
ಶಿಬಾಜೆ :ಇತ್ತೀಚೆಗೆ ನಾಪತ್ತೆಯಾಗಿದ್ದ ಶಿಬಾಜೆ ಗ್ರಾಮದ ಐಂಗುಡ ನಿವಾಸಿ ವಾಸು ರಾಣ್ಯರ ಕೂ… ಶಬ್ದ ಕೇಳಿ ಸ್ಥಳೀಯರು ಮತ್ತು ಶೌರ್ಯ ವಿಪತ್ತು ನಿರ್ವಹಣಾ ತಂಡದವರು ಪುನಃ ಹುಡುಕಾಟ ನಡೆಸಿದಾಗ ಅವರ ಮನೆಯ ಮೇಲಿನ ಭಾಗದ ಭಂಡಿ ಹೊಳೆಕಾಡಿನ ಸುಮಾರು 2ಕಿಮೀ ದೂರದಲ್ಲಿ ಮೇ.26ರಂದು ಮದ್ಯಾಹ್ನ ಪತ್ತೆಯಾಗಿದ್ದಾರೆ.


ಕೂ…. ಕೂ… ಕೂಗಿನ ಶಬ್ದವನ್ನು ಸ್ಥಳೀಯರು ಗಮನಿಸಿ ಮೇ 26ರಂದು ಮುಂಜಾನೆಯಿಂದ ಹುಡುಕಾಟ ಆರಂಭಿಸಿದ್ದು ವಾಸು ರಾಣ್ಯರನ್ನು ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ ವಾಸು ರಾ ರವರನ್ನು ತಪಾಸಣೆಗಾಗಿ ಕೊಕ್ಕಡ ಸರಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಲಾಯಿತು.