April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ತಾಲೂಕು ಬಿಜೆಪಿ ಯುವಮೋರ್ಚಾದ ಅಧ್ಯಕ್ಷ ಶಶಿರಾಜ್ ಶೆಟ್ಟಿಯವರ ಅಜ್ಜಿ ಹೇಮಾವತಿ ಶೆಟ್ಟಿ ಹೃದಯಾಘಾತದಿಂದ ನಿಧನ

ಬೆಳ್ತಂಗಡಿ: ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಆರೋಪದಡಿ ಬಂಧಿತರಾಗಿರುವ ಮೇಲಂತಬೆಟ್ಟು ಗ್ರಾಮದ ಕಡಂಬು ನಿವಾಸಿ, ತಾಲೂಕು ಬಿಜೆಪಿ ಯುವಮೋರ್ಚಾದ ಅಧ್ಯಕ್ಷ ಶಶಿರಾಜ್ ಶೆಟ್ಟಿಯವರ ಅಜ್ಜಿ ಪೆರ್ನೆ ಮುಂಡೋವಿನಕೋಡಿಯ ಹೇಮಾವತಿ ಶೆಟ್ಟಿ (76ವ)ರವರು ಹೃದಯಾಘಾತದಿಂದ ಮೇ 26ರಂದು ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಶಶಿರಾಜ್ ಶೆಟ್ಟಿಯವರನ್ನು ಬಹುವಾಗಿ ಪ್ರೀತಿಸುತ್ತಿದ್ದ ಹೇಮಾವತಿ ಶೆಟ್ಟಿಯವರು ಕಳೆದ ಕೆಲವು ದಿನಗಳಿಂದ ತೀರಾ ಮಂಕಾಗಿದ್ದರು. ಪದೇ ಪದೇ ಶಶಿರಾಜ್ ಎಲ್ಲಿದ್ದಾನೆ ಎಂದು ಕೇಳುತ್ತಿದ್ದರು. ಅವನನ್ನು ನೋಡಬೇಕು ಎಂದು ಹೇಮಾವತಿ ಶೆಟ್ಟಿ ಹೇಳುತ್ತಿದ್ದರು. ಶಶಿರಾಜ್ ಶೆಟ್ಟಿಯವರನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ತಿಳಿದ ಬಳಿಕ ಹೇಮಾವತಿ ಶೆಟ್ಟಿ ತೀವ್ರವಾಗಿ ನೊಂದುಕೊಂಡಿದ್ದರು. ಅನಾರೋಗ್ಯದಿಂದಿದ್ದ ಹೇಮಾವತಿ ಶೆಟ್ಟಿಯವರು ಮೇ 26ರಂದು ದಿಢೀರ್ ಹೃದಯಾಘಾತಕ್ಕೀಡಾಗಿ ನಿಧನರಾದರು.

Related posts

ಧರ್ಮಸ್ಥಳ: ಶ್ರೀ. ಧ.ಮಂ. ಆಂ.ಮಾ. ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

Suddi Udaya

ಬೆಳ್ತಂಗಡಿ ಜಮ್ಮೀಯತುಲ್‌ ಫಲಾಹ್ ಘಟಕದ ವಾರ್ಷಿಕ ಮಹಾಸಭೆ

Suddi Udaya

ತೆಗೆದುಕೊಂಡ ಒಡವೆಗಳನ್ನು ಯಾಕೆ ಇನ್ನು ಕೊಟ್ಟಿಲ್ಲ ಎಂದು ಪ್ರಶ್ನಿಸಿದ ಮಹಿಳೆಗೆ ಕೈಯಿಂದ ಹೊಡೆದು ಕುತ್ತಿಗೆಯನ್ನು ಹಿಚುಕಿ ಜೀವಬೆದರಿಕೆ

Suddi Udaya

ವಿಧಿವಿಜ್ಞಾನ ಕ್ಷೇತ್ರ ಉದ್ಯೋಗಕ್ಕಾಗಿ ನಡೆಸಿದ ಫೋರೆನ್ಸಿಕ್‌ ಸೈನ್ಸ್‌ ಅರ್ಹತಾ ಪರೀಕ್ಷೆಯಲ್ಲಿ ಎಕ್ಸೆಲ್ ವಿದ್ಯಾರ್ಥಿಗಳಿಂದ ಅತ್ಯುತ್ತಮ ಸಾಧನೆ

Suddi Udaya

ಶಿರ್ಲಾಲು ಗ್ರಾಮ ಪಂಚಾಯತ್ ನಲ್ಲಿ ಸಂವಿಧಾನ ಜಾಗೃತಿ ಜಾಥಾ

Suddi Udaya

ಗೇರುಕಟ್ಟೆ ಫ್ರೌಡ ಶಾಲಾ ಹಿಂಬದಿ ಟವರ್ ಬುಡದಲ್ಲಿ ಬೆಂಕಿ ಜ್ವಾಲೆ: ದೊಡ್ಡ ಅನಾಹುತ ತಪ್ಪಿಸಿದ ಸ್ಥಳೀಯ ಯುವಕರ ತಂಡ

Suddi Udaya
error: Content is protected !!