ಬೆಳ್ತಂಗಡಿ: ಕಾಪಿನ ಬಾಗಿಲಿನಿಂದ ಸೌತಡ್ಕದ ವರೆಗೆ ಟ್ರಾಫಿಕ್ ಜಾಮ್ ಆಗಿದ್ದು, ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಇಂದು ಆದಿತ್ಯವಾರ ಆಗಿರುವುದರಿಂದ ಪ್ರವಾಸಿಗರು ಪುಣ್ಯ ಕ್ಷೇತ್ರಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು, ಕಾಪಿನಬಾಗಿಲು, ಸೌತಡ್ಕ ರಸ್ತೆಯಲ್ಲಿ ಕೊಕ್ಕಡದವರೆಗೆ ಪೂರ್ಣ ಟ್ರಾಫಿಕ್ ಜಾಮ್ ಆಗಿದೆ.

ಇದರಿಂದಾಗಿ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ದೂರದ ಊರಿಗೆ ಹೋಗುವವರು, ಬಾಡಿಗೆಗೆ ಹೋಗುವ ವಾಹನಗಳು ಗಂಟೆಗಟ್ಟಲೆ ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಸೌತಡ್ಕ ದ್ವಾರದ ಬಳಿ ಇಕ್ಕಾಟ್ಟಾದ ಸ್ಥಳ ಮತ್ತು ಇಲ್ಲಿ ಯಾವುದೇ ವ್ಯವಸ್ಥೆ ಇಲ್ಲದಿರುವುದರಿಂದ ಪ್ರತಿ ವಾರದ ಶನಿವಾರ , ಆದಿತ್ಯವಾರ ಇಲ್ಲಿ ಚಾಲಕರು ಸಂಕಷ್ಟ ಅನುಭವಿಸುತ್ತಿದ್ದಾರೆ.

