ಕೊಕ್ಕಡ ಗ್ರಾ.ಪಂ. ನಲ್ಲಿ ಶಿಕ್ಷಣ ಸಂವಹನ ಕಾರ್ಯಕ್ರಮ

Suddi Udaya

ಕೊಕ್ಕಡ : ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ ಕುರಿತಂತೆ ಮಾಹಿತಿ ಶಿಕ್ಷಣ ಸಂವಹನ ಕಾರ್ಯಕ್ರಮವು ಬೆಳ್ತಂಗಡಿ ತಾಲೂಕಿನ ಕೊಕ್ಕಡ ಗ್ರಾಮ ಪಂಚಾಯತಿಯಲ್ಲಿ ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮದಲ್ಲಿ ಮಾನ್ಯ ಕಾರ್ಯನಿರ್ವಹಣಾಧಿಕಾರಿ ವೈಜಣ್ಣನವರು ನರೇಗಾ ಯೋಜನೆ ಕುರಿತು ಚರ್ಚಿಸಿ, ಸಲಹೆ ಸೂಚನೆಗಳನ್ನು ನೀಡಿದರು.

ನರೇಗಾದಲ್ಲಿ ಮಾನವ ದಿನ ಪ್ರಗತಿ ಸಾಧಿಸುವಕ್ಕಾಗಿ ಹೆಚ್ಚಾಗಿ ಸಾರ್ವಜನಿಕ ಕಾಮಗಾರಿಗಳಲ್ಲಿ ಭಾಗವಹಿಸಿ, ತಮ್ಮ ಗ್ರಾ. ಪಂ ಅಭಿವೃದ್ಧಿ ಪಡಿಸಿಕೊಳ್ಳಿ. ನರೇಗಾ ಯೋಜನೆಯಿಂದ ಸಿಗುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಕಾರ್ಯನಿರ್ವಹಾಧಿಕಾರಿಯವರು ತಿಳಿಸಿದರು.


ಈ ಸಂದರ್ಭ ರೋಜ್ ಗಾರ್ ದಿನಾಚರಣೆ ಆಚರಿಸಲಾಯಿತು. ಈ ವೇಳೆ ಗ್ರಾ. ಪಂ ಅಭಿವೃದ್ಧಿ ಅಧಿಕಾರಿ ದೀಪಕ್ ರಾಜ್, ಕಾರ್ಯದರ್ಶಿ ಭಾರತಿ ,ತಾಂತ್ರಿಕ ಸಹಾಯಕ ಅಭಿಯಂತರರು ಗೌತಮ್ ಪಿ, ತಾಲೂಕು ನರೇಗಾ ಐಇಸಿ ಸಂಯೋಜಕರು ಶ್ರೀಮತಿ ವಿನಿಷ, ಗ್ರಾ. ಪಂ ಸಿಬ್ಬಂದಿಗಳಾದ ಕೇಶವ, ಗುಣಾಶೀಲ ಬಿ, ರಾಜೇಶ್ವರಿ ಹೆಚ್, ನಿರ್ಮಲ, ಸಂಜೀವಿನಿ ಯಂ.ಬಿ.ಕೆ ಯಶೋಧ, ಎಲ್. ಸಿ. ಆರ್. ಪಿ ಗಾಯತ್ರಿ, ಪಶು ಸಖಿ ದೀಪಿಕಾ, ಕೃಷಿ ಸಖಿ ನವ್ಯ ಉಪಸ್ಥಿತರಿದ್ದರು.

Leave a Comment

error: Content is protected !!