ಬೆಳ್ತಂಗಡಿ: ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಕಾನೂನಿಗೆ ಗೌರವ ಕೊಟ್ಟು ಪೊಲೀಸರು ಕೊಟ್ಟ ನೋಟೀಸನ್ನು ತೆಗೆದುಕೊಂಡಿದ್ದು ಅದಕ್ಕೆ ಐದು ದಿನಗಳ ಕಾಲವಕಾಶವನ್ನು ಕೇಳಿ ಉತ್ತರವನ್ನು ಕೊಟ್ಟಿದ್ದಾರೆ. ಇದನ್ನು ಮೀರಿ ಪೊಲೀಸರು ಅವರನ್ನು ಬಂಧಿಸಿದರೆ ಜಿಲ್ಲೆಯಾದ್ಯಂತ ಉಗ್ರ ಹೋರಾಟವನ್ನು ಮಾಡುತ್ತೇವೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಶಾಸಕ ಹರೀಶ್ ಪೂಂಜರ ಮನೆಗೆ ಭೇಟಿ ನೀಡಿದ ಸಂಸದ ಕಟೀಲ್ ಅವರು ಮಾತನಾಡಿ, ಶಾಸಕರು ಕಾನೂನಿಗೆ ಗೌರವ ಕೊಟ್ಟು ನೋಟೀಸು ತೆಗೆದುಕೊಂಡಿದ್ದಾರೆ. ಕಾನೂನಿಗೆ ಗೌರವ ಕೊಟ್ಟು ಪ್ರಕ್ರಿಯೆಯನ್ನು ಪೊಲೀಸರು ಮಾಡಬೇಕು, ಐದು ದಿನ ಕಾಲವಕಾಶವನ್ನು ಕೇಳಿದ್ದಾರೆ. ಶಾಸಕರ ಮೇಲೆ ಪೊಲೀಸರು ಒತ್ತಡ ಹಾಕಿ ಬಂಧಿಸಿದರೆ ಉಗ್ರ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದರು.
ಜನಪ್ರತಿನಿಧಿಗಳ ಮೇಲೆ ಕೇಸು ಹಾಕುವ ದ್ವೇಷದ ರಾಜಕಾರಣ ರಾಜ್ಯದಲ್ಲಿ ಸರಕಾರ ಮಾಡುತ್ತಿದೆ. ಶಾಸಕರನ್ನು ಮಟ್ಟ ಹಾಕಲು ಬಂಧಿಸಲು ಮುಂದಾಗಿದೆ ಉತ್ತರ ಕೊಡುತ್ತೇವೆ. ಜನಪ್ರತಿನಿಧಿಗಳ ಮೇಲೆ ಕೇಸು ಹಾಕುವ ದ್ವೇಷದ ರಾಜಕಾರಣ ಸರಕಾರ ಮಾಡುತ್ತಿದೆ. ಮಾಡಿದೆ. ಇದು ಸಂವಿಧಾನ ವಿರೋಧಿ ಕೆಲಸ. ಸಿದ್ದರಾಮಯ್ಯ ಮೇಲೆ ಕೇಸು ಆಗಿದೆ ಯಾರೂ ನೋಟಿಸು ನಿಡಿಲ್ಲ,ನನ್ನ ಮೇಲೆ ಮೂರು ಕೇಸು ಇತ್ತು ಯಾರೂ ನೋಟಿಸು ನೀಡಿಲ್ಲ, ನಿರಾಪರಾಧಿಗಳ ಮೇಲೆ ಈ ರೀತಿ ಕೇಸು ಹಾಕುವುದು ಸರಿಯಲ್ಲ, ರಾಜಕೀಯ ಪ್ರೇರಿತವಾಗಿ ಪೊಲೀಸರು ಬಂಧಿಸುವ ಕಾರ್ಯ ಮಾಡಬಾರದು ಎಂದು ತಿಳಿಸಿದರು. .