April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಚಾರ್ಮಾಡಿ ಘಾಟಿಯಲ್ಲಿ ತಡೆಗೋಡೆಗೆ ಗುದ್ದಿದ ಖಾಸಗಿ ಬಸ್

ಚಾರ್ಮಾಡಿ : ಚಿಕ್ಕಮಗಳೂರು ವಿಭಾಗದ ಚಾರ್ಮಾಡಿ ಘಾಟಿಯಲ್ಲಿ ಖಾಸಗಿ ಬಸ್ ತಡೆಗೋಡೆಗೆ ಡಿಕ್ಕಿ ಹೊಡೆದ ಘಟನೆ ನಡೆದಿದೆ.

ಬಸ್ ಡಿಕ್ಕಿಯಾದ ಸ್ಥಳದಲ್ಲಿ ಆಳವಾದ ಕಂದಕವಿದ್ದು, ಪ್ರಯಾಣಿಕರು ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ. ಡಿಕ್ಕಿಯ ರಭಸಕ್ಕೆ ತಡೆಗೋಡೆಗೆ ಹಾನಿ ಉಂಟಾಗಿದ್ದು ತಡೆಗೋಡೆ ಕುಸಿದು ಬಿದ್ದಿದೆ. ಈ ಸ್ಥಳದಲ್ಲಿ ಬಣಕಲ್ ಪೊಲೀಸರು ತಾತ್ಕಾಲಿಕವಾಗಿ ಬ್ಯಾರಿಕೇಡ್ ಅಳವಡಿಸಿದ್ದಾರೆ .


ಬಸ್-ಕಾರು ಅಪಘಾತ:
ಚಾರ್ಮಾಡಿ ಘಾಟಿ ಹತ್ತನೇ ತಿರುವಿನ ಸಮೀಪ ಉಡುಪಿಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಮತ್ತು ಶಿವಮೊಗ್ಗ ಕಡೆ ಸಾಗುತ್ತಿದ್ದ ಕಾರು ಮುಖಾಮುಖಿ ಡಿಕ್ಕಿ ಹೊಡೆದಿದ್ದು ಕಾರಿನಲ್ಲಿದ್ದವರು ಅಲ್ಪಸ್ವಲ್ಪ ಗಾಯಗಳೊಂದಿಗೆ ಪ್ರಾಣಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.


ಘಾಟಿ ಪರಿಸರದಲ್ಲಿ ಮಂಜು ಕವಿದ ವಾತಾವರಣ ಹಾಗೂ ಮಳೆ ಇದ್ದು ರಸ್ತೆ, ರಸ್ತೆ ಬದಿ ಗಮನಕ್ಕೆ ಬರದೆ ಅಪಘಾತಗಳು ಉಂಟಾಗುತ್ತಿವೆ. ಚಾಲಕರು ಹೆಚ್ಚಿನ ಎಚ್ಚರಿಕೆ ವಹಿಸಿ ವಾಹನಗಳನ್ನು ಚಲಾಯಿಸಬೇಕಾದ ಅಗತ್ಯವಿದೆ.

Related posts

ತಾಲೂಕು ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ: ಜೈನ ಬಸದಿಗಳ ಅಭಿವೃದ್ಧಿಗಳ ಬಗ್ಗೆ ಚರ್ಚೆ

Suddi Udaya

ಚಾರ್ಮಾಡಿ ಘಾಟಿಯಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ಸಿಗೆ ಅಡ್ಡ ಬಂದ ಒಂಟಿ ಸಲಗ

Suddi Udaya

ಶಿಶಿಲ ಶಿವ ಸೇವಾ ಟ್ರಸ್ಟ್ ವತಿಯಿಂದ ಹೇವಾಜೆ ಶಾಲೆಯ ಆಯ್ದ ಮಕ್ಕಳಿಗೆ ಉಚಿತ ಬ್ಯಾಗ್, ಪುಸ್ತಕ ಮತ್ತು ಕಲಿಕಾ ಸಾಮಾಗ್ರಿ ವಿತರಣೆ

Suddi Udaya

ಉಜಿರೆ : ಪ್ರಗತಿ ಮಹಿಳಾ ಮಂಡಲ ನೇತೃತ್ವದಲ್ಲಿ ಚಿಲಿಪಿಲಿ 2024 ಬೇಸಿಗೆ ಶಿಬಿರದ ಸಮಾರೋಪ

Suddi Udaya

ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಮತ ಎಣಿಕೆ : ಹತ್ತನೇ ಸುತ್ತಿನಲ್ಲಿ 8442 ಮತಗಳ ಮೂಲಕ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಮುನ್ನಡೆ

Suddi Udaya
error: Content is protected !!