30.3 C
ಪುತ್ತೂರು, ಬೆಳ್ತಂಗಡಿ
May 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ ಸರಕಾರಿ ಐ.ಟಿ.ಐ 2024ನೇ ಸಾಲಿನ ಪ್ರವೇಶಕ್ಕೆ ಅರ್ಜಿ ಆಹ್ವಾನ

ಬೆಳ್ತಂಗಡಿ : ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಆಗಸ್ಟ್ 2024 ನೇ ಶೈಕ್ಷಣಿಕ ಸಾಲಿನ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯಿಂದ ಅಧಿಸೂಚನೆ ಹೊರಡಿಸಲಾಗಿದ್ದು, ಎಸ್.ಎಸ್.ಎಲ್.ಸಿ ಪಾಸಾದ ಅಭ್ಯರ್ಥಿಗಳಿಗೆ ಸದರಿ ಸಂಸ್ಥೆಯಲ್ಲಿ ಲಭ್ಯವಿರುವ ವೃತ್ತಿಗಳಾದ 1) M.R.A.C (Refrigeration and  Air Conditioning  Technician) 2) Fitter  ಮತ್ತು ಉದ್ಯೋಗ ಯೋಜನೆಯಡಿಯ ಎರಡು ವೃತ್ತಿಗಳಾದ  1) Mechanic Electric Vehicle  ಮತ್ತು 2) Industrial Robotics and Digital Manufacturing Technician ವೃತ್ತಿಗಳಿಗೆ ಮೇ 20 ರಿಂದ ಜೂ. 3 ರವರೆಗೆ ಇಲಾಖಾ ವೆಬ್ ಸೈಟ್: WWW.cite.karnataka.gov.in ನಲ್ಲಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಅರ್ಜಿ ಸಲ್ಲಿಸಲು ಕೊನೆಯ ಜೂ.03 ಆಗಿದ್ದು, ಅಭ್ಯರ್ಥಿಗಳು ಈ ಕೆಳಕಂಡ ಮೂಲದಾಖಲೆಗಳೊಂದಿಗೆ ಖುದ್ದಾಗಿ ಸಂಸ್ಥೆಗೆ ಹಾಜರಾಗಿ ಅರ್ಜಿ ಸಲ್ಲಿಸಬಹುದಾಗಿದೆ.. ಹೆಚ್ಚಿನ ವಿವರಗಳಿಗಾಗಿ ಸಂಸ್ಥೆಯ ಪ್ರಾಚಾರ್ಯರ ದೂರವಾಣಿ ಸಂಖ್ಯೆ: 6361060652 ಮತ್ತು ಸಂಸ್ಥೆಯ ಸ್ಥಿರ ದೂರವಾಣಿ ಸಂಖ್ಯೆ: 08256-200606 ನ್ನು ಸಂಪರ್ಕಿಸಬಹುದಾಗಿದೆ

ವಿಷೇಶ ಸೂಚನೆ:
೧) ಎಸ್.ಎಸ್.ಎಲ್.ಸಿ ಮಾರ್ಕ್ಸ್ ಕಾರ್ಡ್. (Temporary/Xerox/Internet Extract copy with Head Master Signature and Seal.)
2) ಜಾತಿ ಮತ್ತು ಆದಾಯ ಪ್ರಮಾಣ ಪತ್ರ
೩) ಆಧಾರ ಕಾರ್ಡ್.
೪) ಗ್ರಾಮೀಣ ಪ್ರಮಾಣ ಪತ್ರ (೧ನೇ ತರಗತಿಯಿಂದ ೧೦ನೇ ತರಗತಿಯವರೆಗೆ)BEO ಸಹಿ ಹಾಗೂ ಸೀಲ್ ನೊಂದಿಗೆ – ಮೀಸಲಾತಿ ಬಯಸುವವರಿಗೆ ಮಾತ್ರ
೫) ಕನ್ನಡ ಮಾಧ್ಯಮ ಪ್ರಮಾಣ ಪತ್ರ (೧ರಿಂದ ೧೦ನೇ ತರಗತಿಯವರೆಗೆ)BEO ಸಹಿ ಹಾಗೂ ಸೀಲ್ ನೊಂದಿಗೆ.- – ಮೀಸಲಾತಿ ಬಯಸುವವರಿಗೆ ಮಾತ್ರ
೬) ವ್ಯಾಸಂಗ ಪ್ರಮಾಣ ಪತ್ರ , ( ಕ್ರಮ ಸಂಖ್ಯೆ 4(Rural Certificate) ಮತ್ತು ೫(Kannda Medium Certificate) ರ ಪ್ರಮಾಣಪತ್ರಗಳು ಇಲ್ಲದೇ ಇದ್ದಾಗ (Compulsory) , BEO ಸಹಿ ಹಾಗೂ ಸೀಲ್ ನೊಂದಿಗೆ.
೭) ಫೋಟೋ (ಭಾವಚಿತ್ರ ).
೮) ಮೊಬೈಲ್ ನಂಬರ್ .
೯) ವಿದ್ಯಾರ್ಥಿಯ ವೈಯಕ್ತಿಕ ಈ ಮೇಲ್ ವಿಳಾಸ

Related posts

ಕಿರುತೆರೆ ನಿರ್ದೇಶಕ ಸುಭಾಷ್ ಅರ್ವರವರಿಗೆ ಉತ್ತಮ ನಿರ್ದೇಶಕ ಅನುಬಂಧ ಆವಾರ್ಡ್-2023: ಮಂಗಳ ಗೌರಿ, ರಂಗನಾಯಕಿ, ಗೀತಾ, ಕೆಂಡಸಂಪಿಗೆ ಧಾರಾವಾಹಿ ನಿರ್ದೇಶನ

Suddi Udaya

ಮುಳಿಕ್ಕಾರುನಲ್ಲಿ ದೈವ ವ್ಯಾಘ್ರ ಚಾಮುಂಡಿ, ಪರಿವಾರ ದೈವಗಳ ನೇಮೋತ್ಸವ

Suddi Udaya

ನಡ: ಸ್ಟಾರ್ ಲೈನ್ ವಿದ್ಯಾ ಸಂಸ್ಥೆಯಲ್ಲಿ ಪ್ರತಿಭಾವಂತ ‘ಯತೀಂ’ ವಿದ್ಯಾರ್ಥಿಗಳಿಗೆ ಹಾಗೂ ಕ್ರೀಡಾಪಟುಗಳಿಗೆ ಉಚಿತ ಶಿಕ್ಷಣಕ್ಕೆ ಅರ್ಜಿ ಆಹ್ವಾನ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆ ವಿದ್ಯಾರ್ಥಿಗಳು ರೂರಲ್ ಐಟಿ ಕ್ವಿಜ್ ಸ್ಪರ್ಧೆಯಲ್ಲಿ ವಿಭಾಗೀಯ ಮಟ್ಟಕ್ಕೆ ಆಯ್ಕೆ

Suddi Udaya

ಲಾಯಿಲ ಬಂಟರ ಗ್ರಾಮ ಸಮಿತಿ ವತಿಯಿಂದ ಆಟಿದ ಗಮ್ಮತ್ ಹಾಗೂ ವಿವಿಧ ಕ್ರೀಡಾಕೂಟ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಗೋ ಪೂಜೆ

Suddi Udaya
error: Content is protected !!