30.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕೊಕ್ಕಡ ವಲಯದ ಹಳ್ಳಿoಗೇರಿಯಲ್ಲಿ ಪ್ರಗತಿ-ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟದ ತ್ರೈಮಾಸಿಕ ಸಭೆ

ಕೊಕ್ಕಡ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ,ಬಿ.ಸಿ ಟ್ರಸ್ಟ್(ರಿ) ಬೆಳ್ತಂಗಡಿ ತಾಲೂಕಿನ ಪ್ರಗತಿ ಬಂದು ಸ್ವ-ಸಹಾಯ ಸಂಘಗಳ ಒಕ್ಕೂಟ ಸೌತಡ್ಕದ ತ್ರೈಮಾಸಿಕ ಸಭೆಯು ಒಕ್ಕೂಟದ ಅಧ್ಯಕ್ಷರಾದ ಅಬ್ದುಲ್ ರಜಾಕ್ ರವರ ಅಧ್ಯಕ್ಷತೆಯಲ್ಲಿ ಹಳ್ಳಿoಗೇರಿ ಸಮುದಾಯ ಭವನದಲ್ಲಿ ನಡೆಯಿತು.

ತ್ರೈಮಾಸಿಕ ಸಭೆಯ ಜವಾಬ್ದಾರಿಯನ್ನು ಪ್ರಗತಿ ಸಂಘವು ವಹಿಸಿಕೊಂಡಿದ್ದು, ಜವಾಬ್ದಾರಿ ಸಂಘದ ಸಾಧನೆಯ ವರದಿಯನ್ನು ಜಯಲಕ್ಷ್ಮಿಯವರು ಮಂಡಿಸಿದರು. ಒಕ್ಕೂಟದ ಗತ ಸಭೆಯ ವರದಿಯನ್ನು ಅಶ್ವಿನಿರವರು ಮಂಡಿಸಿದರು, ತಾಲೂಕಿನ ಕೃಷಿ ಅಧಿಕಾರಿಯಾದ ರಾಮ್ ಕುಮಾರ್ ರವರು ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಹಾಗೂ ಕೃಷಿಯನ್ನು ಆಧುನಿಕವಾಗಿ ಅನುಷ್ಠಾನಿಸುವ ಬಗ್ಗೆ ಮಾಹಿತಿಯನ್ನು ನೀಡಿದರು. ವಲಯ ಮೇಲ್ವಿಚಾರಕರಾದ ಶ್ರೀಮತಿ ಭಾಗೀರಥಿಯವರು ಹಾಗೂ ಮಾಜಿ ಒಕ್ಕೂಟದ ಅಧ್ಯಕ್ಷರು, ಒಕ್ಕೂಟದ ಪದಾಧಿಕಾರಿಗಳು, ಜನಜಾಗೃತಿ ವೇದಿಕೆಯ ಸದಸ್ಯರು ದಾಖಲಾತಿ ಸಮಿತಿಯ ಸದಸ್ಯರು, ಎಲ್ಲಾ ಸಂಘದ ಸದಸ್ಯರು, ಸೇವಾಪ್ರತಿನಿಧಿ ಕುಸುಮ ಎಸ್ ರವರು ಉಪಸ್ಥಿತರಿದ್ದರು.

ಮಾಲತಿಯವರು ಸ್ವಾಗತಿಸಿ, ಧನ್ಯವಾದವಿತ್ತರು.

Related posts

ಬೆಳ್ತಂಗಡಿ ಸರಕಾರಿ ಪ್ರೌಢ ಶಾಲೆಯಲ್ಲಿ ಗಮಕ ವಾಚನ

Suddi Udaya

ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಖ್ಯಾತ ಚಲನಚಿತ್ರ ನಿರ್ಮಾಪಕ ಆರ್ ಶ್ರೀನಿವಾಸ್ ಭೇಟಿ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನೂತನವಾಗಿ ನಿರ್ಮಿಸಲಾದಕಲ್ಯಾಣ ಮಂಟಪಗಳ ಸಮುಚ್ಚಗಳ ಉದ್ಘಾಟನೆ

Suddi Udaya

ಧರ್ಮಸ್ಥಳ ಶಿವಶಕ್ತಿ ಅಯ್ಯಂಗಾರ್ ಬೇಕರಿ, ಉಜಿರೆಯ ಅಮರ್ಥ್ಯ ಬೇಕರಿಯಲ್ಲಿ ದೀಪಾವಳಿಯ ವಿಶೇಷ ಕೊಡುಗೆಗಳು

Suddi Udaya

ನಿಟ್ಟಡೆ: ತೋಟದ ಶೆಡ್‌ ನಲ್ಲಿ ತಂದಿರಿಸಿದ್ದ ರೂ.70 ಸಾವಿರ ಮೌಲ್ಯದ ಎರಡು ವಿದ್ಯುತ್ ಚಾಲಿತ ಪಂಪು ಕಳವು

Suddi Udaya

ಬೆಳ್ತಂಗಡಿ ಸಂತೆ ಮಾರುಕಟ್ಟೆಯ ವಿದ್ಯುತ್ ಕಂಬಕ್ಕೆ ಸುತ್ತುವರಿದ ಮರದ ಕೊಂಬೆಗಳ ತೆರವು

Suddi Udaya
error: Content is protected !!