32.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಪಾರೆಂಕಿ ಶ್ರೀ ವಿದ್ಯಾಸರಸ್ವತಿ ಭಜನಾ ಮಂಡಳಿಯಿಂದ ಭಜಕ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

ಮಡಂತ್ಯಾರು: ಶ್ರೀ ವಿದ್ಯಾಸರಸ್ವತಿ ಭಜನಾ ಮಂಡಳಿ ಪಾರೆಂಕಿ ಇವರ ಸಾರಥ್ಯದಲ್ಲಿ ಭಜನಾ ತಂಡದ ಭಜಕ ವಿದ್ಯಾರ್ಥಿಗಳಿಗೆ 4ನೇ ವರ್ಷದ ಪುಸ್ತಕ ವಿತರಣಾ ಕಾರ್ಯಕ್ರಮವು ಇತ್ತೀಚೆಗೆ ಶ್ರೀ ಮಹಿಷಮರ್ಧಿನಿ ದೇವಸ್ಥಾನದ ಸಭಾ ಭವನದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ದೇವಳದ ಪ್ರಧಾನ ಅರ್ಚಕ ಟಿ.ವಿ. ಶ್ರೀಧರ ರಾವ್ ಪೇಜಾವರ ಮತ್ತು ದೇವಳದ ಮಾಜಿ ಆಡಳಿತ ಮೊಕ್ತೆಸರರಾದ ವಿಠಲ್ ಶೆಟ್ಟಿ ಮೂಡಾಯೂರು, ಭಜನಾ ತಂಡದ ಗೌರವಾಧ್ಯಕ್ಷರಾದ ಯೋಗೀಶ್ ಹೆಗ್ಡೆ, ಗೌರವ ಸಲಹೆಗಾರರಾದ ಪ್ರಶಾಂತ್ ಎಮ್, ಅಧ್ಯಕ್ಷರಾದ‌ ಪ್ರವೀಣ್ ಹೆಗ್ಡೆ, ಕಾರ್ಯದರ್ಶಿ ದೀರಜ್, ಹಾಗೂ ತಂಡದ ಮಾಜಿ ಅಧ್ಯಕ್ಷ ದಯಾನಂದ ಪೂಜಾರಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳು ಭಜನೆ, ವಿದ್ಯೆ, ಸಂಸ್ಕ್ರತಿ – ಸಂಸ್ಕಾರಗಳ ಬಗ್ಗೆ ಭಜಕರಿಗೆ ಮಾಹಿತಿ ಮತ್ತು ಸಲಹೆ ನೀಡಿದರು. ಭಜನಾ ತಂಡದ ಸರ್ವಸದಸ್ಯರ ಉಪಸ್ಥಿತಿಯಲ್ಲಿ ತಂಡದಲ್ಲಿರುವ 45ಕ್ಕೂ ಅಧಿಕ ಭಜಕ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಲಾಯಿತು.

Related posts

ರಾಜ್ಯ ಮಟ್ಟದ ಕ್ರೀಡಾಕೂಟ: ನಾವೂರು ಸರಕಾರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿ ಜೀವಿತ್ 4ನೇ ಸ್ಥಾನ

Suddi Udaya

ಉಜಿರೆ: ಕೋಡಿಬೈಲು ನಿವಾಸಿ ಪ್ರಭಾಕರ ಪಡುವೆಟ್ನಾಯ ನಿಧನ 

Suddi Udaya

ಎಸ್.ಡಿ.ಎಂ. ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನಲ್ಲಿ 29ನೇ ಪದವಿ ಪ್ರದಾನ ಸಮಾರಂಭ

Suddi Udaya

ವೇಣೂರು: ಶ್ರೀ ಬಾಹುಬಲಿ ಸಭಾಭವನದ ಉದ್ಘಾಟನೆ

Suddi Udaya

ಬಂಗ್ಲೆಗುಡ್ಡೆಯಲ್ಲಿ ಸಿಕ್ಕ ಏಳು ಅಸ್ಥಿಪಂಜರ ಎಫ್ಎಸ್ಎಲ್ ಗೆ ರವಾನೆ

Suddi Udaya

ಮುಮ್ತಾಜ್ ಇವರ ಚಿಕಿತ್ಸಾ ವೆಚ್ಚದ ಸಹಾಯಾರ್ಥವಾಗಿ ಲಕ್ಕಿ ಡ್ರಾ: ರೂ. 250/- ಗೆ ಬೆಳ್ತಂಗಡಿ ನಗರ ಪಂಚಾಯತ್ ವ್ಯಾಪ್ತಿಯ 5 ಸೆಂಟ್ಸ್ ಜಾಗ ಮತ್ತು ಮನೆ

Suddi Udaya
error: Content is protected !!