24.4 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬಳಂಜ: ಅವ್ಯಾಚವಾಗಿ ಬೈದು ಹಲ್ಲೆ ಆರೋಪ – ಬಳಂಜ ಪ್ರಕಾಶ್ ಶೆಟ್ಟಿಯವರಿಂದ‌ ಪೊಲೀಸರಿಗೆ ದೂರು

ಬಳಂಜ : ಹಿಂಬದಿಯಿಂದ ಬಂದು ತನ್ನನ್ನು ತಳ್ಳಿ, ಈ ಬಗ್ಗೆ ಪ್ರಶ್ನಿಸಿದಾಗ ಅವ್ಯಾಚವಾಗಿ ಬೈದು ಹಲ್ಲೆ ನಡೆಸಿರುವುದಾಗಿ ಆರೋಪಿಸಿ, ಬಳಂಜ ಗ್ರಾಮದ ಪ್ರಕಾಶ್ ಶೆಟ್ಟಿಯವರು ಅಶ್ವಿನ್ ಪೂಜಾರಿ ಎಂಬವರ ವಿರುದ್ಧ ವೇಣೂರು ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರಕಾಶ್‌ ಶೆಟ್ಟಿ ಹಾಗೂ ಅಶ್ವಿನ್‌ ಪೂಜಾರಿ ಎಂಬಾತನಿಗೂ ಎಲೆಕ್ಟ್ರೀಷಿಯನ್ ಕೆಲಸದ ವಿಚಾರವಾಗಿ ಮನಸ್ತಾಪ ಇದ್ದು, ಮೇ 20 ರಂದು ರಾತ್ರಿ ಪ್ರಕಾಶ್ ಶೆಟ್ಟಿಯವರು ಬಳೆಂಜ ಗ್ರಾಮದಲ್ಲಿ ತನ್ನ ಪರಿಚಯಸ್ಥರ ಮನೆಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಕ್ಕೆ ತೆರಳಿದ್ದು, ಅದೇ ಕಾರ್ಯಕ್ರಮಕ್ಕೆ ಆಶ್ವಿನ್ ತನ್ನ ತಾಯಿಯೊಂದಿಗೆ ಬಂದಿರುತ್ತಾರೆ. ಈ ವೇಳೆ ಪ್ರಶಾಂತ್ ಪೂಜಾರಿ ರವರು ಮನೆಯ ಅಂಗಳದಲ್ಲಿ ನಿಂತಿದ್ದ ಸಮಯ, ಅಶ್ವಿನ್ ಎಂಬಾತನು ಹಿಂಬದಿಯಿಂದ ಬಂದು ತಳ್ಳಿದ್ದು, ಈ ಬಗ್ಗೆ ಪ್ರಕಾಶ್ ಶೆಟ್ಟಿ ಪ್ರಶ್ನಿಸಿದಾಗ. ಆರೋಪಿಯು ಅವ್ಯಾಚವಾಗಿ ಬೈದು ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿರುತ್ತಾರೆ ಎಂದು ಪ್ರಕಾಶ್ ಶೆಟ್ಟಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.


ಹಲ್ಲೆಯಿಂದ ಗಾಯಗೊಂಡ ಪ್ರಕಾಶ್ ಶೆಟ್ಟಿಯವರು ಬೆಳ್ತಂಗಡಿಯ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿ ಈ ದೂರನ್ನು ನೀಡಿದ್ದು, ವೇಣೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ 48/2024 ಕಲಂ : 341, 323,504, 506 ಐ.ಪಿ.ಸಿ ರಂತೆ ಪ್ರಕರಣ ದಾಖಲಾಗಿರುತ್ತದೆ.

Related posts

ಬೆಳ್ತಂಗಡಿ: ತಾಲೂಕು ಮಟ್ಟದ ಒಕ್ಕೂಟ ಪದಾಧಿಕಾರಿಗಳ ಸಮಾವೇಶ

Suddi Udaya

ಉಜಿರೆ ಬೆನಕ ಆಸ್ಪತ್ರೆಯ ರಜತ ಸಂಭ್ರಮ ಹಾಗೂ ನೂತನ ವಿಸ್ತೃತ ಕಟ್ಟಡ ಉದ್ಘಾಟನೆ

Suddi Udaya

ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಮೇ.31 ಕೊನೆಯ ದಿನ

Suddi Udaya

ಶಿಬಾಜೆ: ರಸ್ತೆ ಬದಿ ನಿಂತಿದ್ದ ವ್ಯಕ್ತಿಗೆ ಪಿಕಪ್ ಡಿಕ್ಕಿ : ಚಿಕಿತ್ಸೆ ಫಲಕಾರಿಯಾಗದೆ ಸಾವು

Suddi Udaya

ಅವಕಾಶಗಳ ಆಗರ, ಸಾಧನೆಗಳ ಸಾಗರ, ಕರಾವಳಿ ಪ್ರವಾಸೋದ್ಯಮ: ಸಂಪತ್ ಬಿ. ಸುವರ್ಣ

Suddi Udaya

ಕಡಿರುದ್ಯಾವರ: ಕಾನರ್ಪ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ

Suddi Udaya
error: Content is protected !!