24.7 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬೆಳಾಲು: ವಿಶ್ವ ತಂಬಾಕು ವಿರೋಧಿ ದಿನಾಚರಣೆಯ ಅಂಗವಾಗಿ ಮಾಹಿತಿ ಕಾರ್ಯಕ್ರಮ

ಬೆಳಾಲು : ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ (ರಿ ) ಬೆಳ್ತಂಗಡಿ ಅಖಿಲ ಕರ್ನಾಟಕ ಜಿಲ್ಲಾ ಜನ ಜಾಗೃತಿ ವೇದಿಕೆ ಬೆಳ್ತಂಗಡಿ ಇದರ ಸಹಯೋಗದೊಂದಿಗೆ ವಿಶ್ವ ತಂಬಾಕು ವಿರೋಧಿ ದಿನಾಚರಣೆಯ ಕಾರ್ಯಕ್ರಮವನ್ನು ಬೆಳಾಲು ಶಾಲೆಯಲ್ಲಿ ಹಮ್ಮಿ ಕೊಳ್ಳಲಾಯಿತ್ತು.


ಕಾರ್ಯಕ್ರಮವನ್ನು ತಾಲೂಕು ಯೋಜನಾ ಕಚೇರಿ ಯೋಜನಾಧಿಕಾರಿಯವರು ಉದ್ಘಾಟಿಸಿ ಮಾತನಾಡಿ ಜನಜಾಗೃತಿ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿ ದುಶ್ಚಟಕ್ಕೆ ಬಲಿ ಆಗದೇ ನಮ್ಮ ಆರೋಗ್ಯವನ್ನು ನಾವು ಕಾಪಾಡಿಕೊಳ್ಳೋಣ, ಎಂದು ಮಾಹಿತಿ ನೀಡಿದರು.


ಸಂಪನ್ಮೂಲ ವ್ಯಕಿಯಾಗಿ ಆಗಮಿಸಿದ ಜನಜಾಗೃತಿ ವೇದಿಕೆಯ ಶಿಬಿರಧಿಕಾರಿ ದೇವಿ ಪ್ರಸಾದ್ ಕಾರ್ಯಕ್ರಮದ ಉದ್ದೇಶ, ಮದ್ಯ ಪಾನದಿಂದಾಗಿ ಸಾವಿನ ಸಂಖ್ಯೆ ಜಾಸ್ತಿ ಆಗುತ್ತಿದೆ, ಒಂದು ಕಾಲದಲ್ಲಿ ಮಧ್ಯಪಾನ ನಿಲ್ಲಿಸಲು ಹೋರಾಟ ಮಾಡುತ್ತಿದ್ದಾರೆ. ಯಾವುದೇ ಸಭೆ ಸಮಾರಂಭಗಳಲ್ಲಿ ಮದ್ಯಪಾನ ಮ್ಯೂಸಿಕ್, ಸೌಂಡ್, ಡಾನ್ಸ್ ಇದನ್ನೆಲ್ಲಾ ಕಡಿಮೆ ಮಾಡಿ ಉತ್ತಮವಾಗಿ ಭಜನೆ ಪೂಜಾ ಕಾರ್ಯಕ್ರಮಗಳನ್ನು ನಡೆಸುವುದರ ಮೂಲಕ ಕಾರ್ಯಕ್ರಮಗಳನ್ನು ನೆರವೇರಿಸೋಣ, ಗಾಂಜಾದಿಂದಾಗಿ ಮಕ್ಕಳಲ್ಲಿ ವಿದ್ಯಾಭ್ಯಾಸದಲ್ಲಿ ಕೊರತೆ ಆಹಾರ ಸೇವನೆ ಕಡಿಮೆ ಆಗುತ್ತಿದೆ. ದೇಹದಲ್ಲಿ ಹಲವಾರು ಬದಲಾವಣೆ ಆಗುತಿದ್ದೆ ಗಾಂಜಾ ಸಿಗದೇ ಇದ್ದಾಗ ಪೆಟ್ರೋಲ್, ಡೀಸೆಲ್, ಹಾಗೆ ಮುಂತಾದವುಗಳನ್ನು ಸೇವನೆ ಮಾಡುತ್ತಾರೆ ಇದು ಯಾವುದು ಸಿಗದೇ ಇದ್ದಾಗ ಜೀವನವನ್ನು ಅಂತ್ಯಗೊಳಿಸುವ ಹಂತಕ್ಕೆ ಬರುತಾರೆ ಎಂದು ಉದಾಹರಣೆಯೊಂದಿಗೆ ಸಮಗ್ರವಾಗಿ ಮಾಹಿತಿ ನೀಡಿದರು.


ಸಭೆಯ ಅಧ್ಯಕ್ಷತೆಯನ್ನು ಜನಜಾಗೃತಿ ವೇದಿಕೆಯ ತಾಲೂಕು ಮಾಜಿ ಅಧ್ಯಕ್ಷ ತಿಮ್ಮಪ್ಪ ಗೌಡ ಬೆಳಾಲು ಕಾರ್ಯಕ್ರಮದ ಬಗ್ಗೆ ಶುಭಹಾರೈಸಿದರು.


ಕಾರ್ಯಕ್ರಮದಲ್ಲಿ ಉಜಿರೆ ವಲಯದ ಜನಜಾಗೃತಿ ವೇದಿಕೆಯ ಪದಾಧಿಕಾರಿ ಯೋಗೀಶ್ ಗೌಡ, ಬೆಳಾಲು ಒಕ್ಕೂಟದ ಅಧ್ಯಕ್ಷ ರತ್ನಕಾರ, ಮಾಜಿ ಅಧ್ಯಕ್ಷ ಸಂಜೀವ ಗೌಡ, ಮಾಯಾ ಒಕ್ಕೂಟದ ಅಧ್ಯಕ್ಷ ಗಂಗಾಧರ ಸಾಲ್ಯಾನ್, ಗ್ರಾಮ ಸಮಿತಿ ಅಧ್ಯಕ್ಷ ಸೂರಪ್ಪ ಗೌಡ ಒಕ್ಕೂಟದ ಎಲ್ಲಾ ಪದಾಧಿಕಾರಿಯವರು, ಸಂಘದ ಅಧ್ಯಕ್ಷರು, ಕಾರ್ಯದರ್ಶಿ, ಸದಸ್ಯರು ಉಪಸ್ಥಿತರಿದ್ದರು.
ಉಜಿರೆ ವಲಯದ ಮೇಲ್ವಿಚಾರಕಿ ವನಿತಾ ಕಾರ್ಯಕ್ರಮ ನಿರೂಪಿಸಿ. ಬೆಳಾಲು ಸೇವಾಪ್ರತಿನಿಧಿ ತಾರಾನಾಥ ಸ್ವಾಗತಿಸಿ, ಮಾಯಾ ಸೇವಾಪ್ರತಿನಿಧಿ ಪ್ರಭಾ ಧನ್ಯವಾದವಿತ್ತರು.

Related posts

ಸೌತಡ್ಕ ದೇವಳದ ಆವರಣದಲ್ಲಿ ಗಿಡ ನಾಟಿ ಕಾರ್ಯಕ್ರಮ

Suddi Udaya

ದಿಡುಪೆ ಪಯ್ಯೆ ನಿವಾಸಿ ಸುಲೈಮಾನ್ ಪಯ್ಯೇ ನಿಧನ

Suddi Udaya

ಮಂಜೊಟ್ಟಿ: ಸ್ಟಾರ್ ಲೈನ್ ಆಂಗ್ಲ ಮಾಧ್ಯಮ ಶಾಲೆ

Suddi Udaya

ಆರಂಬೋಡಿ: ರಸ್ತೆಯ ಬದಿ ನಿಲ್ಲಿಸಿದ ಬೈಕ್ ಕಳವು

Suddi Udaya

ಕುವೆಟ್ಟು: ಚಲಿಸುತ್ತಿದ್ದ ಲಾರಿ ಮೇಲೆ ಬಿದ್ದ ವಿದ್ಯುತ್ ಕಂಬ: ಲಾರಿ ಚಾಲಕ ಹಾಗೂ ಎರಡು ಬೈಕ್ ಸವಾರರು ಪ್ರಾಣಾಪಾಯದಿಂದ ಪಾರು

Suddi Udaya

ಉಜಿರೆ: ಶ್ರೀ ಧ.ಮಂ. ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಭಿತ್ತಿ ಪತ್ರಿಕೆ ಅನಾವರಣ

Suddi Udaya
error: Content is protected !!