April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಉಜಿರೆ ಹಳೆಪೇಟೆ ನವೀಕೃತ ಶಾಲೆ ಹಸ್ತಾಂತರ


ಉಜಿರೆ: ಬದುಕು ಕಟ್ಟೋಣ ತಂಡ ಮತ್ತು ಬೆಳ್ತಂಗಡಿ ರೋಟರಿ ಕ್ಲಬ್ ನೇತೃತ್ವದಲ್ಲಿ ತಾಲ್ಲೂಕು ಪತ್ರಕರ್ತರ  ಸಂಘ ಹಾಗೂ ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ಕೇವಲ ಎರಡೇ ತಿಂಗಳಿನಲ್ಲಿ ಶ್ರಮದಾನದ ಮೂಲಕ ಶಾಲೆಯನ್ನು ನವೀಕರಿಸಿದ್ದು ಮೇ 31 ರಂದು ಶಾಲೆಯಲ್ಲಿ ನಡೆದ ಪ್ರಾರಂಭೋತ್ಸವ ಸಮಾರಂಭದಲ್ಲಿ ಹಸ್ತಾಂತರಿಸಲಾಯಿತು.


ಬೆಳ್ತಂಗಡಿ ರೋಟರಿಕ್ಲಬ್ ಅಧ್ಯಕ್ಷ ಅನಂತ ಭಟ್ ಮಚ್ಚಿಮಲೆ ಶುಭ ಹಾರೈಸಿ, ಸಮಸ್ಯೆಯನ್ನು ಸೇವೆಯ ಅವಕಾಶವಾಗಿ ಪರಿವರ್ತಿಸಿ ಕೇವಲ ಎರಡು ತಿಂಗಳಿನಲ್ಲಿ ಶ್ರಮದಾನದ ಮೂಲಕ ಶಾಲಾ ಕಟ್ಟಡ ನವೀಕರಣಗೊಳಿಸಿರುವುದಕ್ಕೆ ಸಕ್ರಿಯ ಸಹಕಾರ ನೀಡಿದ ಎಲ್ಲರನ್ನೂ ಧನ್ಯತೆಯಿಂದ ಸ್ಮರಿಸಿದರು.


ಶಾಲೆಯಲ್ಲಿ ಕಲಿಕೆಗೆ ಪೂರಕ ವಾತಾವರಣವಿದ್ದಲ್ಲಿ ಕಲಿಯುವಿಕೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎಂದು ಹೇಳಿದರು.
ವಿದ್ಯೆ ಮತ್ತು ಬೆಳಕು ಇತರರಿಗೆ ಕೊಟ್ಟಷ್ಟು ಹೆಚ್ಚಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಚೈತ್ರೇಶ್ ಇಳಂತಿಲ ಶುಭ ಹಾರೈಸಿದರು.


ಶಾಲಾ ನವೀಕರಣ ಕಾರ್ಯದಲ್ಲಿ ಸಹಕರಿಸಿದ ರಜನೀಶ್, ಶಶಿ ಆಚಾರ್ ಬೆಳಾಲು, ಸುರೇಶ್, ಅಶೋಕ ನಾಯ್ಕ ಮತ್ತು ಮಧುಕರ ಅವರನ್ನು ಗೌರವಿಸಲಾಯಿತು.


ಬದುಕು ಕಟ್ಟೋಣ ತಂಡದ ಸಂಚಾಲಕ ಮೋಹನ ಕುಮಾರ್ ಮತ್ತು ರಾಜೇಶ್ ಪೈ, ಪುಷ್ಪರಾಜ ಶೆಟ್ಟಿ, ಕ್ಷೇತ್ರ ಸಮನ್ವಯಾಧಿಕಾರಿ ಮೋಹನ್, ಎಂಜಿನಿಯರ್ ವಿದ್ಯಾಕುಮಾರ್, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಆರತಿ ಉಪಸ್ಥಿತಿರಿದ್ದರು.
ಗುಲಾಬಿ ಹೂ ನೀಡಿ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು.


ಶಾಲಾ ಮುಖ್ಯೋಪಾಧ್ಯಾಯಿನಿ ಸಾವಿತ್ರಿ ಸ್ವಾಗತಿಸಿ, ಧನ್ಯವಾದವಿತ್ತರು.

Related posts

ಡಿ. 7 :ಪದ್ಮುಂಜದಲ್ಲಿ ಮ್ಯಾರಥಾನ್ ಯೋಗ ತರಬೇತಿ ಶಿಬಿರ

Suddi Udaya

ಬೆಳ್ತಂಗಡಿ ಎಸ್. ಡಿ .ಎಮ್ ಆಂಗ್ಲ ಮಾಧ್ಯಮ ಶಾಲಾ ಪ್ರಾರಂಭೋತ್ಸವ

Suddi Udaya

 ನಕ್ಸಲ್ ಚಳವಳಿಯ ಕೊನೆಯ ವ್ಯಕ್ತಿ ನಕ್ಸಲ್ ರವೀಂದ್ರ ಶರಣಾಗತಿ

Suddi Udaya

ಬೆಳ್ತಂಗಡಿ ಪಿ.ಎಲ್.ಡಿ ಬ್ಯಾಂಕಿನ ನಿವೃತ್ತ ಸಿಬ್ಬಂದಿ ನವೀನ್ ಕುಮಾರ್ ಕೆ.ಎನ್. ನಿಧನ

Suddi Udaya

ಕನ್ಯಾಡಿ : ಶ್ರೀ ರಾಮ ಕ್ಷೇತ್ರದ ಗುರುದೇವ ಮಠದಲ್ಲಿ ಆಯುಧ ಪೂಜೆ

Suddi Udaya

ಕೊಕ್ಕಡ: ಕಲಾಯಿ ನಿವಾಸಿ ತಿಮ್ಮಪ್ಪ ಗೌಡ ನಿಧನ

Suddi Udaya
error: Content is protected !!