ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯಿಂದ ಶಿವಗಿರಿ ಯಾತ್ರೆ, ಹಲವಾರು ಕ್ಷೇತ್ರ ದರ್ಶನ

Suddi Udaya

ಬೆಳ್ತಂಗಡಿ: ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಬಳಂಜ, ಯವ ಬಿಲ್ಲವ ವೇದಿಕೆ ಮತ್ತು ಮಹಿಳಾ ಬಿಲ್ಲವ ವೇದಿಕೆಯಿಂದ ಶಿವಗಿರಿ ಯಾತ್ರೆ, ಅರಿವಿನ ಯಾತ್ರೆ, ಕೇರಳ, ತಮಿಳುನಾಡಿನ ಹಲವಾರು ತೀರ್ಥ ಕ್ಷೇತ್ರ ದರ್ಶನವನ್ನು ಮೇ 17 ರಿಂದ 20 ರವರೆಗೆ ಕೈಗೊಳ್ಳಲಾಯಿತು.

ಒಂದೇ ಜಾತಿ, ಒಂದೇ ಮತ, ಒಬ್ಬನೇ ದೇವರು ಎಂಬ ತತ್ವ ಸಂದೇಶವನ್ನು ಜಗತ್ತಿಗೆ ಸಾರಿದ ಮಹಾನ್ ಶ್ರೇಷ್ಠ ಸಂತ ಹಾಗೂ ಸಾಮಾಜಿಕ ಪರಿವರ್ತನೆಯ ಹರಿಕಾರ ಬ್ರಹ್ಮಶ್ರೀ ನಾರಾಯಣ ಗುರುಗಳ ಬೋಧನೆಗಳು ಸಾರ್ವಕಾಲಿಕ ಸತ್ಯವಾದುದು.

ಬ್ರಹ್ಮಶ್ರೀ ನಾರಾಯಣ ಗುರುವರ್ಯರ ತಪೋಭೂಮಿ ಮರುತ್ವ ಮಲೆ ಗುಹೆ ದರ್ಶನವನ್ನು ಬದುಕಿನಲ್ಲಿ ಒಮ್ಮೆಯಾದರೂ ಮಾಡಬೇಕು. ಸುಮಾರು 5700 ಹೆಜ್ಜೆ ಹಾಕಿ ಬೆಟ್ಟ ಏರುವ ಇದೊಂದು ಅದ್ಬುತವಾದ ಕ್ಷಣವಾಗಿದೆ.

ಮೇ 18 ರಂದು ಬೆಳಿಗ್ಗೆಯಿಂದ ಶಿವಗಿರಿ ಶಾರಾದ ಮಂಟಪ, ವೈದಿಕ ಮಠ, ರಿಕ್ಷಾ ಮಂಟಪ, ನಾರಾಯಣ ಗುರುಗಳ ಶಿಷ್ಯ ಬೋಧನಾಂದ ಸ್ವಾಮೀಜಿ ಸಮಾಧಿ, ನಾರಾಯಣ ಗುರುವರ್ಯರ ಮಹಾ ಸಮಾಧಿ, ಯಜ್ಞ ಮಂಟಪ, ಗುರುಕುಲ ನಟರಾಜ ಗುರು ಮಹಾಸಮಾಧಿ, ಚೆಂಬಲಂತಿ ನಾರಾಯಣ ಗುರುಗಳ ಜನ್ಮ ಸ್ಥಳ, ಮಣಕಲ್ ಭಗವತಿ ಕ್ಷೇತ್ರ ದರ್ಶನ, ಚೆಂಬಲಂತಿ ನಾರಾಯಣ ಗುರುವರ್ಯರ ಜನನ ಭೂಮಿ ದರ್ಶನ, ಕೊಣ್ಣುಂಪ್ಪರಾ ಬಾಲ ಸುಬ್ರಹ್ಮಣ್ಯ ಕ್ಷೇತ್ರ ದರ್ಶನ, ನಾರಾಯಣ ಗುರುಗಳ ಆಶ್ರಮ ಭೇಟಿ, ಅರಿವಿ‌ಪುರಂ 1888 ಮಾರ್ಚ್ 11 ಮಹಾಶಿವರಾತ್ರಿ ಪುಣ್ಯ ದಿನದಂದು ನಾರಾಯಣ ಗುರುಗಳು ಪ್ರತಿಷ್ಠಾಪಿಸಿದ ಪ್ರಥಮ ಶಿವಲಿಂಗ ಕ್ಷೇತ್ರ ದರ್ಶನ,ಕನ್ಯಾಕುಮಾರಿ ದೇವಿ ದರ್ಶನ, ಮರುತ್ವ ಮಲೈ ಆಶ್ರಮ‌ ಭೇಟಿ ಮಾಡಲಾಯಿತು.

ಮೇ 19 ರಂದು ಮರುತ್ವ ಮಲೈ ಆಶ್ರಮದಲ್ಲಿ ಸಂತ್ಸಂಗ, ಮರುತ್ವ ಮಲೆ ಪೂಜನೀಯ ಬ್ರಹ್ಮಶ್ರೀ ನಾರಾಯಣ ಗುರುವರ್ಯರ ತಪೋಭೂಮಿ ಮರುತ್ವ ಮಲೆ ಗುಹೆ ದರ್ಶನ,ಕನ್ಯಾಕುಮಾರಿ ಪಾರ್ವತಿ‌ ದೇವಿಯ ಒಂಟಿ ಪಾದ ದರ್ಶನ,ಸ್ವಾಮಿ ವಿವೇಕಾನಂದ ರಾಕ್ ವೀಕ್ಷಣೆ,ಸ್ವಾಮಿ ವಿವೇಕಾನಂದರ ಧ್ಯಾನ‌ಮಂದಿರ ಭೇಟಿ,ಅರಬ್ಬಿ ಸಮುದ್ರ,ಬಂಗಾಳ ಕೊಲ್ಲಿ,ಹಿಂದೂ ಮಹಾ ಸಾಗರ ಸೇರುವ ತ್ರಿವೇಣಿ ಸಂಗಮ ತೀರ್ಥ ಸಂಪ್ರೋಕ್ಷಣೆ, ಮಹಾತ್ಮ ಗಾಂಧೀಜಿ ಸ್ಮಾರಕ ವೀಕ್ಷಣೆ,ಕೇರಳ ಅನಂತ ಪದ್ಮನಾಭ ದೇವರ ದರ್ಶನ ಮಾಡಲಾಯಿತು‌.

ಈ ಎಲ್ಲಾ ಪುಣ್ಯ ಕ್ಷೇತ್ರಗಳ ಕ್ಷೇತ್ರ ಪರಿಚಯ, ಇತಿಹಾಸ, ಅಲ್ಲಿನ ಪರಂಪರೆ, ಕಟ್ಟು ಪಾಡುಗಳ ಬಗ್ಗೆ, ನಿವೃತ ಅಧಿಕಾರಿ ಹಿರಿಯರಾದ ರಾಮಚಂದ್ರ ಪೂಜಾರಿ ಮಂಗಳೂರು ಸಂಪೂರ್ಣ ವಿವರಣೆ ನೀಡಿದರು.

ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ‌ ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್, ಯಾತ್ರಾ ಸಮಿತಿ ಪ್ರಧಾನ ಸಂಚಾಲಕ ಯತೀಶ್ ವೈ.ಎಲ್, ಸಂಚಾಲಕರಾದ ರಂಜಿತ್ ಪೂಜಾರಿ, ಶರತ್ ಅಂಚನ್, ಭಾರತಿ‌ ಸಂತೋಷ್, ದಿನೇಶ್ ಪೂಜಾರಿ, ಸಂಘದ ನಿರ್ದೇಶಕರು ಸಹಕರಿಸಿದರು.

ಶಿವಗಿರಿ ಯಾತ್ರೆಯಲ್ಲಿ ಬಳಂಜ, ನಾಲ್ಕೂರು, ತೆಂಕಕಾರಂದೂರು, ಮಂಗಳೂರಿನ ಸುಮಾರು 55 ಮಂದಿ ಯಾತ್ರಾರ್ಥಿಗಳು ಭಾಗವಹಿಸಿದ್ದು ಶಿವಗಿರಿಯಿಂದ ಆರಂಭಗೊಂಡು ಅನಂತ ಪದ್ಮನಾಭ ದೇವಸ್ಥಾನದಲ್ಲಿ ಕೊನೆಗೊಂಡಿತು.

Leave a Comment

error: Content is protected !!