ಬೆಳ್ತಂಗಡಿ : ಮೇಲಂತಬೆಟ್ಟು ಗ್ರಾಮದ ಮೂಡಲ ಎಂಬಲ್ಲಿ ನಡೆಯುತಿದ್ದ ಅಕ್ರಮ ಕಲ್ಲು ಗಣಿಗಾರಿಕೆ ಸ್ಥಳಕ್ಕೆ ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ ನೇತೃತ್ವದ ತಂಡ ಮೇ.18 ರಂದು ಸಂಜೆ ದಾಳಿ ಮಾಡಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಈ ಬಗ್ಗೆ ಬೆಳ್ತಂಗಡಿ ಪೊಲೀಸರು ಮತ್ತು ಬೆಳ್ತಂಗಡಿ ತಹಶೀಲ್ದಾರ್ ನೀಡಿದ ವರದಿಯ ಆಧಾರದಲ್ಲಿ ದಕ್ಷಿಣ ಕನ್ನಡ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರು ಮೇ.20 ರಂದು ಸ್ಥಳ ಮಹಜರು ಮಾಡಿ ಪ್ರಮೋದ್ ಗೌಡ ದಿಡುಪೆ, ಶಶಿರಾಜ್ ಶೆಟ್ಟಿ, ಸೂರಪ್ಪ ಪೂಜಾರಿ ಸೇರಿ ಮೂವರ ವಿರುದ್ಧ ಬೆಳ್ತಂಗಡಿ ನ್ಯಾಯಾಲಯದಲ್ಲಿ ಮೇ.23 ರಂದು ಪ್ರಕರಣ ದಾಖಲಿಸಿದ್ದಾರೆ.
ಆರೋಪಿಗಳು 1,571.7 ಮೆಟ್ರಿಕ್ ಟನ್ ಕಟ್ಟಡ ಕಲ್ಲು ಸ್ಪೋಟ ಮಾಡಿ ಸಾಗಾಟ ಮಾಡಿರುವುದಲ್ಲದೇ ಸುಮಾರು 65-70 ಮೆಟ್ರಿಕ್ ಟನ್ ಕಲ್ಲು ದಾಸ್ತಾನು ಮಾಡಿರುವುದು ಕಂಡು ಬಂದಿದ್ದು. ಇದರಿಂದ ಆರೋಪಿಗಳು ಅಕ್ರಮವಾಗಿ ಸರಕಾರದ ಅಮೂಲ್ಯ ಉಪಖನಿಜವಾದ ಕಲ್ಲನ್ನು ಯಾವುದೇ ಪರವಾನಿಗೆ ಇಲ್ಲದೆ ಹಾಗೂ ಸರಕಾರಕ್ಕೆ ರಾಜಸ್ವ ಸಂದಾಯ ಮಾಡದೆ ಗಣಿಗಾರಿಕೆ ಹಾಗೂ ಸಾಗಾಣಿಕೆ ಮಾಡುತ್ತಿರುವುದು ದೃಢಪಟ್ಟಿರುವುದರಿಂದ mines & minerals (development and regulation) act 1957) amendment 2015) 8 0 4,4(1A) क Karnataka minor mineral concession rules 1994 (Amendment Rules 2023) 8 2 ,42(1),43 ಮತ್ತು 44 ಗಳ ಶಿಕ್ಷೆಗೆ ಬದ್ಧರಾದ 3(1) ಅಪರಾಧವಾಗಿರುವುದು ದೃಢಪಟ್ಟಿರುತ್ತದೆ. MMDR act 1957 (Amendment 2015) 8 0 22 8 Cr.P.C200 ಅಡಿಯಲ್ಲಿ ದೂರು ನೀಡುವ ಅಧಿಕಾರ ಹೊಂದಿದ್ದು .ಅನಧಿಕೃತ ಕಟ್ಟಡ ಕಲ್ಲು ಗಣಿಗಾರಿಕೆ ವಿರುದ್ಧ ಕಾನೂನು ಕ್ರಮ ಜರುಗಿಸಿ ಶಿಕ್ಷೆ ನೀಡಬೇಕಾಗಿ ಮಾನ್ಯ ಪ್ರಧಾನ ಸಿವಿಲ್ ನ್ಯಾಯಧೀಶರು ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯ ಬೆಳ್ತಂಗಡಿಗೆ ಮೇ.23 ರಂದು ದಕ್ಷಿಣ ಕನ್ನಡ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಗಿರೀಶ್ ಮೋಹನ್ ಎಸ್.ಎನ್ ದೂರು ದಾಖಲಿಸಿದ್ದಾರೆ.