32.2 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಶೈಕ್ಷಣಿಕ ವರ್ಷದಲ್ಲಿ 8 ರಿಂದ 10ನೇ ತರಗತಿ ಮಕ್ಕಳಿಗೆ ತೆರೆದ ಪುಸ್ತಕ ಪರೀಕ್ಷೆ

ಬೆಳ್ತಂಗಡಿ: 2024-25 ರ ಶೈಕ್ಷಣಿಕ ವರ್ಷದಲ್ಲಿ 8 ರಿಂದ 10 ನೇ ತರಗತಿ ಮಕ್ಕಳಿಗೆ ತೆರೆದ ಪುಸ್ತಕ ಪರೀಕ್ಷೆ ನಡೆಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ತೀರ್ಮಾನಿಸಿದೆ.

ಈ ಕುರಿತು ಇಲಾಖೆ ತನ್ನ ಶೈಕ್ಷಣಿಕ ಮಾರ್ಗದರ್ಶಿಯಲ್ಲಿ ಉಲ್ಲೇಖ ಮಾಡಿದೆ. ಈ ವರ್ಷದಿಂದ ಸಿಬಿಎಸ್‌ಇ ಶಾಲೆಗಳಲ್ಲಿ 9 ರಿಂದ 12 ನೇ ತರಗತಿಯ ತನಕ ಪ್ರಾಯೋಗಿಕವಾಗಿ ತೆರೆದ ಪುಸ್ತಕ ಪರೀಕ್ಷೆ ನಡೆಸುವ ಪ್ರಸ್ತಾವನೆ ಚರ್ಚೆಯಲ್ಲಿರುವ ಕುರಿತು ವರದಿಯಾಗಿದೆ.

ವಿಷಯವಾರು 25 ಅಂಕಗಳಿಗೆ ಪ್ರಶ್ನೆ ಪತ್ರಿಕೆ ತಯಾರು ಮಾಡಿ, ಸಮಯ ನಿಗದಿಪಡಿಸಿ ವಿದ್ಯಾರ್ಥಿಗಳಿಗೆ ಪುಸ್ತಕ ನೋಡಿ ಉತ್ತರಿಸಲು ಅವಕಾಶ ನೀಡಬೇಕು ಎಂದು ಶೈಕ್ಷಣಿಕ ಮಾರ್ಗದರ್ಶಿಯಲ್ಲಿ ಹೈಸ್ಕೂಲ್‌ ಶಿಕ್ಷಕರಿಗೆ ಸೂಚನೆ ನೀಡಲಾಗಿದೆ. ವಿದ್ಯಾರ್ಥಿಗಳು ಈ ತೆರೆದ ಪುಸ್ತಕ ಪರೀಕ್ಷೆ ಇದ್ದರೆ ಪುಸ್ತಕ ಓದುವುದನ್ನು ಮಾಡಬೇಕು. ನೋಟ್‌ಬುಕ್‌, ಪಠ್ಯ, ಸಂಬಂಧಿತ ರೆಫರೆನ್ಸ್‌ ಬುಕ್‌ಗಳಲ್ಲಿ ಯಾವ ವಿಷಯ ಎಲ್ಲಿದೆ ಎಂಬುವುದರ ಜ್ಞಾನ ಇರಬೇಕು. ಇದು ಮಕ್ಕಳಲ್ಲಿ ಪಠ್ಯ ಓದುವ ಮನೋಭಾವವನ್ನು ಹೆಚ್ಚಿಸುತ್ತದೆ.

ಈ ಪರೀಕ್ಷೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ, ಸಂಕಲನಾತ್ಮಕ ಮೌಲ್ಯಾಂಕನ ಅಥವಾ ರೂಪಣಾತ್ಮಕ ಮೌಲ್ಯಾಂಕನ ಇದರ ಭಾಗವಲ್ಲ. ಇದು ಶೈಕ್ಷಣಿಕ ಚಟುವಟಿಕೆಯ ಒಂದು ಭಾಗ ಎಂದು ಹೇಳಲಾಗಿದೆ.

Related posts

ಗುರುವಾಯನಕೆರೆ ಪ್ರಾ.ಕೃ.ಪ. ಸಹಕಾರಿ ಸಂಘದ ಅಧ್ಯಕ್ಷರಾಗಿ ಮುಗುಳಿ ನಾರಾಯಣ ಭಟ್, ಉಪಾಧ್ಯಕ್ಷರಾಗಿ ವಡಿವೇಲು

Suddi Udaya

ಭಗವದ್ಗೀತೆ ಪಠಣ ಸ್ಪರ್ಧೆ: ಧರ್ಮಸ್ಥಳದ ಡಾ. ಶೌರ್ಯ ಎಸ್.ವಿ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ

Suddi Udaya

ಮೂಡಿಗೆರೆ ಜಾವಳಿ ಸಮೀಪ ತೋಟದ ಮನೆ ದರೋಡೆ ಪ್ರಕರಣ ; ಬೆಳ್ತಂಗಡಿಯ ಖಲಂದರ್ ಆಲಿಯಾಸ್ ಮೊಹಮ್ಮದ್ ಗೌಸ್, ಸೇರಿದಂತೆ ಐವರು ದರೋಡೆಕೋರರ ಬಂಧನ

Suddi Udaya

ಕಲ್ಮಂಜ: 18ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮ

Suddi Udaya

ಇಂದಬೆಟ್ಟು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೆಲ್ಕೋ ಇಂಡಿಯಾ ಫೌಂಡೇಶನ್ ವತಿಯಿಂದ ಸೌರ ವಿದ್ಯುತ್ ಘಟಕ ಹಸ್ತಾಂತರ

Suddi Udaya

ಕಳೆಂಜ ಸದಾಶಿವೇಶ್ವರ ದೇವಸ್ಥಾನದಲ್ಲಿ 6 ತೆಂಗಿನ ಕಾಯಿ ಗಣಹೋಮ ಮತ್ತು ಭತ್ತದ ತೆನೆ ವಿತರಣೆ

Suddi Udaya
error: Content is protected !!