24.7 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಶ್ರೀ ನಾಗ ರಕ್ತೇಶ್ವರಿ ಹಾಗೂ ಪರಿವಾರ ದೈವಗಳ ಸಾನಿಧ್ಯ ಕ್ಷೇತ್ರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ದೇಣಿಗೆ ಹಸ್ತಂತಾರ

ಗುರುವಾಯನಕೆರೆ: ಶ್ರೀ ನಾಗ ರಕ್ತೇಶ್ವರಿ ಹಾಗು ಪರಿವಾರ ದೈವಗಳ ಸಾನಿಧ್ಯ ಕ್ಷೇತ್ರ ಪಣೆಜಾಲು ವಿನ ಪ್ರತಿಷ್ಠ ಮಹೋತ್ಸವಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಡಾ.ಡಿ. ವೀರೇಂದ್ರ ಹೆಗ್ಗಡೆ ಯವರು ಮಂಜೂರು ಮಾಡಿದ ರೂ. 50000 ದೇಣಿಗೆ ಹಸ್ತಾಂತರ ವನ್ನು ಗುರುವಾಯನಕೆರೆ ಯೋಜನಾ ಕಚೇರಿ ವ್ಯಾಪ್ತಿಯ ಯೋಜನಾಧಿಕಾರಿ ದಯಾನಂದ ಪೂಜಾರಿ ಸಮಿತಿಯ ಪದಾಧಿಕಾರಿಗಳಿಗೆ ಹಸ್ತಾಂತರಿಸಿದರು.

ದೇಣಿಗೆ ಪಡೆದುಕೊಂಡು ಮಾತನಾಡಿದ ನಾಗ ರಕ್ತೇಶ್ವರಿ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ಆನಂದ ಶೆಟ್ಟಿಯವರು ಧಾರ್ಮಿಕ ಶ್ರದ್ಧಾ ಕೇಂದ್ರಗಳ ಅಭಿವೃದ್ಧಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಧರ್ಮಾಧಿಕಾರಿಗಳಾದ ಡಾ.ಡಿ . ವೀರೇಂದ್ರ ಹೆಗ್ಗಡೆಯವರು ನೀಡುವ ದೇಣಿಗೆಗಳಿಂದ ದೇವಸ್ಥಾನಗಳ ಜೀರ್ಣೋದ್ದಾರ ಕೆಲಸಗಳಿಗೆ ವೇಗ ಸಿಕ್ಕಿರುತ್ತದೆ ಹಾಗೂ ಜೀರ್ಣೋದ್ಧಾರದ ಕೆಲಸ ಕಾರ್ಯಗಳು ಅಚ್ಚುಕಟ್ಟಾಗಿ ಮಾಡಲು ಸಹಕಾರಿಯಾಗಿದೆ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ನೆರವು ಅನನ್ಯ ವಾಗಿದೆ ಎಂದು ಪ್ರಶಂಸಿದರು.

ಕೋಶಾಧಿಕಾರಿ ಸತೀಶ್ ಕುಲಾಲ್, ಸದಸ್ಯರಾದ ನೋಣಯ್ಯ ಗೌಡ, ಹರೀಶ್ ಗೌಡ, ಶಂಕರ ಸಪಲ್ಯ, ಸತೀಶ್ ಗೌಡ, ಒಕ್ಕೂಟದ ಅಧ್ಯಕ್ಷ ರಾದ ನಾಗೇಶ್ ಪೂಜಾರಿ, ವಲಯ ಮೇಲ್ವಿಚಾರಕ ರಾದ ಶ್ರೀಮತಿ ಯಶೋದಾ, ಸೇವಾ ಪ್ರತಿನಿಧಿ ಫೆಲ್ಸಿಟ ಉಪಸ್ಥಿತರಿದ್ದರು.

Related posts

ಡಿ.17: ನಾರಾವಿ ಎನ್ ಎಸ್ ಎಸ್ ವತಿಯಿಂದ ಬೃಹತ್ ರಕ್ತದಾನ ಶಿಬಿರ

Suddi Udaya

ಕಲ್ಮಂಜ ಗ್ರಾ.ಪಂ. ದ್ವಿತೀಯ ಸುತ್ತಿನ ಗ್ರಾಮಸಭೆ

Suddi Udaya

ಉಜಿರೆ: ಅನುಗ್ರಹದಲ್ಲಿ ಯು.ಕೆ.ಜಿ ಮಕ್ಕಳ ಪದವಿ ಪ್ರದಾನ ಸಮಾರಂಭ

Suddi Udaya

ಕಬಡ್ಡಿ ಪಂದ್ಯಾಟ: ಉರುವಾಲು ಶ್ರೀ ಭಾರತೀ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ತಂಡ ತಾಲೂಕು ಮಟ್ಟಕ್ಕೆ ಆಯ್ಕೆ

Suddi Udaya

ಬೆಳ್ತಂಗಡಿ ತಾಲೂಕು ಆಡಳಿತ ಸೌಧದಲ್ಲಿ ಕನಕದಾಸ ಜಯಂತಿ ಆಚರಣೆ

Suddi Udaya

ಉಜಿರೆ: ಶ್ರೀ ಧ.ಮಂ.ಪಾಲಿಟೆಕ್ನಿಕ್’ನಲ್ಲಿ ಸಿವಿಲ್ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಾರ್ಯಾಗಾರ

Suddi Udaya
error: Content is protected !!