September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ: ಜೆಪಿ ಅಟ್ಯಾಕ್ರ್ಸ್ ಪ್ರಾಯೋಜಕತ್ವದಲ್ಲಿ ತಾಲೂಕು ಮಟ್ಟದ ಅಂಡರ್ ಆರ್ಮ್ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟ

ಬೆಳ್ತಂಗಡಿ : ಜೆಪಿ ಅಟ್ಯಾಕ್ರ್ಸ್ ಇದರ ಪ್ರಾಯೋಜಕತ್ವದಲ್ಲಿ 8+1 ಜನರ ತಾಲೂಕು ಮಟ್ಟದ ಅಂಡರ್ ಆರ್ಮ್ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟವು ಮೇ.19ರಂದು ಬೆಳ್ತಂಗಡಿ ಮೆಸ್ಕಾಂ ರಸ್ತೆ ಬೊಟ್ಟುಗುಡ್ಡೆ ಮೈದಾನದಲ್ಲಿ ನಡೆಯಿತು.


ಬೆಳ್ತಂಗಡಿ ಗಣೇಶ್ ಸುಪಾರಿ ಮಾಲಕರಾದ ಸತೀಶ್ ರೈ ಪುಂಡಿಕ್ಕು ಪಂದ್ಯಾಟವನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಸುದ್ದಿ ಉದಯ ಪತ್ರಿಕೆಯ ನಿರ್ದೇಶಕರಾದ ತುಕಾರಾಮ, ಪಟ್ಟಣ ಪಂಚಾಯಿತಿ ನಾಮ ನಿರ್ದೇಶಕರಾದ ಸತೀಶ್ ದೊಡ್ಡಮನೆ, ರಾಜ ಕೇಸರಿಯ ಸಂಸ್ಥಾಪಕ ದೀಪಕ್ ಜಿ, ಶ್ರೀ ಕ್ಷೇತ್ರ ಗ್ರಾಮ ಅಭಿವೃದ್ಧಿ ಯೋಜನೆ ಬೆಳ್ತಂಗಡಿ ತಾಲೂಕು ಕೇಂದ್ರ ಒಕ್ಕೂಟ ಅಧ್ಯಕ್ಷ ಸೀತಾರಾಮ, ಜೆಪಿ ಅಟ್ಯಾಕ್ಟರ್ ತಂಡದ ಮಾಲಕ ಕರುಣಾಕರ ಉಪಸ್ಥಿತರಿದ್ದರು.

ದೀಕ್ಷಿತ್ ಸ್ವಾಗತಿಸಿದರು. ಪ್ರಥಮ ಜೆಪಿ ಟ್ರೋಫಿ ಯನ್ನು ರೆಂಕೆದಗುತ್ತು, ದ್ವಿತೀಯ. ಎಸ್ ಕೆ ಫ್ರೆಂಡ್ಸ್ ಸುನ್ನತ್ ಕೆರೆ ಪಡೆದುಕೊಂಡಿತ್ತು. ಹಾಗೂ ಪಂದ್ಯ ಶ್ರೇಷ್ಠ, ಸರಣಿ ಶ್ರೇಷ್ಠ, ಬೆಸ್ಟ್ ಬೌಲರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಶಸ್ತಿಯನ್ನು ಬೆಳ್ತಂಗಡಿ ಉದ್ಯಮಿ ಸಮಂತ್ ಕುಮಾರ್ ಜೈನ್, ರಾಜೇಶ್ ಮೆಸ್ಕಾಂ, ಕೇಬಲ್ ರಾಜ, ಪಪ್ಪು ಸೌಂಡ್ಸ್ ಅಂಡ್ ಲೈಟಿಂಗ್ ಮಾಲಕ ಸಮೀರ್ ವಿತರಿಸಿದರು.

Related posts

ಪುಂಜಾಲಕಟ್ಟೆ ಸ್ಪಂದನ ಆಟೋ ಚಾಲಕ ಮಾಲಕರ ಸಂಘದ ವಾರ್ಷಿಕ ಮಹಾಸಭೆ: ಪದಾಧಿಕಾರಿಗಳ ಆಯ್ಕೆ

Suddi Udaya

ಬೆಳಾಲು ನಿವೃತ್ತ ಮುಖ್ಯೋಪಾಧ್ಯಾಯ ಎಸ್ ಪಿ ಬಾಲಕೃಷ್ಣ ಬಡೆಕ್ಕಿಲಾಯ ಕೊಲೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

Suddi Udaya

ಓಡೀಲು 33ನೇ ಸಾರ್ವಜನಿಕ ಗಣೇಶೋತ್ಸವ: ಗಣಪತಿ ದೇವರಿಗೆ ಬೆಳ್ಳಿ ಕಿರೀಟ ಸಮರ್ಪಣೆ

Suddi Udaya

ಬೆಳ್ತಂಗಡಿ ವಕೀಲರ ಸಂಘಕ್ಕೆ ನ್ಯಾಯಮೂರ್ತಿ ರಾಜೇಶ್‌ ರೈ ಕೈರಂಗಳ ಭೇಟಿ

Suddi Udaya

ಅಗಳಿ ಪರಿಸರದಲ್ಲಿ ಚಿರತೆ ಓಡಾಟ

Suddi Udaya

ಉಜಿರೆ: ರತ್ನಮಾನಸ ಜೀವನ ಶಿಕ್ಷಣ ವಸತಿ ನಿಲಯದಲ್ಲಿ ಭೂಮಿ ಹುಣ್ಣಿಮೆ ಆಚರಣೆ

Suddi Udaya
error: Content is protected !!