37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ ಶ್ರೀ ಧ.ಮಂ. ಪ.ಪೂ. ಕಾಲೇಜಿನಲ್ಲಿ ರಾಷ್ಟ್ರೀಯ ತತ್ವಜ್ಞಾನಿಗಳ ದಿನಾಚರಣೆ

ಉಜಿರೆ : ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಶ್ರೀ ಶಂಕರ ಜಯಂತಿಯ ಅಂಗವಾಗಿ ರಾಷ್ಟ್ರೀಯ ತತ್ವಜ್ಞಾನಿಗಳ ದಿನಾಚರಣೆ ಕಾರ್ಯಕ್ರಮ ನಡೆಯಿತು.

ವಿದ್ಯಾರ್ಥಿಗಳಾದ ಸುಮೇಧಾ ಗಾಂವ್ಕರ್ ಅವರು ಶ್ರೀ ಶಂಕರರ ಜೀವನ ಸಾಧನೆಗಳ ಬಗ್ಗೆ ಹಾಗೂ ಗುರುದತ್ತ ಮರಾಠೆ ಅವರು ಶ್ರೀ ಶಂಕರರ ಕೃತಿಗಳು ಹಾಗೂ ಅವರ ವಿಚಾರಧಾರೆಗಳ ಬಗ್ಗೆ ಮಾತನಾಡಿದರು.

ಯೋಜನಾಧಿಕಾರಿ ಡಾ.ಪ್ರಸನ್ನಕುಮಾರ ಐತಾಳ್ ಇವರು ಶ್ರೀ ಶಂಕರರ ಬಗ್ಗೆ ಪ್ರಸ್ತಾವಿಕ ಮಾತನಾಡಿ ನಿರ್ವಹಿಸಿದರು. ಸಹ ಯೋಜನಾಧಿಕಾರಿ ಪದ್ಮಶ್ರೀ ಅವರು ವಂದಿಸಿದರು. ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರು ಉಪಸ್ಥಿತರಿದ್ದರು.

Related posts

ಕನ್ಯಾಡಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರಿಂದ ಅಯೋದ್ಯೆ ಶ್ರವಣಧಾಮಕ್ಕೆ ಭೇಟಿ

Suddi Udaya

ಬಂದಾರು: ಮನೆ ಮೇಲೆ ಕುಸಿದು ಬಿದ್ದ ಧರೆ

Suddi Udaya

ಡೆಂಗ್ಯೂ ಜ್ವರಕ್ಕೆ ಬೆಳ್ತಂಗಡಿ ಖಾಸಗಿ ಕಾಲೇಜು ವಿದ್ಯಾರ್ಥಿ ಬಲಿ

Suddi Udaya

ಸುಲ್ಕೇರಿಮೊಗ್ರು ಶ್ರೀ ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಗೇರುಕಟ್ಟೆ: ಕಬಕದ ಇನೋವ ಕಾರು ಡಿಕ್ಕಿ: ಜೀವ ಉಳಿಸಿದ ಮಣ್ಣಿನ ದಿಣ್ಣೆ

Suddi Udaya

ನಾಳ ಸರಕಾರಿ ಶಾಲೆಯಲ್ಲಿ ಮೆಟ್ರಿಕ್ ಮೇಳ

Suddi Udaya
error: Content is protected !!