ಉಜಿರೆ: ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ಉಜಿರೆ,ರೋಟರಿ ಕ್ಲಬ್ ಬೆಳ್ತಂಗಡಿ, ಕ್ಯಾನ್ ಫಿನ್ ಹೋಮ್ಸ್ ಸಂಸ್ಥೆ ಬೆಂಗಳೂರು, ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘ ಬೆಳ್ತಂಗಡಿ ಇದರ ಆಶ್ರಯದಲ್ಲಿ ಉಜಿರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪುನರ್ ನಿರ್ಮಾಣ ಯಶೋನಮನ ಶೀರ್ಷಿಕೆಯಡಿ ಅಭಿವೃದ್ಧಿ ಕಾರ್ಯಗಳ ಹಸ್ತಾಂತರ ಕಾರ್ಯಕ್ರಮಗಳು ನಡೆಯಿತು.
ವಿಶೇಷವಾಗಿ ಕಾರ್ಯಕ್ರಮದಲ್ಲಿ ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ತಾಲೂಕಿನ 7 ಸರಕಾರಿ ಪ್ರೌಢ ಶಾಲೆಗಳ ಸಾಧಕ ವಿದ್ಯಾರ್ಥಿಗಳಿಗೆ ಹಾಗೂ ಶಾಲಾ ಮುಖ್ಯೋಪಾಧ್ಯಾಯರಿಗೆ ಬದುಕು ಕಟ್ಟೋಣ ಬನ್ನಿ ತಂಡದಿಂದ ಸನ್ಮಾನ ಕಾರ್ಯಕ್ರಮ ನಡೆಯಿತು.
617 ಅಂಕ ಗಳಿಸಿದ ಕಲ್ಮಂಜ ಶಾಲಾ ವಿದ್ಯಾರ್ಥಿ ತನುಶ್ರೀ,ಹೆಚ್.ಎಮ್ ಪೂರ್ಣಿಮಾ ಜೈನ್,612 ಅಂಕ ಗಳಿಸಿದ ಮಚ್ಚಿನದ ಜಿಯಾದ್,ಹೆಚ್.ಎಮ್ ಪ್ರಕಾಶ್ ನಾಯ್ಕ್, ಬಳಂಜ ಪ್ರೌಢ ಶಾಲಾ ಶರಣ್ಯ ಎಸ್ 609,ಮನ್ವಿತಾ ಪೂಜಾರಿ 604,ಮುಖ್ಯೋಪಾಧ್ಯಾಯಿನಿ ಸುಲೋಚನಾ, ಗುರುವಾಯನಕೆರೆ ಪ್ರೌಢ ಶಾಲೆಯ ವೈಶಾಲಿ 606 ಹಾಗೂ ಸಿಂದೂರ ಆರ್ ಅವರಿಗೆ 602 ಅಂಕ, ಹೆಚ್.ಎಮ್ ಪದ್ಮಲತಾ,ಕಾರ್ಯತ್ತಡ್ಕ ಶಾಲೆಯ ಮೇಘನಾರವರಿಗೆ 603,ಹೆಚ್.ಎಮ್ ಯಾಕೂಬ್ ಅವರನ್ನು ವೇದಿಕೆಯಲ್ಲಿದ್ದ ಗೌರವಾನ್ವಿತರು ಸನ್ಮಾನಿಸಿದರು.