ಬೆಳ್ತಂಗಡಿ: ಬೆಳ್ತಂಗಡಿ ವಕೀಲರ ಸಂಘದ ಸದಸ್ಯರೂ, ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ ಇವರ ವಿರುದ್ಧ ಬೆಳ್ತಂಗಡಿ ಪೋಲೀಸರು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿ, ಕಾನೂನು ಪ್ರಕಾರದ ಯಾವುದೇ ನೋಟೀಸನ್ನೂ ನೀಡದೆ ಬಂಧನಕ್ಕೆ ಮುಂದಾಗಿರುವುದನ್ನು ಬೆಳ್ತಂಗಡಿ ವಕೀಲರ ಸಂಘ ತೀವೃವಾಗಿ ಖಂಡಿಸಿದರು.
ವಕೀಲರೂ, ಜನಪ್ರತಿನಿಧಿಯೂ ಆಗಿರುವ ಹರೀಶ್ ಪೂಂಜಾರ ಸಂವಿಧಾನಾತ್ಮಕ ಹಕ್ಕುಗಳನ್ನು ಮೊಟಕುಗೊಳಿಸುವ ಪೊಲೀಸರ ಕ್ರಮ ಖಂಡನೀಯವಾಗಿದ್ದು ಪೋಲಿಸರು ಇಂತಹ ಕಾನೂನುಬಾಹಿರ ದಾರ್ಷ್ಟ್ಯದ ಕ್ರಮಗಳಿಗೆ ಮುಂದಾಗದೆ, ಸಂವಿಧಾನ ಮತ್ತು ಕಾನೂನಿಗೆ ಬದ್ಧವಾಗಿ ನಡೆಯಬೇಕೆಂದು ಈ ಮೂಲಕ ಆಗ್ರಹಿಸುತ್ತೇವೆ ಎಂದು ವಕೀಲರ ಸಂಘದ ಅಧ್ಯಕ್ಷ ವಸಂತ ಮರಕಡ ಪತ್ರಿಕಾ ಹೇಳೆಯಲ್ಲಿ ತಿಳಿಸಿದ್ದಾರೆ.