September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕೊಯ್ಯೂರು ಕಾಂತಜೆ ಸಮೀಪ ತಡೆ ಗೋಡೆಗೆ ಕೆ.ಎಸ್.ಆರ್.ಟಿ.ಸಿ.ಬಸ್ ಡಿಕ್ಕಿ, ತಪ್ಪಿದ ದೊಡ್ಡ ಅನಾಹುತ

ಬೆಳ್ತಂಗಡಿ : ಕೊಯ್ಯೂರು ಸಮೀಪದ ಕಾಂತಾಜೆ ಎಂಬಲ್ಲಿ ತಿರುವಿನ ಸೇತುವೆ ತಡೆ ಗೋಡೆಗೆ ಸರಕಾರಿ ಬಸ್ ಡಿಕ್ಕಿಯಾದ ಘಟನೆ ಮೇ.26 ಬೆಳಿಗ್ಗೆ ನಡೆಯಿತು.

ಬಂದಾರುನಿಂದ ಹೊರಟು ಕೊಯ್ಯೂರು ಮಾರ್ಗವಾಗಿ ಬೆಳ್ತಂಗಡಿಗೆ ಹೋಗುವ ಸರಕಾರಿ ಬಸ್ಸು ನಲ್ಲಿ ಸುಮಾರು 25 ಕ್ಕೂ ಹೆಚ್ಚು ಜನರು ಪ್ರಯಾಣಿಕರಿದ್ದರು. ಚಾಲಕ ಅತೀ ವೇಗವಾಗಿ ಬಸ್ ಚಲಾಯಿಸುವ ವೇಳೆಗೆ ಕೊಯ್ಯೂರು ಸಮೀಪದ ಕಾಂತಾಜೆ ಕಡಿದಾದ ತಿರುವಿನಲ್ಲಿ ನಿಯಂತ್ರಣ ತಪ್ಪಿ ದೊಡ್ಡ ತೋಡಿನ ಸೇತುವೆಯ ತಡೆಗೋಡೆಗೆ ಡಿಕ್ಕಿಯಾಗಿ ಅಂದಾಜು 20 ಅಡಿ ಕೆಳಗೆ ಪ್ರತಾಪಕ್ಕೆ ಬೀಳುವುದು ಕೂದಲೇಲೆವ ಅಂತರದಲ್ಲಿ ತಪ್ಪಿತು. ಜೀವ ಹಾರಿ ಹೋದಂತೆ ಆಗಿದೆ ಎಂದು ಪ್ರಯಾಣಿಕರು ನಿಟ್ಟುಸಿರು ಬಿಟ್ಟು ಚಾಲಕನ ದುರ್ವರ್ತನೆಗೆ ಹಿಡಿಶಾಪ ಹಾಕಿದರು.

ಬಸ್ಸಿನ ಎದುರಿನ ಒಂದು ಭಾಗದಲ್ಲಿ ನುಜ್ಜು,ಗುಜ್ಜಾಗಿದೆ .ಪ್ರಯಾಣಿಕರು ಯಾವುದೇ ತೊಂದರೆ ಇಲ್ಲದೇ ಪಾರಾಗಿದ್ದಾರೆ.

Related posts

ಕೊಯ್ಯೂರು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ವಾರ್ಷಿಕ ಕ್ರೀಡಾಕೂಟ

Suddi Udaya

ಎಸ್ಸೆಸ್ಸೆಲ್ಸಿ ಪರೀಕ್ಷೆ ಮರುಮೌಲ್ಯಮಾಪನ: ಎಲ್.ಸಿ.ಆರ್ ಇಂಡಿಯನ್ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ದೀಪ್ತಿ ರಾಜ್ಯಕ್ಕೆ ಹತ್ತನೇ ಸ್ಥಾನ

Suddi Udaya

ನಯನರಮ್ಯ ಧರ್ಮಸ್ಥಳ ಲಕ್ಷದೀಪೋತ್ಸದಲ್ಲಿ ಸನಾತನ ಸಂಸ್ಥೆಯ ಸಹಭಾಗ : ಡಾ. ಡಿ. ವೀರೇಂದ್ರ ಹೆಗ್ಡೆಯವರಿಂದ ಸನಾತನದ ವಿಶೇಷ ಗ್ರಂಥ ಪ್ರದರ್ಶನಕ್ಕೆ ಚಾಲನೆ

Suddi Udaya

ಉಜಿರೆ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ವಾಲ್ಮೀಕಿ ಜಯಂತಿ ಆಚರಣೆ

Suddi Udaya

ಲಾಯಿಲ: ಹಾಡಹಗಲೇ ಕಾರಿನಲ್ಲಿಟ್ಟಿದ್ದ ನಗದು, ಚಿನ್ನಾಭರಣ ಕಳವು

Suddi Udaya

ಮಲವಂತಿಗೆ: ಉಮೇಶ್ ರವರಿಗೆ ಹಲ್ಲೆ, ಬೆದರಿಕೆ: ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya
error: Content is protected !!