23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ತಾಲೂಕು ಬಿಜೆಪಿ ಯುವಮೋರ್ಚಾದ ಅಧ್ಯಕ್ಷ ಶಶಿರಾಜ್ ಶೆಟ್ಟಿಯವರ ಅಜ್ಜಿ ಹೇಮಾವತಿ ಶೆಟ್ಟಿ ಹೃದಯಾಘಾತದಿಂದ ನಿಧನ

ಬೆಳ್ತಂಗಡಿ: ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಆರೋಪದಡಿ ಬಂಧಿತರಾಗಿರುವ ಮೇಲಂತಬೆಟ್ಟು ಗ್ರಾಮದ ಕಡಂಬು ನಿವಾಸಿ, ತಾಲೂಕು ಬಿಜೆಪಿ ಯುವಮೋರ್ಚಾದ ಅಧ್ಯಕ್ಷ ಶಶಿರಾಜ್ ಶೆಟ್ಟಿಯವರ ಅಜ್ಜಿ ಪೆರ್ನೆ ಮುಂಡೋವಿನಕೋಡಿಯ ಹೇಮಾವತಿ ಶೆಟ್ಟಿ (76ವ)ರವರು ಹೃದಯಾಘಾತದಿಂದ ಮೇ 26ರಂದು ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಶಶಿರಾಜ್ ಶೆಟ್ಟಿಯವರನ್ನು ಬಹುವಾಗಿ ಪ್ರೀತಿಸುತ್ತಿದ್ದ ಹೇಮಾವತಿ ಶೆಟ್ಟಿಯವರು ಕಳೆದ ಕೆಲವು ದಿನಗಳಿಂದ ತೀರಾ ಮಂಕಾಗಿದ್ದರು. ಪದೇ ಪದೇ ಶಶಿರಾಜ್ ಎಲ್ಲಿದ್ದಾನೆ ಎಂದು ಕೇಳುತ್ತಿದ್ದರು. ಅವನನ್ನು ನೋಡಬೇಕು ಎಂದು ಹೇಮಾವತಿ ಶೆಟ್ಟಿ ಹೇಳುತ್ತಿದ್ದರು. ಶಶಿರಾಜ್ ಶೆಟ್ಟಿಯವರನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ತಿಳಿದ ಬಳಿಕ ಹೇಮಾವತಿ ಶೆಟ್ಟಿ ತೀವ್ರವಾಗಿ ನೊಂದುಕೊಂಡಿದ್ದರು. ಅನಾರೋಗ್ಯದಿಂದಿದ್ದ ಹೇಮಾವತಿ ಶೆಟ್ಟಿಯವರು ಮೇ 26ರಂದು ದಿಢೀರ್ ಹೃದಯಾಘಾತಕ್ಕೀಡಾಗಿ ನಿಧನರಾದರು.

Related posts

ಕರ್ನಾಟಕ ರಾಜ್ಯ ಗಸ್ತು ಅರಣ್ಯ ಪಾಲಕರ ಮತ್ತು ಅರಣ್ಯ ವೀಕ್ಷಕರ ಸಂಘ ಮಂಗಳೂರು ವಿಭಾಗದ ವತಿಯಿಂದ ಪರಿಸರ ಪ್ರೇಮಿ ಸಚಿನ್ ಭಿಡೆ ಮುಂಡಾಜೆ ರವರಿಗೆ ಸನ್ಮಾನ

Suddi Udaya

ಜೂ.21: “ಪ್ರಭು ಸ್ವೀಟ್ಸ್” 2ನೇ ಫ್ಯಾಕ್ಟರಿ ಔಟ್‌ಲೆಟ್ ಗುರುವಾಯನಕೆರೆಯಲ್ಲಿ ಶುಭಾರಂಭ

Suddi Udaya

ಬೆಳ್ತಂಗಡಿ ತಾಲೂಕು ಆಡಳಿತ ಸೌಧದಲ್ಲಿ ಶ್ರೀ ಕೃಷ್ಣ ಜಯಂತಿ ಆಚರಣೆ

Suddi Udaya

ಧರ್ಮಸ್ಥಳ ಶ್ರೀ ಮಂ.ಸ್ವಾ.ಅ.ಹಿ.ಪ್ರಾ. ಶಾಲೆಯಿಂದ ವೈದ್ಯಕೀಯ ಚಿಕಿತ್ಸಾ ನೆರವು

Suddi Udaya

ಮುಂಡಾಜೆ ನಶಾ ಮುಕ್ತ ಭಾರತ ಅಭಿಯಾನ ಕಾರ್ಯ ಕ್ರಮ

Suddi Udaya

ಅಭಯ ಹಾಸ್ಪಿಟಲ್ ನಲ್ಲಿ ನೇತ್ರ ಚಿಕಿತ್ಸಾ ಸೇವೆ ಪ್ರಾರಂಭ

Suddi Udaya
error: Content is protected !!