30.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿಪ್ರಮುಖ ಸುದ್ದಿಬೆಳ್ತಂಗಡಿ

ಶಾಸಕ ಹರೀಶ್ ಪೂಂಜರಿಗೆ ನೋಟಿಸ್ ನೀಡಿ, ಬಂಧನ ಕೈ ಬಿಟ್ಟು ಸಂಜೆ ಹಿಂದಿರುಗಿದ ಪೊಲೀಸರು; ರಾತ್ರಿ ಹೇಳಿಕೆ ನೀಡಲು ಬೆಳ್ತಂಗಡಿ ಠಾಣೆಗೆ ಬಂದ ಶಾಸಕ ಹರೀಶ್ ಪೂಂಜ

ಬೆಳ್ತಂಗಡಿ: ಮೇಲಂತ ಬೆಟ್ಟು ನಲ್ಲಿ ನಡೆದ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಬಿಜೆಪಿ ಮಂಡಲದ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಶಾಸಕ ಹರೀಶ್ ಪೂಂಜರ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿದ ಹಿನ್ನೆಲೆಯಲ್ಲಿ ಮೇ 21ರಂದು ಬೆಳಿಗ್ಗೆ ಪೊಲೀಸರು ಅವರನ್ನು ಬಂಧಿಸಲು ಹೋಗಿ, ಕಾರ್ಯಕರ್ತರ ಆಕ್ಷೇಪ, ವಕೀಲರುಗಳ ವಾದ ವಿವಾದಗಳ ಹೈಡ್ರಾಮಗಳು ಸಂಜೆಯವರೆಗೆ ನಡೆದು ಪೊಲೀಸರು ಶಾಸಕರ ಬಂಧನ ಕೈ ಬಿಟ್ಟು ನೋಟಿಸ್ ನೀಡಿ ಹಿಂತಿರುಗಿದ್ದು, ರಾತ್ರಿ ಶಾಸಕ ಹರೀಶ್ ಪೂಂಜ ಹೇಳಿಕೆ ನೀಡಲು ಬೆಳ್ತಂಗಡಿ ಠಾಣೆಗೆ ಆಗಮಿಸಿದ್ದಾರೆ.

ಮೇಲಂತಬೆಟ್ಟು ಗ್ರಾಮದಲ್ಲಿ ನಡೆದ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಆರೋಪಿಯಾಗಿರುವ ಶಶಿರಾಜ್ ಅವರನ್ನು ಪೊಲೀಸರು ಅವರನ್ನು ರಾತ್ರಿ ಸಮಯ ಬಂಧಿಸಿರುವುದನ್ನು ವಿರೋಧಿಸಿ ಶಾಸಕ ಹರೀಶ್ ಪೂಂಜ ಅವರು ತಡ ರಾತ್ರಿ ಬೆಳ್ತಂಗಡಿ ಠಾಣೆಯಲ್ಲಿ ಪ್ರತಿಭಟನೆ ಹಾಗೂ ಧರಣಿ ಸತ್ಯಾಗ್ರಹ ನಡೆಸಿದ್ದರು. ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದರೆಂದು ಶಾಸಕ ಹರೀಶ್ ಪೂಂಜರ ಮೇಲೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಮಾಯಕ ಶಶಿರಾಜ್ ಶೆಟ್ಟಿ ಬಂಧನ ಹಾಗೂ ಶಾಸಕರ ಮೇಲೆ ಹಾಕಿದ ಕೇಸ್ ಹಿಂಪಡೆಯಲು ಮೇ 20 ರಂದು ನಡೆದ ಪ್ರತಿಭಟನೆಯಲ್ಲಿ ಪೊಲೀಸ್ ಇಲಾಖೆಗೆ ಹಾಗೂ ಬೆಳ್ತಂಗಡಿ ಠಾಣಾ ಪೊಲೀಸ್ ನಿರೀಕ್ಷಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಮಾನ ಮಾಡಿ, ಡಿಜೆ ಹಳ್ಳಿ ಕೆಜೆ ಹಳ್ಳಿ ಪೊಲೀಸ್ ಠಾಣೆಗೆ ಆದಗತಿಯನ್ನು ಬೆಳ್ತಂಗಡಿ ಠಾಣೆಗೂ ಕಾಣಿಸುತ್ತೇನೆ ಎಂದು ಜೀವಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿ ಶಾಸಕ ಹರೀಶ್ ಪೂಂಜರ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಮತ್ತೊಂದ ಪ್ರಕರಣ ದಾಖಲಿಸಲಾಗಿದೆ. ಶಾಸಕ ಹರೀಶ್ ಪೂಂಜರ ಮೇಲೆ ಎರಡು ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಬೆಳ್ತಂಗಡಿ ಪೊಲೀಸರು ಶಾಸಕರ ಮನೆಗೆ ತೆರಳಿ ಮನೆಯಲ್ಲಿ ಇದ್ದ ಅವರನ್ನು ವಶಕ್ಕೆ ಪಡೆಯಲು ಮುಂದಾದರು.

ಈ ಸಂದರ್ಭ ಸುದ್ದಿ ತಿಳಿದು ತಾಲೂಕಿನಾದ್ಯಂತ ಭಾರಿ ಸಂಖ್ಯೆಯಲ್ಲಿ ಕಾರ್ಯಕರ್ತರು ಶಾಸಕರ ಮನೆಗೆ ಆಗಮಿಸಿ, ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿದರು. ಈ ಸಂದರ್ಭ ಶಾಸಕರ ಪರ ವಕೀಲರಾದ ಸುಬ್ರಹ್ಮಣ್ಯ ಅಗರ್ತ, ಶಂಭುಶರ್ಮ ಮಂಗಳೂರು ಮತ್ತು ಅಜೇಯ್ ಸುವರ್ಣ ಮಂಗಳೂರು ಯತೀಶ್ ಶೆಟ್ಟಿ, ಅನಿಲ್ ಕುಮಾರ್, ಉದಯ ಬಂದಾರು ಅವರು ಸ್ಥಳದಲ್ಲಿ ಉಪಸ್ಥಿತರಿದ್ದು. ಬಂಧನಕ್ಕೆ ಮೊದಲು ಆರೋಪಿಗೆ ನೋಟಿಸ್ ನೀಡಬೇಕು. ನೋಟಿಸ್ ಕೊಡದೆ ಬಂಧಿಸುವ ಹಾಗಿಲ್ಲ ಎಂದು ವಾದ ಮಾಡಿದ್ದರುಎರಡು ಕಡೆಯವರಿಂದ ವಾದ ವಿವಾದಗಳು ನಡೆಯಿತು. ಶಾಸಕರನ್ನು ವಿಚಾರಣೆಗಾಗಿ ಕರೆದೊಯ್ಯಲು ಬಂದಿರುವುದಾಗಿ ಪೊಲೀಸರು ಹೇಳಿದರೆ, ಯಾವುದೇ ನೋಟೀಸು ನೀಡದೆ ಕರೆದೊಯ್ಯಲು ಬಂದಿರುವುದಕ್ಕೆ ವಕೀಲರುಗಳು ಆಕ್ಷೇಪಿಸಿದರು. ಶಾಸಕರ ಮನೆಯಲ್ಲಿ ಕ್ಯಾ. ಬ್ರಜೇಶ್ ಚೌಟ, ಸಂಸದ ನಳಿನ್‌ಕುಮಾರ್ ಕಟೀಲ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಶಾಸಕರಾದ ವೇದವ್ಯಾಸ ಕಾಮತ್, ರಾಜೇಶ್ ನಾಯ್ಕ, ಉಮಾನಾಥ ಕೋಟ್ಯಾನ್, ಸಂಜೀವ ಮಠಂದೂರು, ಪ್ರತಾಪಸಿಂಹ ನಾಯಕ್, ಗಣೇಶ್ ಕಾರ್ಣಿಕ್, ಶ್ರೀನಿವಾಸ ರಾವ್, ಪ್ರಸಾದ್ ಕುಮಾರ್, ಕುಶಾಲಪ್ಪ ಗೌಡ, ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಶಾಸಕರ ಮನೆಯಲ್ಲಿ ವಿರೋಧ ಸೂಚಿಸಿದರು. ಬೆಳಗ್ಗಿನಿಂದ ಸಂಜೆಯವರೆಗೆ ಬಹಳಷ್ಟು ಹೈಡ್ರಾಮಗಳು ನಡೆಯಿತು. ವಾದ-ವಿವಾದಗಳ ನಡೆದು ಕೊನೆಗೆ ಪೊಲೀಸರು ಶಾಸಕರನ್ನು ಬಂಧನ ಕೈ ಬಿಟ್ಟು ನೋಟಿಸ್ ನೀಡಿ ಹಿಂತಿರುಗಿದರು. ಇದೀಗ ರಾತ್ರಿ ಶಾಸಕ ಹರೀಶ್ ಪೂಂಜ ಹೇಳಿಕೆ ನೀಡಲು ಬೆಳ್ತಂಗಡಿ ಠಾಣೆಗೆ ಆಗಮಿಸಿದ್ದಾರೆ. ಜೊತೆಗೆ ವಕೀಲರು ಹಾಗೂ ಪಕ್ಷದ ಪ್ರಮುಖ ನಾಯಕರು ಅವರ ಜೊತೆ ಇದ್ದಾರೆ.

Related posts

ಡಿ.30: ರೂ.1.62 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಪಡಂಗಡಿ ಪ್ರಾ.ಕೃ.ಪ.ಸ. ಸಂಘದ “ಸಮೃದ್ಧಿ” ಸಭಾಭವನ ಹಾಗೂ ಗೋದಾಮು ಕಟ್ಟಡ ಲೋಕಾರ್ಪಣೆ

Suddi Udaya

ಮುಂಡಾಜೆ ಯಂಗ್ ಚಾಲೆಂಜರ್ಸ್ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

Suddi Udaya

ಉಜಿರೆ : ಅಮರ ಕವಿ ವಾಲ್ಮೀಕಿ ವಿಶೇಷ ಉಪನ್ಯಾಸ

Suddi Udaya

ಲಾಯಿಲ: ಪ್ರಸನ್ನ ಆಯುರ್ವೇದ ಮತ್ತು ಆಸ್ಪತ್ರೆ ಕಾಲೇಜು ಹಾಗೂ ಪ್ರಸನ್ನ ನರ್ಸಿಂಗ್ ಕಾಲೇಜಿನ ಪದವಿ ಪ್ರದಾನ ಸಮಾರಂಭ

Suddi Udaya

ತಾಲೂಕು ಪ್ರೌಢಶಾಲಾ ಕಬಡ್ಡಿ ಬೆಳಾಲು ಎಸ್ ಡಿ ಎಂ ಶಾಲಾ ತಂಡ ಪ್ರಥಮ

Suddi Udaya

ಬೆಳ್ತಂಗಡಿ : ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕಂದಾಯ ಇಲಾಖೆ ಮತ್ತು ಬೆಳ್ತಂಗಡಿ ತಾ.ಪಂ. ಇವರ ಸಂಯುಕ್ತ ಆಶ್ರಯದಲ್ಲಿ ಕಾನೂನು ಅರಿವು ಕಾರ್ಯಕ್ರಮ

Suddi Udaya
error: Content is protected !!