April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಸರಕಾರಿ/ಖಾಸಗಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಸಿ.ಎ. ತರಗತಿಗಳಲ್ಲಿ ಭಾಗವಹಿಸಲು ಸುವರ್ಣಾವಕಾಶ: ಎಕ್ಸೆಲ್ ಕಾಲೇಜಿನಲ್ಲಿ ಸಿ.ಎ ಫೌಂಡೇಶನ್ ತರಗತಿಗಳು ಪ್ರತಿ ಆದಿತ್ಯವಾರ ನಡೆಯಲಿದೆ

ಬೆಳ್ತಂಗಡಿ:ವಾಣಿಜ್ಯ ವಿಭಾಗದಲ್ಲಿ ರಾಜ್ಯದಲ್ಲೇ ಪ್ರಪ್ರಥಮ ಇಂಟಗ್ರೇಟೆಡ್ ಪದವಿ ಪೂರ್ವ ಕಾಲೇಜಾಗಿ ಎಕ್ಸೆಲ್ ವಿದ್ಯಾಸಂಸ್ಥೆ ಹೊರಹೊಮ್ಮಿದೆ.


(ಬೆಳ್ತಂಗಡಿ) ಗುರುವಾಯನಕೆರೆ, ಇಲ್ಲಿನ ವಿದ್ಯಾಸಾಗರ ಕ್ಯಾಂಪಸ್ ನಲ್ಲಿ ರಾರಾಜಿಸುತ್ತಿರುವ ಎಕ್ಸೆಲ್ ಪದವಿ ಪೂರ್ವ ಕಾಲೇಜು ವಿಜ್ಞಾನ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆಗಳ ಫಲಿತಾಂಶದೊಂದಿಗೆ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿತ್ತು. ಇದೀಗ ಪ್ರಸ್ತುತ 2024- 25 ನೇ ಸಾಲಿನಲ್ಲಿ ಸಂಸ್ಥೆಯು ವಾಣಿಜ್ಯ ವಿಭಾಗದಲ್ಲಿ ಕಾರ್ಯಾರಂಭ ಮಾಡುತ್ತಿದೆ. ಇಂಟಗ್ರೇಟೆಡ್ ಕಲಿಕಾ ವ್ಯವಸ್ಥೆಯ ವಾಣಿಜ್ಯ ವಿಭಾಗವನ್ನು ಹೊಂದುತ್ತಿರುವುದು ರಾಜ್ಯದಲ್ಲೇ ಪ್ರಥಮ ಬಾರಿಗೆ ಎಂಬ ಹೆಗ್ಗಳಿಕೆಯನ್ನು ಪಡೆದುಕೊಳ್ಳುತ್ತಿದೆ.
ಜಿಲ್ಲೆಯ ನಾನಾ ಭಾಗಗಳಲ್ಲಿ ಯಾವುದೇ ಸರಕಾರಿ ಅಥವಾ ಖಾಸಗಿ ಕಾಲೇಜುಗಳಲ್ಲಿ ಪಿಯುಸಿ ಹಾಗೂ ಪದವಿ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗಾಗಿಯೇ ಪ್ರತಿ ಭಾನುವಾರ ಸಿ.ಎ. ಫೌಂಡೇಶನ್ ತರಗತಿಗಳನ್ನು ಆರಂಭಿಸಿ ವಿದ್ಯಾರ್ಥಿಗಳ ಸಾಧನೆಗೆ ಅವಕಾಶವನ್ನು ಒದಗಿಸುತ್ತಿದೆ.
ಈಗಾಗಲೇ ಭಾನುವಾರದ ತರಗತಿಗಳಿಗೆ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು ತರಗತಿಗಳನ್ನು ಎರಡು ಕಡೆಗಳಲ್ಲಿ ನಡೆಸಲಾಗುತ್ತದೆ. ಗುರುವಾಯನಕೆರೆ ಹಾಗೂ ಉಜಿರೆಯಲ್ಲಿ ಸಿ.ಎ ಫೌಂಡೇಶನ್ ತರಗತಿಗಳು ನಡೆಯಲಿದ್ದು ಸರಿ ಸುಮಾರು 15 ವರ್ಷಗಳ ಅನುಭವ ಹೊಂದಿರುವ ನುರಿತ ಅಧ್ಯಾಪಕ ವರ್ಗವನ್ನು ಹೊಂದಿಕೊಂಡಿದೆ.
ಪ್ರತಿ ಭಾನುವಾರ ಈ ತರಗತಿಗಳು ನಡೆಯುತ್ತಿದ್ದು, ಭಾಗವಹಿಸುವ ಮಕ್ಕಳಿಗೆ ನಿರ್ದಿಷ್ಟ ತರಬೇತಿಯನ್ನು ನೀಡಲಾಗುವುದಲ್ಲದೆ ಇದರೊಂದಿಗೆ ಅಣುಕು ಪರೀಕ್ಷೆಗಳು, ಮಾರ್ಗದರ್ಶನ, ತರಬೇತಿ ಹಾಗೂ ವೈಯಕ್ತಿಕ ಗಮನ ಹರಿಸಿ ವಿದ್ಯಾರ್ಥಿಯು ಸಿ.ಎ ಫೌಂಡೇಶನ್ ತರಗತಿಯಲ್ಲಿ ಉತ್ತೀರ್ಣನಾಗುವಲ್ಲಿ ಸಂಪೂರ್ಣ ಸಹಕಾರವಿರುತ್ತದೆ.

ಎಕ್ಸೆಲ್ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಸುಮಂತ್ ಕುಮಾರ್ ಜೈನ್ ಅವರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ಕಾಲೇಜು ಈ ವರೆಗೆ ವಿಜ್ಞಾನ ಕ್ಷೇತ್ರದಲ್ಲಿ ಮಕ್ಕಳಿಗೆ ಶಿಕ್ಷಣವನ್ನು ನೀಡುತ್ತಿದ್ದು, ಇದೀಗ ವಾಣಿಜ್ಯ ಕ್ಷೇತ್ರದಲ್ಲೂ ತನ್ನದೇ ಆದ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಂತಿದೆ. ಕೇವಲ ಪಠ್ಯ ಚಟುವಟಿಕೆಗಳನ್ನು ಮಾತ್ರವಲ್ಲದೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ತೆರೆದ ಅವಕಾಶವನ್ನು ಹೊಂದಿದೆ. ಇದರೊಂದಿಗೆ ಮಕ್ಕಳು ವಾಣಿಜ್ಯ ವಿಭಾದಲ್ಲಿ ಪರಿಣತಿ ಹೊದುವುದಕ್ಕಾಗಿ ಅನೇಕ ಪ್ರಾಯೋಗಿಕ ತರಗತಿಗಳು ಹಾಗೂ ಅಭ್ಯಾಸ ಕ್ರಮವನ್ನು ಜೋಡಿಸಿಕೊಂಡಿರುತ್ತದೆ.


ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಆರಂಭವಾಗುವ ವಾಣಿಜ್ಯ ವಿಭಾಗದ ನೇತೃತ್ವವನ್ನು ಡೀನ್ ಸಂತೋಷ್ ಕೆ.ಕೆ. ಹಾಗೂ ವಿಭಾಗ ಸಂಯೋಜಕರಾದ ಪ್ರಭಾಕರ ದೇವಾಡಿಗರವರು, ವ್ಯವಹಾರ ಶಾಸ್ತ್ರ ವಿಭಾಗದಲ್ಲಿ ಪ್ರಸನ್ನ ಮತ್ತು ಲೆಕ್ಕಶಾಸ್ತ್ರ ವಿಭಾಗದಲ್ಲಿ ರವಿಯವರು ಮುನ್ನಲೆಯಲ್ಲಿದ್ದಾರೆ. ಭಾನುವಾರದ ಸಿ.ಎ. ಫೌಂಡೇಶನ್ ತರಗತಿಗಳಿಗಾಗಿ ಈಗಾಗಲೇ ದಾಖಲಾತಿ ಪ್ರಾರಂಭವಾಗಿದ್ದು ಆಸಕ್ತರು ದೂರವಾಣಿ 9880899769, 9902284110 ಅಥವಾ ನೇರವಾಗಿ ಕಾಲೇಜು ಕಚೇರಿಯನ್ನು ಸಂಪರ್ಕಿಸಬಹುದೆಂದು ತಿಳಿಸಲಾಗಿದೆ.

Related posts

ಇಂದಬೆಟ್ಟು: ಕಲ್ಲಾಜೆ ನಿವಾಸಿ ವಸಂತ ಪೂಜಾರಿ ನೇಣು ಬಿಗಿದು ಆತ್ಮಹತ್ಯೆ

Suddi Udaya

ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ, ಉದ್ಯಮಿ, ಸಾಧಕರಾದ ಮೋಹನ್ ಕುಮಾರ್ ರವರಿಗೆ ಮಡಂತ್ಯಾರು ಜೇಸಿ ವರ್ಷದ ಅತ್ಯುತ್ತಮ ಪ್ರಶಸ್ತಿ

Suddi Udaya

ಗುರುವಾಯನಕೆರೆ : ಪಿಎಂ ಕುಸುಮ್ -ಸಿ ಯೋಜನೆಯಡಿ ಸೋಲಾರ್ ಪಾರ್ಕ್ ನಿರ್ಮಾಣಕ್ಕೆ ಯೋಜನೆ

Suddi Udaya

ಬಿಜೆಪಿ ಕಳೆಂಜ ಬೂತ್ ಸಮಿತಿಯ ಅಧ್ಯಕ್ಷ ಹಾಗೂ ಕಾರ್ಯದರ್ಶಿಗಳ ಆಯ್ಕೆ

Suddi Udaya

ಕರಾಟೆ ಪಂದ್ಯಾಟ: ಉಜಿರೆ ಎಸ್.ಡಿ.ಎಂ. ಶಾಲೆಯ ವಿದ್ಯಾರ್ಥಿ ಚರಣ್ ಜೈನ್ ಬಂಗಾಡಿ ಪ್ರಥಮ ಸ್ಥಾನ

Suddi Udaya

ಶಿಬಾಜೆ : ಅಜಿರಡ್ಕದಲ್ಲಿ ಕಾಡಾನೆ ದಾಳಿ : ಅಪಾರ ಕೃಷಿ ನಾಶ

Suddi Udaya
error: Content is protected !!