ಧರ್ಮಸ್ಥಳ: ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟ ಇದರ ಬೆಳ್ಳಿಹಬ್ಬ ಸಂಭ್ರಮ ಕಾರ್ಯಕ್ರಮವು ಮೇ 30ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಅಮೃತ ವರ್ಷಿಣಿ ಸಭಾಂಗಣದಲ್ಲಿ ಜರುಗಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ರಾಜ್ಯಸಭಾ ಸದಸ್ಯರು ರಾಜರ್ಷಿ ಪದ್ಮಭೂಷಣ ಡಾ.ವೀರೇಂದ್ರ ಹೆಗ್ಗಡೆಯವರು
ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು.
ಅಧ್ಯಕ್ಷತೆಯನ್ನು ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟ ಗೌರವಾಧ್ಯಕ್ಷೆ ಮಾತೃಶ್ರೀ ಹೇಮಾವತಿ ವೀ.ಹೆಗ್ಗಡೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಖ್ಯಾತ ಮಕ್ಕಳ ಹೃದ್ರೋಗ ತಜ್ಞೆ ಡಾ।। ವಿಜಯಲಕ್ಷ್ಮಿ ಬಾಳೇಕುಂದ್ರಿ, ಬೆಂಗಳೂರಿನ ಖ್ಯಾತ ಚಿತ್ರನಟಿ ಶ್ರೀಮತಿ ಪದ್ಮಜಾ ರಾವ್ ಭಾಗವಹಿಸಿದ್ದರು. ಸಮಾರಂಭದಲ್ಲಿ ರಜತ ಸಂಚಿಕೆ ಲೋಕಾರ್ಪಣೆಯನ್ನು ನೆರವೇರಿಸಿದರು.
ಸಮಾರಂಭದಲ್ಲಿ ಶ್ರೀಮತಿ ಸುಮನ್ ಪತ್ರಾವಳಿ ಬೆಳಗಾವಿ, ಶ್ರೀಮತಿ ವೀಣಾ ಶೆಟ್ಟಿ ಮೂಡುಬಿದಿರೆ, ಶ್ರೀಮತಿ ಸುಶೀಮಾ ಯಶವಂತ್ ಬೆಂಗಳೂರು, ಶ್ರೀಮತಿ ಛಾಯಾ ಹುಣಸೂರು, ಕುಮಾರಿ ಅನನ್ಯ, ಮೈಸೂರು ಇವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಧರ್ಮಸ್ಥಳದ ಡಿ. ಹರ್ಷೆಂದ್ರ ಕುಮಾರ್, ಶ್ರೀಮತಿ ಸುಪ್ರಿಯಾ ಹರ್ಷೇಂದ್ರ ಕುಮಾರ್, ಡಿ. ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಶ್ರೀಮತಿ ಶ್ರದ್ಧಾ ಅಮಿತ್, ಒಕ್ಕೂಟದ ನಿಕಟಪೂರ್ವ ಅಧ್ಯಕ್ಷರಾದ ಕೇಸರಿ ರತ್ನರಾಜ್, ಶೀಲಾ ಅನಂತರಾಜ್
ಹಾಗೂ ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು , ನಿರ್ದೇಶಕರು , ಸದಸ್ಯರು ಉಪಸ್ಥಿತರಿದ್ದರು.
ಅ
ಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಅಧ್ಯಕ್ಷೆ ಚ್ಚಶ್ರೀಮತಿ ಪದ್ಮನಿ ಪದ್ಮರಾಜ್ ಸ್ವಾಗತಿಸಿದರು, ವೈಜಯಂತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಮುದಾ ನಾಗಭೂಷಣ್ ನಿರೂಪಿಸಿದರು.