ಬೆಳ್ತಂಗಡಿ : ನ್ಯಾಯತರ್ಪು ಗ್ರಾಮದ ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ತೇರಾ ಬಾಕಿಮಾರು ಗದ್ದೆಯಲ್ಲಿ ನೇಜಿ ನಾಟಿ ಕಾರ್ಯಕ್ರಮ ಮೇ.27 ರಂದು ಜರುಗಿತು.
ಸುಮಾರು ಅಂದಾಜು 900 ವರ್ಷಗಳಿಗೂ ಹೆಚ್ಚಿನ ಇತಿಹಾಸ ಪ್ರಸಿದ್ಧ ದೇವಸ್ಥಾನವು ನ್ಯಾಯತರ್ಪು, ಕಳಿಯ ಹಾಗೂ ಓಡಿಲ್ನಾಳ ಗ್ರಾಮದ ಭಕ್ತಾದಿಗಳು ಆರಾಧನೆ ಮೂಲಕ ವಿವಿಧ ಕಾರ್ಯಕ್ರಮಗಳು ನಡೆಯುತ್ತ ಬರುತ್ತಿದೆ.
ಭತ್ತದ ಬೇಸಾಯ ಮರೆಮಾಚುತ್ತಿದ್ದು ಭಾದ್ರಪದ ಮಾಸದಲ್ಲಿ ದೇವಸ್ಥಾನಗಳಲ್ಲಿ ತೆನೆ ಕಟ್ಟುವುದು ಹಾಗೂ ಹೊಸ ಅಕ್ಕಿ ಊಟ ಆಚರಣೆ ನಡೆಯುತ್ತದೆ. ಈ ಸಂದರ್ಭದಲ್ಲಿ ತೆನೆ ಅಗತ್ಯವಾಗಿದೆ. ಮುಂದಿನ ದಿನಗಳಲ್ಲಿ ಭತ್ತದ ಬೇಸಾಯ ಕೃಷಿ ಬೆಳೆಸುವುದು ಅನಿವಾರ್ಯ ವಾಗಿದೆ ಎಂದು ಹಿರಿಯರು ಬೇಸರ ವ್ಯಕ್ತ ಪಡಿಸುತ್ತಿದ್ದಾರೆ.
ಕಳಿಯ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹಾಗೂ ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ವ್ಯವಸ್ಥಾಪನ ಸಮಿತಿ ಸದಸ್ಯರಾದ ವಸಂತ ಮಜಲು ನೇಜಿ ನಾಟಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ನಾಳ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಭುವನೇಶ್ ಜಿ, ಸದಸ್ಯರಾದ ಶ್ರೀಮತಿ ವಿಜಯ ಹೆಚ್ ಪ್ರಸಾದ್, ದಿನೇಶ್ ಗೌಡ ಕೆ, ರಾಜೇಶ್ ಶೆಟ್ಟ,ನಾಳ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಯಾದವ ಗೌಡ ಎಮ್,ಪ್ರಧಾನ ಕಾರ್ಯದರ್ಶಿ ರಾಜೇಶ್ ಪೆಂರ್ಬುಡ, ನಾಳ ದೇವಸ್ಥಾನದ ಪ್ರಬಂಧಕರಾದ ಗಿರೀಶ್ ಶೆಟ್ಟಿ , ನಾಳ ಭಜನಾ ಮಂಡಳಿ ಅಧ್ಯಕ್ಷ ಉಮೇಶ್ ಶೆಟ್ಟಿ , ಮಾತೃ ಮಂಡಳಿ ಅಧ್ಯಕ್ಷೆ ರೀತಾ ಚಂದ್ರಶೇಖರ್, ಪೂವಪ್ಪ ಶೆಟ್ಟಿ, ಗೋಪ್ಪಣ್ಣ ಗೌಡ, ಆಶಾ ಕಾರ್ಯಕರ್ತೆ ಶಶಿಕಲಾ, ವಸಂತ ಗೌಡ ಕೆ,ಶೇಖರ ಗೌಡ ಕೆ, ಜಗನಾಥ ಪೂಜಾರಿ, ವಿಮಲ ಕೆ,ರೂಪಾ ಕೆ, ಮಂಜಪ್ಪ ದೇವಾಡಿಗ, ಮೋಹಿನಿ, ವಿನೋಧ ಹಾಗೂ ಭಕ್ತಾದಿಗಳು ಭಾಗವಹಿಸಿದರು.
“ಕುಲ್ಲುಂಜ ಕೃಷಿಕ ಉಮಾನಾಥ ಶೆಟ್ಟಿ ಭತ್ತದಬೀಜ ಬಿತ್ತನೆ ಮಾಡಿ ನೇಜಿ ತಯಾರಿಸಿ ದೇವಸ್ಥಾನಕ್ಕೆ ಉಚಿತವಾಗಿ ನೀಡಿದರು.