24.4 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿ

ದಿ| ವಸಂತ ಬಂಗೇರರ ಮನೆಗೆ ರಾಜ್ಯದ ಮಾಜಿ ಸಚಿವ ಪಿ.ಜಿ. ಆರ್ ಸಿಂಧ್ಯ ಭೇಟಿ

ಬೆಳ್ತಂಗಡಿ : ಕರ್ನಾಟಕ ಸರಕಾರದ ಮಾಜಿ ಸಾರಿಗೆ , ಗೃಹ, ಹಣಕಾಸು ,ಕೈಗಾರಿಕಾ , ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಸಚಿವರಾಗಿದ್ದ ಪಿ.ಜಿ.ಆರ್ ಸಿಂದ್ಯ ಬೆಳ್ತಂಗಡಿ ದಿವಂಗತ ಮಾಜಿ ಶಾಸಕ ಕೆ.ವಸಂತ ಬಂಗೇರ ಮನೆಗೆ ಮೇ.30 ರಂದು (ಇಂದು) ಸಂಜೆ ಭೇಟಿ ಮಾಡಿ ಮನೆಯವರಿಗೆ ಸಾಂತ್ವನ ಹೇಳಿದರು.

ಈ ಸಂದರ್ಭದಲ್ಲಿ ರಾಮಕೃಷ್ಣ ಹೆಗ್ಗಡೆ , ದೇವೆಗೌಡ , ಎಸ್.ಆರ್. ಮೊಮ್ಮಯಿ, ಜೆ.ಹೆಚ್.ಪಾಟೀಲ್ , ಧರಂ ಸಿಂಗ್ ಅವರ ಅವಧಿಯಲ್ಲಿ ಸಚಿವರಾಗಿದ್ದರು. 25 ವರ್ಷ ಶಾಸಕರಾಗಿ , 18 ವರ್ಷ ಮಂತ್ರಿಗಳಾಗಿ 1983 ರಿಂದ 2006 ವರೆಗೆ ಕೆಲಸ ಮಾಡಿದ್ದಾರೆ. ‌ಪ್ರಸಕ್ತ ಭಾರತ್ ಸ್ಕೌಟ್ಸ್ ಮತ್ತು ಗೈಟ್ಸ್ ಕರ್ನಾಟಕ ರಾಜ್ಯ ಸಂಸ್ಥೆಯ ಮುಖ್ಯ ಅಯುಕ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ‌.ದಿ.ಮಾಜಿ ಶಾಸಕ ಕೆ.ವಸಂತ ಬಂಗೇರ ಮತ್ತು ಸಿಂಥ್ಯ ಒಡನಾಟ ಉತ್ತಮವಾಗಿದ್ದು‌. ಜೊತೆಯಲ್ಲಿ ಸಂಯುಕ್ತ ಜನತಾದಳದಲ್ಲಿ ಶಾಸಕರಾಗಿ ಬಿಜೆಪಿ ಶಾಸಕ ದಿ.ಕೆ.ವಸಂತ ಬಂಗೇರರ ಜೊತೆಯಲ್ಲಿಯೇ ವಿಧಾನಸಭೆಗೆ ಪ್ರವೇಶ ಮಾಡಿದ್ದರು.

Related posts

ಔಷಧ ದಾನಕ್ಕಾಗಿ ಕ್ಷೇತ್ರದಿಂದ ವಾರ್ಷಿಕವಾಗಿ ರೂ.2ರಿಂದ 3 ಕೋಟಿ ರೂ. ಅನುದಾನ: ಡಾ.ಹೆಗ್ಗಡೆ

Suddi Udaya

ಕನ್ಯಾಡಿ ಯಕ್ಷಭಾರತಿಯಿಂದ ಮನೆ ಮನೆ ತಾಳಮದ್ದಳೆ ಚಾವಡಿಕೂಟ ಆರಂಭ

Suddi Udaya

ಉಜಿರೆ ಎಸ್.ಡಿ.ಎಮ್ ಆಂ.ಮಾ. ಶಾಲೆಯಲ್ಲಿ ಗಣಿತ ಪ್ರಯೋಗಾಲಯದ ಮಹತ್ವದ ಕುರಿತು ತರಬೇತಿ ಕಾರ್ಯಾಗಾರ

Suddi Udaya

ಅಂಡಿಂಜೆ: 31ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ: ಆರ್ಯಭಟ ಪ್ರಶಸ್ತಿ ಪುರಸ್ಕೃತ ದೇವೇಂದ್ರ ಹೆಗ್ಡೆ ಕೊಕ್ರಾಡಿ ರವರಿಗೆ ಸನ್ಮಾನ

Suddi Udaya

ಜ.29-ಫೆ.2 : ಬದ್ಯಾರು ಶ್ರೀ ಲೋಕನಾಥೇಶ್ವರ ದೇವರ ವಾರ್ಷಿಕ ಜಾತ್ರೋತ್ಸವ

Suddi Udaya

ಸೌಜನ್ಯ ಕೊಲೆ ಪ್ರಕರಣ ಮರು ತನಿಖೆ ನಡೆಸುವಂತೆ: ಮಲವಂತಿಗೆ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಗ್ರಾಮ ಸಮಿತಿಯಿಂದ ಮುಖ್ಯಮಂತ್ರಿಗೆ ಸಿದ್ಧರಾಮಯ್ಯರಿಗೆ ಮನವಿ

Suddi Udaya
error: Content is protected !!