25.7 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಜ.3 -4: ನಲಿಕೆ ಸಮಾಜ ಬಾಂಧವರ 5 ಓವರ್‌ಗಳ 7 ಜನರ ಹೊನಲು ಬೆಳಕಿನ ಸೂಪರ್ ಸಿಕ್ಸ್ ಅಂಡರ್ ಆರ್ಮ್ ಕ್ರಿಕೆಟ್‌ ಪಂದ್ಯಾಟ : ಮಾರಿಗುಡಿ ಫ್ರೆಂಡ್ಸ್ ಟ್ರೋಫಿ – 2026

ಬೆಳ್ತಂಗಡಿ: ನಲಿಕೆ ಸಮಾಜ ಬಾಂಧವರ 5 ಓವರ್‌ಗಳ 7 ಜನರ ಹೊನಲು ಬೆಳಕಿನ ಸೂಪರ್ ಸಿಕ್ಸ್ ಅಂಡರ್ ಆರ್ಮ್ ಕ್ರಿಕೆಟ್‌ ಪಂದ್ಯಾಟ ಮಾರಿಗುಡಿ ಫ್ರೆಂಡ್ಸ್ ಟ್ರೋಫಿ – 2026 ಜ.3 ಹಾಗೂ ಜ.4ರಂದು ತಾಲೂಕು ಕ್ರೀಡಾಂಗಣ ಬೆಳ್ತಂಗಡಿಯಲ್ಲಿ ಜರುಗಲಿದೆ ಎಂದು ನಲಿಕೆ ಸಮಾಜ ಸೇವಾ ಸಂಘದ ಅಧ್ಯಕ್ಷ ಪ್ರಭಾಕರ ಶಾಂತಿಕೋಡಿ ಹೇಳಿದರು.


ಅವರು ಜ.1ರಂದು ಬೆಳ್ತಂಗಡಿ ಪ್ರೆ ಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜ.3ರಂದು‌ ಸಂಜೆ ಗಂಟೆ 7.00ಕ್ಕೆ ಉದ್ಘಾಟನೆಯನ್ನು ಶಾಸಕ ಹರೀಶ್ ಪೂಂಜ ವಹಿಸಲಿದ್ದು, ಅಧ್ಯಕ್ಷತೆಯನ್ನು ಶಶಿ ಬಂಗಾಡಿ ದೈವ ನರ್ತಕರು ವಹಿಸಲಿದ್ದಾರೆ.

ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆಯನ್ನು ಸಭಾಧ್ಯಕ್ಷ ಯು. ಟಿ. ಖಾದರ್ ಫರೀದ್ , ಟ್ರೋಫಿ ಅನಾವರಣವನ್ನು ಕೆ. ಹರೀಶ್ ಕುಮಾರ್ ಅಧ್ಯಕ್ಷರು, ಮೆಸ್ಕಾಂ ನಿಗಮ ಮಂಗಳೂರು ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಕೆ. ಗಂಗಾಧರ ಗೌಡ, ಕರ್ನಾಟಕ ಸರ್ಕಾರ, ಶಶಿಧರ ಶೆಟ್ಟಿ ನವಶಕ್ತಿ ಉದ್ಯಮಿಗಳು ಬರೋಡ, ಕಿರಣ್‌ಚಂದ್ರ ಪುಷ್ಪಗಿರಿ ಧಾರ್ಮಿಕ ಮುಖಂಡರು, ಸುಮಂತ್ ಕುಮಾರ್ ಬಿ. ಜೈನ್ ಅಧ್ಯಕ್ಷರು, ಎಕ್ಸೆಲ್ ಸಮೂಹ ಶಿಕ್ಷಣ ಸಂಸ್ಥೆ, ಗುರುವಾಯನಕೆರೆ, ಸುಬ್ಬಾಪುರ್ ಮಠ ಪೊಲೀಸ್ ನಿರೀಕ್ಷಕರು, ಬೆಳ್ತಂಗಡಿ ಪೊಲೀಸ್ ಠಾಣೆ, ಪ್ರಭಾಕರ ಶಾಂತಿಕೋಡಿ ಅಧ್ಯಕ್ಷರು, ನಲಿಕೆಯವರ ಸಮಾಜ ಸೇವಾ ಸಂಘ ಬೆಳ್ತಂಗಡಿ, ಬಿ. ಎಸ್. ಸುಂದರ್ ಭಾರತೀಯ ತೈಲ ನಿಗಮ, ಮಂಗಳೂರು, ನವೀನ್ ನೆರಿಯ ಜಿಲ್ಲಾ ಕಾರ್ಯದರ್ಶಿ, ವಿಶ್ವ ಹಿಂದೂ ಪರಿಷತ್‌ ಪುತ್ತೂರು ಜಿಲ್ಲೆ, ಪ್ರಸಾದ್‌ ಶೆಟ್ಟಿ ಏಣಿಂಜೆ, ಅಧ್ಯಕ್ಷರು, ಪತ್ರಕರ್ತರ ಸಂಘ, ಬೆಳ್ತಂಗಡಿ, ಕರುಣಾಕರ ಬಂಗೇರ ಬೆಳ್ತಂಗಡಿ, ಗಣೇಶ್ ಕಕ್ಕಿಂಜೆ ಉದ್ಯಮಿಗಳು ಭಾಗವಹಿಸಲಿದ್ದಾರೆ.

ಜ.4ರಂದು ಬೆಳಿಗ್ಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ರಕ್ಷಿತ್ ಶಿವರಾಂ ಪ್ರಧಾನ ಕಾರ್ಯದರ್ಶಿ ಕೆ.ಪಿ.ಸಿ.ಸಿ. ಬೆಂಗಳೂರು, ಸಿದ್ದು ಪಾಣರ ದೈವ ನರ್ತಕರು, ರಮೇಶ್ ರೆಂಕೆದಗುತ್ತು ಸಂಚಾಲಕರು, ಡಿ.ಎಸ್.ಎಸ್. (ಅಂಬೇಡ್ಕ‌ರ್ ವಾದ) ಬೆಳ್ತಂಗಡಿ, ಪ್ರಭಾಕರ ಶಾಂತಿಕೋಡಿ ಅಧ್ಯಕ್ಷರು, ನಲಿಕೆಯವರ ಸಮಾಜ ಸೇವಾ ಸಂಘ ಬೆಳ್ತಂಗಡಿ, ಅಕ್ಬರ್ ಸಂಜಯನಗರ ಅಧ್ಯಕ್ಷರು, ಎಸ್.ಡಿ.ಪಿ.ಐ. ಕ್ಷೇತ್ರ ಸಮಿತಿ ಬೆಳ್ತಂಗಡಿ, ಶ್ಯಾಮ್ ಬೆಳ್ತಂಗಡಿ ಮಾಲಕರು , ಶಾಸ್ತ್ರ ಸೌಂಡ್ಸ್ ಬೆಳ್ತಂಗಡಿ, ವಸಂತ್ ಬಿ.ಕೆ. ಮೈಸೂರು ವಿಭಾಗೀಯ ಸಂಚಾಲಕರು, ಡಿ.ಎಸ್.ಎಸ್. (ಅಂಬೇಡ್ಕರ್ ವಾದ) ಬೆಳ್ತಂಗಡಿ, ಮೆಹಬೂಬ್ ಅಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ಕಾರ್ಮಿಕ ಘಟಕ ಬೆಳ್ತಂಗಡಿ (ನಗರ), ರಾಮು ಶಿಶಿಲ ಉಪಾಧ್ಯಕ್ಷರು, ನಲಿಕೆಯವರ ಸಮಾಜ ಸೇವಾ ಸಂಘ ಬೆಳ್ತಂಗಡಿ, ರವಿ ಮುಂಡತ್ತೋಡಿ ಉಜಿರೆ, ರಮೇಶ್ ಅಜ್ಜಿಬೆಟ್ಟು ಹಿರಿಯ ದೈವ ನರ್ತಕರು, ಶೀನ ಮೂಡುಶೆಡ್ಡೆ ಹಿರಿಯ ದೈವ ನರ್ತಕರು, ಯಶವಂತ್ ಎಸ್.ಡಿ.ಎಂ. ಕಾಲೇಜು ಉಜಿರೆ, ಸುಂದರ ಬಿರಾವ್ ಹಿರಿಯ ದೈವ ನರ್ತಕರು, ಆನಂದ ಬಿರಾವ್ ಹಿರಿಯ ದೈವ ನರ್ತಕರು ಭಾಗವಹಿಸಲಿರುವರು. ಒಟ್ಟು 26 ತಂಡಗಳು ಭಾಗವಹಿಸಲಿದ್ದು, ಪ್ರಥಮ ರೂ. 20 ಸಾವಿರ ನಗದು ಹಾಗೂ ಶ್ರೀ ಮಾರಿಗುಡಿ ಟ್ರೋಫಿ, ದ್ವಿತೀಯ ರೂ. 10 ಸಾವಿರ ನಗದು ಮತ್ತು ಶ್ರೀ ಮಾರಿಗುಡಿ ಟ್ರೋಫಿ, ತೃತೀಯ ರೂ. ಶ್ರೀ ಮಾರಿಗುಡಿ ಟ್ರೋಫಿ ಜೊತೆಗೆ ಬೆಸ್ಟ್ ಬೌಲರ್, ಬೆಸ್ಟ್ ಬ್ಯಾಟ್ಸ್ ಮ್ಯಾನ್, ಸವ್ಯಸಾಚಿ ಆಟಗಾರರನ್ನು ಗುರುತಿಸಲಾಗುವುದು ಎಂದು ತಿಳಿಸಿದರು.


ಪತ್ರಿಕಾಗೋಷ್ಠಿಯಲ್ಲಿ ಆಯೋಜಕರಾದ ಶಶಿ ಬಂಗಾಡಿ, ಶ್ಯಾಮ ಬೆಳ್ತಂಗಡಿ, ರಮೇಶ್ ಕೇಳ್ತಾಜೆ ಉಪಸ್ಥಿತರಿದ್ದರು.

Related posts

ಪುದುವೆಟ್ಟು ಹಿಂದೂ ಸೇವಾ ಸಮಿತಿ ವತಿಯಿಂದ ಲೋಕ ಕಲ್ಯಾಣಾರ್ಥವಾಗಿ 108 ತೆಂಗಿನಕಾಯಿ ಗಣಹೋಮ : ಶಾಸಕ ಹರೀಶ್ ಪೂಂಜ ಭಾಗಿ

Suddi Udaya

ಹತ್ಯಡ್ಕ: ದರ್ಭೇತಡ್ಕದಲ್ಲಿ ತೋಟಕ್ಕೆ ನುಗ್ಗಿದ ಕಾಡಾನೆ : ಅಪಾರ ಹಾನಿ

Suddi Udaya

ಶ್ರೀ ಕ್ಷೇತ್ರ ಗೆಜ್ಜೆಗಿರಿಗೆ ಮಡಂತ್ಯಾರು ಬಿಲ್ಲವ ಸಂಘದ ಗೌರವಾಧ್ಯಕ್ಷ ಯೋಗೀಶ್ ಪೂಜಾರಿ ಕಡ್ತಿಲ ಹಾಗೂ ಸದಸ್ಯರು ಭೇಟಿ

Suddi Udaya

ನಾವೂರಿನಿಂದ ಕುಮರಾಜೆ ರಸ್ತೆ ದುರಸ್ತಿಗೆ ಆಗ್ರಹಿಸಿ ಗ್ರಾಮ ಪಂಚಾಯಿತಿಗೆ ಎಸ್.ಡಿ.ಪಿ.ಐ ಮನವಿ

Suddi Udaya

ಪಟ್ರಮೆ ಗೆಳೆಯರ ಬಳಗದಿಂದ ಗಣೇಶ ಚತುರ್ಥಿ ಪ್ರಯುಕ್ತ ಅನಾರು ಶಾಲೆಯಲ್ಲಿ ಶ್ರಮದಾನ

Suddi Udaya

ಯಕ್ಷಭಾರತಿಯಿಂದ ಯಕ್ಷಗಾನ ಪ್ರದರ್ಶನ “ಇಂದ್ರಜಿತು ಕಾಳಗ”

Suddi Udaya
error: Content is protected !!