24.4 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಮಾಜಿ ಶಾಸಕ ಕೆ.ವಸಂತ ಬಂಗೇರರಿಗೆ ಸಾವಿರದ ನುಡಿ ನಮನ ಕಾಯ೯ಕ್ರಮ

ಬೆಳ್ತಂಗಡಿ: ಬೆಳ್ತಂಗಡಿಯ ಮಾಣಿಕ್ಯ.ನೇರ ನಡೆ-ನುಡಿಯ ಸ್ವಾಭಿಮಾನಿ ನಾಯಕ ಮಾಜಿ ಶಾಸಕ ಕೆ . ವಸಂತ ಬಂಗೇರರಿಗೆ ಸಾವಿರದ ನುಡಿ ನಮನಗಳು ಕಾಯ೯ಕ್ರಮ ಮೇ 25 ರಂದು ಕಿನ್ಯಮ್ಮಯಾನೆ ಗುಣವತಿ ಅಮ್ಮಸಭಾಂಗಣ ಜೈನ್‌ಪೇಟೆ, ಬೆಳ್ತಂಗಡಿಯಲ್ಲಿ ಜರುಗಿತು.

ಮಾಜಿ ವಿಧಾನಸಭಾ ಸ್ಪೀಕರ್ ರಮೇಶ್ ಕುಮಾರ್ ನುಡಿನಮನ ಸಲ್ಲಿಸಿ, ಬಂಗೇರ ನಿಧನ ಸುದ್ದಿ ತಿಳಿದು ಬಹಳಷ್ಟು ದು:ಖವಾಯಿತು. ಸಿಟ್ಟು ಇದ್ದವರ ಬದುಕು ಕಷ್ಟಕರವಾಗುತ್ತದೆ. ಲಂಚ ತೆಗೆದುಕೊಳ್ಳದವರಿಗೆ ಸಹಜವಾಗಿ ಸಿಟ್ಟು ಜಾಸ್ತಿ ಇರುತ್ತದೆ. ಬಂಗೇರ ಅವರು ಈ ರೀತಿಯ ವ್ಯಕ್ತಿ ಆಗಿದ್ದರು, ನಮ್ಮ ಹಿಂದೆ ಬರುವುದು ನಮ್ಮ ಕೀರ್ತಿ ಮಾತ್ರ ಎಂದರು.ಎಂದು ಹೇಳಿದರು. ‌ಅಳದಂಗಡಿ ಅರಮನೆ ತಿಮ್ಮಣ್ಣ ಅರಸರಾದ ಡಾ. ಪದ್ಮಪ್ರಸಾದ್ ಅಜಿಲ, ದಾರಿಮಿ, ಮಂಜೊಟ್ಟಿ ಚಚ್೯ನ ಧಮ೯ಗುರು ಫಾ. ಪ್ರವೀಣ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಸ್ವಾಗತಿಸಿ, ಬಂಗೇರ ಅವರು ತಮ್ಮ ಜೀವನವನ್ನು ಬಡವರಿಗಾಗಿ ಮುಡಿಪಾಗಿಟ್ಟವರು, ಅವರ ಅಂತಿಮ ದರ್ಶನಕ್ಕೆ ಬಂದ ಜನಸಾಗರ ಇದಕ್ಕೆ ಸಾಕ್ಷಿ‌ ಎಂದರು.

ಬಂಗೇರ ಅವರ ಪತ್ನಿ ಸುಜೀತಾ ಬಂಗೇರ, ಪುತ್ರಿಯರಾದ ಪ್ರಿತಿತಾ ಬಂಗೇರ, ಬಿನುತ ಬಂಗೇರ, ಅಳಿಯ ಧಮ೯ವಿಜೇತ್ , ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಸತೀಶ್ ಕೆ. ಬಂಗೇರ ಕಾಶಿಪಟ್ಣ, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಸಮಿತಿ ಅಧ್ಯಕ್ಷರ ಕೆ.ಎಮ್ ನಾಗೇಶ್ ಕುಮಾ‌ರ್ ಗೌಡ ಮಹಿಳಾ ಘಟಕದ ನಮಿತಾ ಪೂಜಾರಿ ಉಪಸ್ಥಿತರಿದ್ದರು. ಯಂಗ್ ಚಾಲೆಂಜರ್ಸ್ ಮುಂಡಾಜೆಯ ಸಂಚಾಲಕ ನಾಮದೇವ ರಾವ್, ಕಾಮಿ೯ಕ ಮುಖಂಡ ಬಿ.ಎಂ ಭಟ್, ಸಾಹಿತಿ ಅಮೃತ ಶೆಟ್ಟಿ ಆತ್ರಾಡಿ, ಪತ್ರಕತ೯ ಶಿಬಿ ಧಮ೯ಸ್ಥಳ, ನ್ಯಾಯವಾದಿ ಮನೋಹರ್ ಇಳಂತಿಲ ಮಾತನಾಡಿ ನುಡಿನಮನ ಸಲ್ಲಿಸಿದರು.

ಕಾಯ೯ಕ್ರಮದಲ್ಲಿ ಪ್ರಮುಖರಾದ ಧರಣೇಂದ್ರ ಕುಮಾರ್, ಪ್ರವೀಣ್ ಫೆರ್ನಾಂಡಿಸ್, ಜಯವಿಕ್ರಮ ಕಲ್ಲಾಪು, ಶೇಖರ ಕುಕ್ಕೇಡಿ, ರವೀಂದ್ರ ಪೂಜಾರಿ ಬಾಂದೊಟ್ಟು, ಚಿದಾನಂದ ಪೂಜಾರಿ ಎಲ್ದಡ್ಕ, ಪದ್ಮನಾಭ ಸಾಲ್ಯಾನ್, ಅಯ್ಯೂಬ್ ಡಿ.ಕೆ, ಅಬ್ದುಲ್ ರಜಾಕ್ ತೆಕ್ಕಾರು, ಜೀವಂಧರ್ ಕುಮಾರ್, ಉಷಾಶರತ್, ಪ್ರಭಾಕರ ಪೂಜಾರಿ ಧಮ೯ಸ್ಥಳ, ವಿನ್ಸೆಂಟ್ ಡಿ’ ಸೋಜ ಮಡಂತ್ಯಾರು ಮೊದಲಾದವರು ಉಪಸ್ಥಿತರಿದ್ದರು.

ಪದ್ಮನಾಭ ಸಾಲ್ಯಾನ್ ಮಾಲಾಡಿ ಕಾಯ೯ಕ್ರಮ ನಿರೂಪಿಸಿದರು.

Related posts

ಮಚ್ಚಿನ ಕೃಷಿ ಇಲಾಖೆ ಆಶ್ರಯದಲ್ಲಿ ತಾಲೂಕು ಮಟ್ಟದ ಜಲಾನಯನ ಯಾತ್ರೆ-ಜಾಥಾ , ರಂಗೋಲಿ , ತೆಂಗಿನಕಾಯಿ ಸಿಪ್ಪೆ ಸುಲಿಯುವ ಸ್ಪರ್ಧೆ – ಪ್ರತಿಜ್ಞಾವಿಧಿ ಬೋಧನೆ

Suddi Udaya

ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ ಉಚಿತ ಕಂಪ್ಯೂಟರ್‌ ಟ್ಯಾಲಿ ತರಬೇತಿ

Suddi Udaya

ಧರ್ಮಸ್ಥಳ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರ ಅವಿರೋಧ ಆಯ್ಕೆ

Suddi Udaya

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದುರ್ಗಾದೇವಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಅಂಗವಾಗಿ ಉಗ್ರಾಣ ಉದ್ಘಾಟನೆ

Suddi Udaya

ಪದ್ಮುಂಜ ನಿವಾಸಿ ಕುಶಾಲಪ್ಪ ನಲ್ಕೆ ನಿಧನ

Suddi Udaya

ಪುಂಜಾಲಕಟ್ಟೆ – ಚಾಮಾ೯ಡಿ‌ ಹೆದ್ದಾರಿ ಕಾಮಗಾರಿ ಗುತ್ತಿಗೆಯಲ್ಲಿ ಬದಲಾವಣೆ: ಮೊಗ್ರೋಡಿ ಕನ್ ಸ್ಟ್ರಕ್ಷನ್ ಗೆ ನೀಡುವ ಕುರಿತು ನಿಧಾ೯ರ

Suddi Udaya
error: Content is protected !!