24 C
ಪುತ್ತೂರು, ಬೆಳ್ತಂಗಡಿ
April 3, 2025
ಕೃಷಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಬೆಳ್ತಂಗಡಿ: ಕೃಷಿಕರಿಗೆ ರಿಯಾಯಿತಿ ದರದಲ್ಲಿ ಭತ್ತದ ಬಿತ್ತನೆ ಬೀಜ ಹಾಗೂ ಹಸಿರೆಲೆ ಗೊಬ್ಬರ ಬೀಜ ದಾಸ್ತಾನು ಲಭ್ಯ

ಬೆಳ್ತಂಗಡಿ: ಪ್ರಸಕ್ತ 2024-25 ನೇ ಸಾಲಿನ ಮುಂಗಾರು ಹಂಗಾಮಿಗೆ ಬೆಳ್ತಂಗಡಿ ತಾಲೂಕಿನ ಭತ್ತ ಬೆಳೆಯುವ ಕೃಷಿಕರಿಗೆ ರಿಯಾಯಿತಿ ದರದಲ್ಲಿ ಭತ್ತದ ಬಿತ್ತನೆ ಬೀಜ ಹಾಗೂ ಹಸಿರೆಲೆ ಗೊಬ್ಬರ ಬೀಜ (Sunhemp) ದಾಸ್ತಾನು ಲಭ್ಯವಿದ್ದು, ಅಪೇಕ್ಷಿತ ಸಾಮಾನ್ಯ ವರ್ಗದ ರೈತರು ತಮ್ಮ ಭತ್ತದ ಕೃಷಿ ಜಮೀನಿನ ಆರ್.ಟಿ.ಸಿ./ಪಹಣಿ, ಆಧಾರ್ ಜೆರಾಕ್ಸ್ ಮತ್ತು ಬ್ಯಾಂಕ್ ಪಾಸ್ ಪುಸ್ತಕ ಪ್ರತಿಯನ್ನು ಹಾಗೂ ಪರಿಶಿಷ್ಠ ಜಾತಿ/ಪರಿಶಿಷ್ಠ ಪಂಗಡ ವರ್ಗದ ರೈತರು ತಮ್ಮ ಭತ್ತದ ಕೃಷಿ ಜಮೀನಿನ ಆರ್.ಟಿ.ಸಿ./ಪಹಣಿ, ಆಧಾರ್ ಜೆರಾಕ್ಸ್ ಬ್ಯಾಂಕ್ ಪಾಸ್ ಪುಸ್ತಕ ಮತ್ತು ಜಾತಿ ಪ್ರಮಾಣ ಪತ್ರದ ಜೆರಾಕ್ಸ್ ಪ್ರತಿಯನ್ನು ಸಲ್ಲಿಸಿ ಈ ಕೆಳಕಾಣಿಸಿದ ರಿಯಾಯಿತಿ ದರದಲ್ಲಿ ಭತ್ತದ ಬಿತ್ತನೆ ಬೀಜವನ್ನು ಪಡೆದುಕೊಳ್ಳಬಹುದಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕರು, ಬೆಳ್ತಂಗಡಿ ಇವರು ಬೆಳ್ತಂಗಡಿ ತಾಲೂಕಿನ ಭತ್ತ ಬೆಳೆಯುವ ಎಲ್ಲಾ ವರ್ಗದ ರೈತರಿಗೆ ಮಾಹಿತಿ ನೀಡಿರುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ . ರೈತ ಸಂಪರ್ಕ ಕೇಂದ್ರ, ಬೆಳ್ತಂಗಡಿ 9353840780, ರೈತ ಸಂಪರ್ಕ ಕೇಂದ್ರ, ಕೊಕ್ಕಡ 9632582015, . ರೈತ ಸಂಪರ್ಕ ಕೇಂದ್ರ, ವೇಣೂರು 9686230985, ಕೃಷಿ ಅಧಿಕಾರಿ, ಬೆಳ್ತಂಗಡಿ, ಕೊಕ್ಕಡ & ವೇಣೂರು – 8277931083, ಸಹಾಯಕ ಕೃಷಿ ನಿರ್ದೇಶಕರು, ಬೆಳ್ತಂಗಡಿ 8277931066

Related posts

ಪಡಂಗಡಿ ಸರಕಾರಿ ಪ್ರೌಢಶಾಲೆಯಲ್ಲಿ ಸಂವಿಧಾನ ದಿನಾಚರಣೆ

Suddi Udaya

ಬೆಳ್ತಂಗಡಿ ಶ್ರೀ ರಾಘವೇಂದ್ರ ಮಠದಲ್ಲಿ ಶಿರೂರು ಮಠದ ಪೀಠಾಧಿಪತಿಗಳಿಂದ ವಿಶೇಷ ಪ್ರವಚನ

Suddi Udaya

ಹೊಸಂಗಡಿ ಗ್ರಾ.ಪಂ. ನ ನೇತೃತ್ವದಲ್ಲಿ ಕುರ್ಲೋಟ್ಟು ಪರಿಸರದಲ್ಲಿ ಸ್ವಚ್ಛತಾ ಶ್ರಮದಾನ

Suddi Udaya

ಉಜಿರೆ ವಾಣಿಜ್ಯ ಮತ್ತು ಕೈಗಾರಿಕೋದ್ಯಮಿಗಳ ಸಂಘದ ವತಿಯಿಂದ ಕಲ್ಮಂಜ ಸ.ಹಿ.ಪ್ರಾ. ಶಾಲೆ ಪೈಂಟಿಂಗ್, ಕಾಮಗಾರಿ ವೀಕ್ಷಣೆ

Suddi Udaya

ಪೇರಲ್ದರಕಟ್ಟೆ ಜುಮಾ ಮಸೀದಿಯಲ್ಲಿ ರಮೇಶ್ ಗಿಂಡಾಡಿ ವತಿಯಿಂದ ಸೌಹಾರ್ದ ಇಫ್ತಾರ್ ಮೀಟ್

Suddi Udaya

ನಾವೂರು ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿಯಿಂದ ಸುಲ್ಯೋಡಿ ಶಾಲೆಯಲ್ಲಿ ಶ್ರಮದಾನ

Suddi Udaya
error: Content is protected !!