ಉಜಿರೆ : ಮೇ 27ರಂದು ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಶಾಲೆ (ಸಿ.ಬಿ.ಎಸ್.ಇ) ಇಲ್ಲಿ ಶಿಕ್ಷಕಿಯರಿಗೆ ತರಗತಿ ಕೊಠಡಿಗಳ ಸೂಚನಾ ಫಲಕದ ನಾವಿನ್ಯತೆಯ ಕುರಿತು ಕಾರ್ಯಾಗಾರ ನಡೆಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಉಜಿರೆಯ ಎಸ್.ಡಿ.ಎಮ್ ಪದವಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಸುನಿಲ್ ಹೆಗ್ಡೆ ಇವರು ತರಗತಿ ಸೂಚನಾ ಫಲಕದ ನಾವಿನ್ಯತೆ, ವಿದ್ಯಾರ್ಥಿಗಳ ಸೃಜನಶೀಲತೆಯ ಬೆಳವಣಿಗೆಯ ಕುರಿತು ಶಿಕ್ಷಕಿಯರಿಗೆ ಮಾಹಿತಿ ನೀಡಿದರು.
ಕಾರ್ಯಾಗಾರದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಮನ್ಮೋಹನ್ ನಾಯ್ಕ್ ಕೆ.ಜಿ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಗಾರದಲ್ಲಿ ಶಿಕ್ಷಕ ಜಾರ್ಜ್ ನಿರೂಪಿಸಿ, ಶಿಕ್ಷಕಿ ಸವಿತಾ ವೇದಾಪ್ರಕಾಶ್ ವಂದಿಸಿದರು.