23.6 C
ಪುತ್ತೂರು, ಬೆಳ್ತಂಗಡಿ
May 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕೊಯ್ಯೂರು ಕಾಂತಜೆ ಸಮೀಪ ತಡೆ ಗೋಡೆಗೆ ಕೆ.ಎಸ್.ಆರ್.ಟಿ.ಸಿ.ಬಸ್ ಡಿಕ್ಕಿ, ತಪ್ಪಿದ ದೊಡ್ಡ ಅನಾಹುತ

ಬೆಳ್ತಂಗಡಿ : ಕೊಯ್ಯೂರು ಸಮೀಪದ ಕಾಂತಾಜೆ ಎಂಬಲ್ಲಿ ತಿರುವಿನ ಸೇತುವೆ ತಡೆ ಗೋಡೆಗೆ ಸರಕಾರಿ ಬಸ್ ಡಿಕ್ಕಿಯಾದ ಘಟನೆ ಮೇ.26 ಬೆಳಿಗ್ಗೆ ನಡೆಯಿತು.

ಬಂದಾರುನಿಂದ ಹೊರಟು ಕೊಯ್ಯೂರು ಮಾರ್ಗವಾಗಿ ಬೆಳ್ತಂಗಡಿಗೆ ಹೋಗುವ ಸರಕಾರಿ ಬಸ್ಸು ನಲ್ಲಿ ಸುಮಾರು 25 ಕ್ಕೂ ಹೆಚ್ಚು ಜನರು ಪ್ರಯಾಣಿಕರಿದ್ದರು. ಚಾಲಕ ಅತೀ ವೇಗವಾಗಿ ಬಸ್ ಚಲಾಯಿಸುವ ವೇಳೆಗೆ ಕೊಯ್ಯೂರು ಸಮೀಪದ ಕಾಂತಾಜೆ ಕಡಿದಾದ ತಿರುವಿನಲ್ಲಿ ನಿಯಂತ್ರಣ ತಪ್ಪಿ ದೊಡ್ಡ ತೋಡಿನ ಸೇತುವೆಯ ತಡೆಗೋಡೆಗೆ ಡಿಕ್ಕಿಯಾಗಿ ಅಂದಾಜು 20 ಅಡಿ ಕೆಳಗೆ ಪ್ರತಾಪಕ್ಕೆ ಬೀಳುವುದು ಕೂದಲೇಲೆವ ಅಂತರದಲ್ಲಿ ತಪ್ಪಿತು. ಜೀವ ಹಾರಿ ಹೋದಂತೆ ಆಗಿದೆ ಎಂದು ಪ್ರಯಾಣಿಕರು ನಿಟ್ಟುಸಿರು ಬಿಟ್ಟು ಚಾಲಕನ ದುರ್ವರ್ತನೆಗೆ ಹಿಡಿಶಾಪ ಹಾಕಿದರು.

ಬಸ್ಸಿನ ಎದುರಿನ ಒಂದು ಭಾಗದಲ್ಲಿ ನುಜ್ಜು,ಗುಜ್ಜಾಗಿದೆ .ಪ್ರಯಾಣಿಕರು ಯಾವುದೇ ತೊಂದರೆ ಇಲ್ಲದೇ ಪಾರಾಗಿದ್ದಾರೆ.

Related posts

ಮಡಂತ್ಯಾರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಸಹಕಾರಿ ಅಭ್ಯರ್ಥಿಗಳ ಜಯ; ಹಗಲಿರುಳು ದುಡಿದ ಕಾರ್ಯಕರ್ತರಿಗೆ ಅಭಿನಂದನಾ ಕಾರ್ಯಕ್ರಮ

Suddi Udaya

ದ.ಕ ಜಿಲ್ಲಾ ಎಂಆರ್‌ಡಬ್ಲ್ಯೂ , ವಿಆರ್‌ಡಬ್ಲ್ಯೂ , ಯುಆರ್‌ಡಬ್ಲ್ಯೂ ವಿಕಲಚೇತನರ ಗೌರವಧನದ ಕಾರ್ಯಕರ್ತರ ಸಂಘ ರಚನೆ

Suddi Udaya

ಪೆರಿಂಜೆ ಎನ್ನೆನ್ನೆಸ್ ಶಿಬಿರಕ್ಕೆ ವಿಭಾಗಾಧಿಕಾರಿ ಭೇಟಿ

Suddi Udaya

ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಸಾಮೂಹಿಕ ವಿಷ್ಣುಸಹಸ್ರನಾಮ ಪಠಣ

Suddi Udaya

ಇಳಂತಿಲ ಗ್ರಾ.ಪಂ. ನಲ್ಲಿ ನೋಂದಾಯಿತ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರಿಗೆ ಹಾಗೂ ಅವಲಂಬಿತರಿಗೆ ಆರೋಗ್ಯ ತಪಾಸಣಾ ಶಿಬಿರ

Suddi Udaya

ಉಜಿರೆ: ಅನುಗ್ರಹ ಆಂ.ಮಾ. ಶಾಲೆಗೆ ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ

Suddi Udaya
error: Content is protected !!