ಉಜಿರೆ: ಬೆಂಗಳೂರಿನಲ್ಲಿ ನಡೆದ ಪುರುಷ ಮತ್ತು ಮಹಿಳಾ ವಿಭಾಗದ ರಾಜ್ಯ ಮಟ್ಟದ 5ನೇ ಸೀನಿಯರ್ ನೆಟ್ ಬಾಲ್ ಚಾಂಪಿಯನ್ಶಿಪ್ ಪಂದ್ಯಾಟವು ಮೇ.19ರಂದು ನಡೆಯಿತು.

ಎಸ್ ಡಿ ಎಂ ಕಾಲೇಜಿನ 10 ವಿದ್ಯಾರ್ಥಿಗಳು, 1ಮಂಗಳೂರು ಬಿಬಿಎಂ ಕಾಲೇಜಿನ ವಿದ್ಯಾರ್ಥಿ,1 ಎಸ್ ಡಿ ಎಂ ಪೊಲಿಟೆಕ್ನಿಕಲ್ ವಿದ್ಯಾರ್ಥಿ ದಕ್ಷಿಣ ಕನ್ನಡ ತಂಡವನ್ನು ಪ್ರತಿನಿಧಿಸಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಗಳಿಸಿರುತ್ತಾರೆ.

ಮಹಿಳಾ ವಿಭಾಗದಲ್ಲಿ 11 ವಿದ್ಯಾರ್ಥಿನಿಯರು ದಕ್ಷಿಣ ಕನ್ನಡ ತಂಡವನ್ನು ಪ್ರತಿನಿಧಿಸಿ, ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.
ಇವರಿಗೆ ಸುದೀನ ಇವರು ತರಬೇತಿಯನ್ನು ನೀಡಿರುತ್ತಾರೆ.