25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಗುರಿಪಳ್ಳ ಸಮೀಪದ ಬಂಡ್ರತ್ತಿಲ್ ಬಳಿ ಟವರ್ ಮೇಲೆ ಬಿದ್ದ ಮರ ಸ್ಕೂಟರ್ ನಲ್ಲಿ ಹೋಗುತ್ತಿದ್ದ ವ್ಯಕ್ತಿಗೆ ಗಾಯ

ಬೆಳ್ತಂಗಡಿ: ವಿದ್ಯುತ್ ಟವರ್ ಮೇಲೆ ಮರ ಉರುಳಿ ಬಿದ್ದು ವ್ಯಕ್ತಿ ಗಾಯಗೊಂಡ ಘಟನೆ ಇಂದು (ಮೇ20) ಬೆಳಗ್ಗೆ ಗುರಿಪಳ್ಳ ಸಮೀಪ ನಡೆದಿದೆ.


ನಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುರಿಪಳ್ಳ ಸಮೀಪದ ಬಂಡ್ರತ್ತಿಲ್ ಬಳಿ ಬೃಹತ್ ಗಾತ್ರದ ಮರ ವಿದ್ಯುತ್ ಟವರ್ ಮೇಲೆ ಉರುಳಿದೆ. ಈ ಸಂದರ್ಭ ಸ್ಕೂಟರ್ ನಲ್ಲಿ ಪ್ರಯಾಣಿಸುತ್ತಿದ್ದ ಕನ್ಯಾಡಿಯ ರಮೇಶ್ ಎಂಬವರು ಅದೇ ರಸ್ತೆಯಲ್ಲಿ ಇಂದಬೆಟ್ಟು ಕಡೆ ಹೋಗುತ್ತಿದ್ದು ಮರದ ಭಾಗ ತಲೆಗೆ ಬಡಿದಿದೆ. ಕೂದಲೆಳೆಯ ಅಂತರದಲ್ಲಿ ಅವರು ಪ್ರಾಣಪಾಯದಿಂದ ಪಾರಾಗಿದ್ದಾರೆ.
ಗಾಯಾಳುವನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.


ಘಟನೆಯಿಂದ ಒಂದು ಗಂಟೆಗಿಂತ ಅಧಿಕ ಕಾಲ ಗುರಿಪಳ್ಳ-ಇಂದಬೆಟ್ಟು ರಸ್ತೆ ಸಂಪರ್ಕ ಕಡಿತಗೊಂಡಿತು. ಮೆಸ್ಕಾಂ ಸಿಬ್ಬಂದಿ ಸ್ಥಳೀಯರ ಸಹಕಾರದಲ್ಲಿ ಮರ ತೆರವುಗೊಳಿಸಿದರು. ಕಕ್ಕಿಂಜೆ ಸಬ್ ಸ್ಟೇಷನ್ ವಿದ್ಯುತ್ ಪೂರೈಕೆಯಲ್ಲಿ ಎರಡು ತಾಸಿಗಿಂತ ಅಧಿಕ ಕಾಲ ವ್ಯತ್ಯಯ ಕಂಡುಬಂತು 33ಕೆವಿ ವಿದ್ಯುತ್ ಟವರ್ ಗೆ ಕೊಂಚ ಹಾನಿ ಉಂಟಾಗಿದೆ ಎಂದು ತಿಳಿದುಬಂದಿದೆ.

Related posts

ಪಣಕಜೆ: ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವ: ಧಾರ್ಮಿಕ ಸಭೆ

Suddi Udaya

ಪುಂಜಾಲಕಟ್ಟೆಯಲ್ಲಿ ಸ್ವಸ್ತಿಕ್ ಇಂಡಿಯಾ ಕಪ್ ಗೋಲ್ಡ್ ಮೆಡಲ್ ಕಬಡ್ಡಿ ಉತ್ಸವ: ಸಾಧಕರಿಗೆ ಸ್ವಸ್ತಿಕ್ ಸಂಭ್ರಮ ಪುರಸ್ಕಾರ

Suddi Udaya

ಪಣಕಜೆ : ಮನೆಯಿಂದ ರಸ್ತೆಗೆ ಓಡಿ ಬಂದ 3 ವರ್ಷದ ಮಗು: ರಿಕ್ಷಾಕ್ಕೆ ತಾಗಿ ಗಂಭೀರಗಾಯಗೊಂಡು ಮೃತ್ಯು

Suddi Udaya

ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ಮೇಳೈಸಿದ ಕೆಸರುಗದ್ದೆ ಕ್ರೀಡಾಕೂಟ

Suddi Udaya

ಕಳೆಂಜ ಬೂತ್ ಸಂಖ್ಯೆ 174 ರಲ್ಲಿ ಕೈಕೊಟ್ಟ ಮತಯಂತ್ರ: ಮತದಾನ ವಿಳಂಬ

Suddi Udaya

ಚಾರ್ಮಾಡಿ ಘಾಟಿಯಲ್ಲಿ ಪದೇ ಪದೇ ಸಂಭವಿಸುತ್ತಿರುವ ಕಾಳ್ಗಿಚ್ಚು ತಡೆಯಲು ಕೊನೆಗೂ ಅರಣ್ಯ ಇಲಾಖೆಯಿಂದ ಸಿಬ್ಬಂದಿ ನಿಯೋಜನೆ

Suddi Udaya
error: Content is protected !!