪ್ರತ್ಯುತ್ತರ ಇಲ್ಲದುದರಿಂದ ಮನೆಯ ಒಳಗಡೆ ಹೊರಗಡೆ ಹುಡುಕಿದಾಗ ಗಂಡ ವಲೇರಿಯನ್ ಡಿಸೋಜಾ ರವರು ಮನೆಯ ಹಿಂಬದಿಯಲ್ಲಿ ಇರುವ 2 ಕಿಟಕಿಯ ಸನ್ ಡ್ಯಾಪ್ ನ ಮದ್ಯೆ ಇಟ್ಟಿದ್ದ ಮರದ ಪಕ್ಕಾಸಿ ಮದ್ಯಭಾಗಕ್ಕೆ ನೈಲಾನ್ ಹಗ್ಗವನ್ನು ಬಿಗಿದು ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ.

ಇತ್ತಿಚೇಗೆ ಗ್ಯಾಸ್ಟ್ರಿಕ್ ಮೂಲವ್ಯಾಧಿ, ಹಾಗೂ ವಿಪರೀತ ಬೆನ್ನುನೋವಿನ ಸಮಸ್ಯೆಯಿಂದ ಬಳಲುತ್ತಿದ್ದು ಇದೇ ಕಾರಣಕ್ಕೆ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನಂತೆ ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ವೇಣೂರು: ಪಡ್ಡ೦ದಡ್ಕ ನಿವಾಸಿ ಪಿ .ಎಸ್ .ಅಬ್ದುಲ್ ಜಲೀಲ್ ನಿಧನ

Suddi Udaya

ಉಜಿರೆ ಹೆಗ್ಡೆ ಮೆಡಿಕಲ್ ವತಿಯಿಂದ ಆರ್ಥಿಕ ಸಂಕಷ್ಟಗೊಳಗಾದವರಿಗೆ ಉಚಿತ ಔಷಧಿ

Suddi Udaya

ಉಜಿರೆ ಎಸ್ ಡಿ ಎಂ ಕಾಲೇಜು ಮತ್ತು ಎಸ್ ಡಿ ಎಂ ಕ್ರೀಡಾ ವಿಭಾಗದ ಸಂಯೋಜನೆಯಲ್ಲಿ ಬೇಸಿಗೆ ಶಿಬಿರ

Suddi Udaya

ಬೆಳ್ತಂಗಡಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವದ ಸಂಭ್ರಮ

Suddi Udaya

ಬೆಳ್ತಂಗಡಿ : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಬೇಸಿಗೆ ಶಿಬಿರದ ಸಮಾರೋಪ

Suddi Udaya

ಅಳದಂಗಡಿ: ಪ್ರಸಿದ್ದ ನಾದಸ್ವರ ವಾದಕ ಗಣೇಶ್ ಪೂಜಾರಿ ಕಾಡಂಗೆ ಅನಾರೋಗ್ಯದಿಂದ ನಿಧನ

Suddi Udaya
error: Content is protected !!