38.6 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆ ರುಡ್‌ಸೆಟ್ ಸಂಸ್ಥೆಯ 2023-24 ನೇ ಸಾಲಿನ ವಾರ್ಷಿಕ ವರದಿ ಬಿಡುಗಡೆ

ಉಜಿರೆ ರುಡ್‌ಸೆಟ್ ಸಂಸ್ಥೆಯ2023-24 ನೇ ಸಾಲಿನ ವಾರ್ಷಿಕ ವರದಿಯನ್ನು ಧರ್ಮಸ್ಥಳದ ಧರ್ಮಾಧಿಕಾರಿಗಳು ಮತ್ತು ರುಡ್‌ಸೆಟ್ ಸಂಸ್ಥೆಗಳ ಅಧ್ಯಕ್ಷರು ಡಾ. ಡಿ ವೀರೇಂದ್ರ ಹೆಗ್ಗಡೆಯವರು ಬಿಡುಗಡೆ ಗೊಳಿಸಿದರು.

ಈ ಸಂದರ್ಭದಲ್ಲಿ ರುಡ್‌ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ಗಿರಿಧರ್ ಕಲ್ಲಾಪುರ, ಉಜಿರೆ ರುಡ್‌ಸೆಟ್ ಸಂಸ್ಥೆಯ ನಿರ್ದೇಶಕ ಎಂ ಸುರೇಶ್ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

2023-24ರ ಸಂಸ್ಥೆಯ ಎಲ್ಲಾ ಚಟುವಟಿಕೆಗಳನ್ನು ಗಮನಿಸಿ ಹೆಗ್ಗಡೆಯವರು ಮೆಚ್ಚುಗೆ ವ್ಯಕ್ತಪಡಿಸಿದರು. ಮುಂದಿನ ವರ್ಷದ ಗುರಿಯನ್ನು ತಲುಪಲು ಕೆಲವು ಮಾರ್ಗದರ್ಶನವನ್ನು ತಿಳಿಸಿದರು. ಸಂಸ್ಥೆಯು ಕಳೆದ ವರ್ಷದಲ್ಲಿ 762 ಶಿಭಿರಾರ್ಥಿಗಳಿಗೆ ವಿವಿಧ ತರಬೇತಿಗಳನ್ನು ಕೊಟ್ಟು ಅದರಲ್ಲಿ 577 ಯುವಕ/ಯುವತಿಯರು ಸ್ವಂತ ಉದ್ಯೋಗವನ್ನು ಪ್ರಾರಂಭಿಸಿದ್ದಾರೆ. ಹೊಸ ತರಬೇತಿಗಳಾಗಿ ಕೋಳಿ ಸಾಕಾಣಿಕೆ, ಎಂಬ್ರಾಯಿಡರಿ ಮತ್ತು ಫ್ಯಾಬ್ರಿಕ್ ಪೈಂಟಿಂಗ್ ಮತ್ತು ಮದುಮಗಳ ಶೃಂಗಾರ ಮೊದಲಾದ ತರಬೇತಿಗಳನ್ನು ಹಮ್ಮಿ ಕೊಂಡಿರುತ್ತೇವೆ. ಕಳೆದ ವರ್ಷದಲ್ಲಿ ಕರ್ನಾಟಕ ಸರಕಾರದ ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್ ರವರು ಮತ್ತು ಸಂತೋಷ್ ಕುಮಾರ್ ತಿವಾರಿ, ನಿರ್ದೇಶಕರು, ಗ್ರಾಮೀಣ ಸಚಿವಾಲಯ, ದೆಹಲಿ, ಸಂಸ್ಥೆಗೆ ಭೇಟಿ ನೀಡಿದ್ದರು. ಜೊತೆಗೆ ಬ್ಯಾಂಕಿನ ಅಧಿಕಾರಿಗಳು, ಉದ್ಯಮಿಗಳು ಮತ್ತು ಸರಕಾರಿ ಉನ್ನತ ಅಧಿಕಾರಿಗಳು ಸಂಸ್ಥೆಗೆ ಭೇಟಿ ನೀಡಿ ಸಂಸ್ಥೆಯ ಕಾರ್ಯ ವೈಖರಿಯನ್ನು ಶ್ಲಾಘಿಸಿದರು.

Related posts

ಸಂಯುಕ್ತ ಜಮಾಅತ್ ಖಾಝಿ ಸ್ವೀಕಾರ ವಿಚಾರ- ಬೆಳ್ತಂಗಡಿ ಸಮುದಾಯ ಮುಖಂಡರಿಂದ ಸಮಾಲೋಚನಾ ಸಭೆ: ಕಾಜೂರು‌ ತಂಙಳ್ ಅವರನ್ನು ಉತ್ತರಾಧಿಕಾರಿಯಾಗಿ ನೇಮಿಸುವಂತೆ ಆಗ್ರಹ

Suddi Udaya

ಜ.3 -4: ನಲಿಕೆ ಸಮಾಜ ಬಾಂಧವರ 5 ಓವರ್‌ಗಳ 7 ಜನರ ಹೊನಲು ಬೆಳಕಿನ ಸೂಪರ್ ಸಿಕ್ಸ್ ಅಂಡರ್ ಆರ್ಮ್ ಕ್ರಿಕೆಟ್‌ ಪಂದ್ಯಾಟ : ಮಾರಿಗುಡಿ ಫ್ರೆಂಡ್ಸ್ ಟ್ರೋಫಿ – 2026

Suddi Udaya

ಸೌಜನ್ಯ ಕೊಲೆ ಪ್ರಕರಣ ಮರು ತನಿಖೆ ನಡೆಸುವಂತೆ: ರೆಖ್ಯ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಗ್ರಾಮ ಸಮಿತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಮನವಿ

Suddi Udaya

ಸುಲ್ಕೇರಿಮೊಗ್ರು: ದರ್ಖಾಸು ಐರಿನ್ ಡಿಸೋಜರವರ ಮನೆ ಹಿಂಬದಿ ಗುಡ್ಡ ಕುಸಿತ: ಗ್ರಾ.ಪಂ. ಅಧಿಕಾರಿಗಳ ಭೇಟಿ

Suddi Udaya

ಕುಕ್ಕೇಡಿ ನೂತನ ಶಾಲಾಭಿವೃದ್ದಿ ಸಮಿತಿ ರಚನೆ ಅಧ್ಯಕ್ಷರಾಗಿ ಕೃಷ್ಣಪ್ಪ, ಉಪಾಧ್ಯಕ್ಷರಾಗಿ ವೇದಾವತಿ ಆಯ್ಕೆ

Suddi Udaya

ಗೀತೆ ಜತೆ ಸಾಹಿತ್ಯ ಸಾಂಗತ್ಯ: ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ ಬೆಳ್ತಂಗಡಿ ತಾಲೂಕು ಸಮಿತಿಯ ನೇತೃತ್ವದಲ್ಲಿ ಉಪನ್ಯಾಸ ಮಾಲಿಕೆಯ ನಾಲ್ಕನೆಯ ಅಧ್ಯಾಯ

Suddi Udaya
error: Content is protected !!