32.6 C
ಪುತ್ತೂರು, ಬೆಳ್ತಂಗಡಿ
November 24, 2024
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ವೇಣೂರು ಐಟಿಐಯಲ್ಲಿ ಬೆಂಗಳೂರಿನ ಯೂನಿಮೇಕ್ ಕಂಪನಿಯವರಿಂದ ಕ್ಯಾಂಪಸ್ ಸಂದರ್ಶನ

ವೇಣೂರು : ಇಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಐಟಿಐಯಲ್ಲಿ ಬೆಂಗಳೂರಿನ ಪ್ರಖ್ಯಾತ ಯೂನಿಮೇಕ್ ಕಂಪನಿಯವರು ಕ್ಯಾಂಪಸ್ ಸಂದರ್ಶನ ನಡೆಸಿದರು.

ಫಿಟ್ಟರ್, ಟರ್ನರ್ ವೃತ್ತಿಯ ವಿದ್ಯಾರ್ಥಿಗಳಲ್ಲದೇ ಡಿಪ್ಲೋಮಾ ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿಗಳಿಗೂ ಆಯ್ಕೆ ಪ್ರಕ್ರಿಯೆಯನ್ನು ಕಂಪೆನಿಯ ಅಧಿಕಾರಿಗಳಾದ ಉಮೇಶ್, ಶಂಕರ್, ಶ್ರೀಕುಮಾರ್ ಹಾಗೂ ಸುಹಾಸ್ ನಡೆಸಿದರು. ಉಮೇಶ್ ಮತ್ತು ಶಂಕರ್ ರವರು ಕಂಪನಿಯ ಕಾರ್ಯವಿಧಾನಗಳು, ಉತ್ಪನ್ನಗಳು ಮತ್ತು ಸೌಲಭ್ಯಗಳ ವಿವರಗಳನ್ನು ನೀಡಿ ವಿದ್ಯಾರ್ಥಿಗಳಿಗೆ ತಾಂತ್ರಿಕ ಕೌಶಲ್ಯತೆಯ ಅವಶ್ಯಕತೆಯನ್ನು ತಿಳಿಸಿ, ಇನ್ನು ಮುಂದಿನ ದಿನಗಳಲ್ಲಿ ತಾಂತ್ರಿಕ ಕೌಶಲ್ಯ ಹೊಂದಿರುವವರಿಗೆ ಬಹಳಷ್ಟು ಪ್ರಾಮುಖ್ಯತೆ ಒದಗಿ ಬರಲಿದ್ದು ವೃತ್ತಿ ಕೌಶಲ್ಯತೆಯನ್ನು ಮೈಗೂಡಿಸುವುದರ ಜೊತೆಗೆ ಉತ್ತಮ ನಡತೆ ಸಂವಹನ ಶಕ್ತಿಯನ್ನು ಬೆಳೆಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು.


ಸಂದರ್ಶನದಲ್ಲಿ ಒಟ್ಟು 84 ವಿದ್ಯಾರ್ಥಿಗಳು ಭಾಗವಹಿಸಿದ್ದು, 35 ವಿದ್ಯಾರ್ಥಿಗಳು ಆಯ್ಕೆಯಾದರು.
ಸಂಸ್ಥೆಯ ಪ್ರಾಚಾರ್ಯರಾದ ವಿಶ್ವೇಶ್ವರ ಪ್ರಸಾದ್ ಅತಿಥಿಗಳನ್ನು ಸ್ವಾಗತಿಸಿ, ಪರಿಚಯಿಸಿದರು. ಕಿರಿಯ ತರಬೇತಿ ಅಧಿಕಾರಿಗಳಾದ ಶ್ರವಣ್ ಕುಮಾರ್ ಮತ್ತು ಕುಶ ಇವರು ಸಂಪೂರ್ಣ ಆಯ್ಕೆ ಪ್ರಕ್ರಿಯೆಯನ್ನು ನಡೆಸುವಲ್ಲಿ ಸಹಕರಿಸಿದರು.

Related posts

ತೆಂಕಕಾರಂದೂರು: ಶ್ರೀರಾಗ ಸಂಗೀತ ಶಾಲೆ ಶುಭಾರಂಭ

Suddi Udaya

ಎಕ್ಸೆಲ್ ನ ವಿದ್ಯಾರ್ಥಿ ಸಂಜನಾ ಜೆ ಇ ಇ ಅಡ್ವಾನ್ಸ್ ನಲ್ಲಿ ರಾಷ್ಟ್ರಕ್ಕೆ 731 ರಾಂಕ್

Suddi Udaya

ಜೆಸಿಐ ವಲಯ ಮಧ್ಯಂತರ ಸಮ್ಮೇಳನ – ಜೆಸಿಐ ಬೆಳ್ತಂಗಡಿ ಮಂಜುಶ್ರೀ ಚಾಂಪಿಯನ್

Suddi Udaya

ನಿವೃತ್ತ ಯೋಧ ಗೋಪಾಲಕೃಷ್ಣ ಕಾಂಚೋಡು ಅವರ ಡ್ರಾಗನ್ ಕೃಷಿ ತೋಟಕ್ಕೆ ವಿಜ್ಞಾನಿ ತಂಡ ಭೇಟಿ

Suddi Udaya

ಸಾವ್ಯ: ಕರ್ಂಬಲೆಕ್ಕಿಯಲ್ಲಿ ಪುರುಷರ ರಾಶಿ ಪೂಜೆ

Suddi Udaya

ಕೆ. ವಸಂತ ಬಂಗೇರ ನಿಧನಕ್ಕೆ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ರವರಿಂದ ಅಂತಿಮ ನಮನ

Suddi Udaya
error: Content is protected !!