ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಪದ್ಮುಂಜ: ಆಟೋ ರಿಕ್ಷಾ ಪಲ್ಟಿ, ಗಂಭೀರ ಗಾಯಗೊಂಡ ಚಾಲಕ ಮೃತ್ಯು

ಬೆಳ್ತಂಗಡಿ: ಆಟೋ ರಿಕ್ಷಾ ಮಗುಚಿ ಬಿದ್ದು ಗಂಭೀರ ಗಾಯಗೊಂಡ ಆಟೋ ಚಾಲಕ ಮೃತಪಟ್ಟ ಘಟನೆ ಮೇ 19ರಂದು ರಾತ್ರಿ ಪದ್ಮುಂಜದಲ್ಲಿ ನಡೆದಿದೆ.

ಇಳಂತಿಲ ಗ್ರಾಮದ ಗಂಡಿಬಾಗಿಲು ನಿವಾಸಿ ದಿನೇಶ್ (29 ವ) ಮೃತ ಅಟೋ ಚಾಲಕ. ಪದ್ಮುಂಜಕ್ಕೆ ಬಾಡಿಗೆಗೆಂದು ತೆರಳಿದ ಇವರ ರಿಕ್ಷಾ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದ್ದು, ಇವರ ತಲೆಗೆ ಗಂಭೀರ ಗಾಯವಾಗಿತ್ತು. ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಇವರು ಮೃತಪಟ್ಟಿದ್ದಾರೆ.

ಇವರು ಸೌಮ್ಯ ಸ್ವಭಾದವರಾಗಿದ್ದು, ಅಟೋ ರಿಕ್ಷಾ ಚಾಲನೆಯೊಂದಿಗೆ ಉಪ್ಪಿನಂಗಡಿಯ ಸಹಕಾರಿ ಬ್ಯಾಂಕೊಂದರಲ್ಲಿ ಪಿಗ್ಮಿ ಏಜೆಂಟ್ ಆಗಿ ಕಾರ್ಯ ನಿರ್ವಹಿಸುತ್ತಾ ಎಲ್ಲರಿಗೂ ಚಿರಪರಿಚಿತರಾಗಿದ್ದರು.

ರಿಕ್ಷಾದಲ್ಲಿ ಎರಡು ಮಕ್ಕಳು ಹಾಗೂ ಅವರ ತಂದೆ ಪ್ರಯಾಣಿಕರಾಗಿದ್ದು, ಅವರು ಅಲ್ಪಸ್ವಲ್ಪ ತರಚಿದ ಗಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಅವಿವಾಹಿತರಾಗಿರುವ ಮೃತ ದಿನೇಶ್ ಅವರು ತಾಯಿ, ಓರ್ವ ಸಹೋದರನನ್ನು ಅಗಲಿದ್ದಾರೆ.

Related posts

ಬೆಳ್ತಂಗಡಿ: ಸಂತ ಲಾರೆನ್ಸ್ ದೇವಾಲಯದಲ್ಲಿ ಕ್ರಿಸ್ಮಸ್ ಆಚರಣೆ

Suddi Udaya

ಬೆಳ್ತಂಗಡಿ: ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಯೋಜನಾ ಪುಸ್ತಕ ಬಿಡುಗಡೆ

Suddi Udaya

ಬಿಜೆಪಿ ಶಿಶಿಲ ಶಕ್ತಿಕೇಂದ್ರದ ಕಾರ್ಯಕರ್ತರ ಸಭೆ

Suddi Udaya

ದ.ಕ. ಜಿಲ್ಲಾ 28ನೇ ಕನ್ನಡ ಸಾಹಿತ್ಯ ಸಮ್ಮೇಳನ: ಲಾಂಛನ ಬಿಡುಗಡೆ

Suddi Udaya

ಮಾಜಿ ಶಾಸಕ ಕೀರ್ತಿಶೇಷ ಕೆ. ವಸಂತ ಬಂಗೇರರ 1ನೇ ಪುಣ್ಯಸ್ಮರಣೆ ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿಗಳ ವಿಗ್ರಹಕ್ಕೆ ಕುಟುoಬದವರಿಂದ ಬೆಳ್ಳಿ ಕಿರೀಟ ಅರ್ಪಣೆ

Suddi Udaya

6ನೇ ಏಷ್ಯನ್ ಯೋಗಾಸನ ಚಾಂಪಿಯನ್‌ಶಿಪ್ 2025 : ಶ್ರೀ ಧ.ಮಂ. ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ನಿರ್ದೇಶಕ ಡಾ. ಐ. ಶಶಿಕಾಂತ್ ಜೈನ್ ರವರಿಗೆ ಆಹ್ವಾನ

Suddi Udaya
error: Content is protected !!