28.6 C
ಪುತ್ತೂರು, ಬೆಳ್ತಂಗಡಿ
March 31, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ನಾರಾವಿ ಸರಕಾರಿ ಪ್ರೌಢ ಶಾಲೆಯಲ್ಲಿ ವಿಶ್ವ ತಂಬಾಕು ವಿರೋಧಿ ದಿನಾಚರಣೆ

ನಾರಾವಿ : ಶಾಲಾ ವಿದ್ಯಾರ್ಥಿಗಳ ದೆಸೆಯಲ್ಲಿಯೇ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಜೀವನದ ಬಗ್ಗೆ ಸ್ಪಷ್ಟ ದೂರ ದೃಷ್ಟಿಯನ್ನು ಇಟ್ಟು ಕೊಳ್ಳಬೇಕು ತಂಬಾಕು ಸೇವನೆ, ಮದ್ಯ ಸೇವನೆ, ಗಾಂಜಾ ಅಫೀಮು ಮೊದಲಾದ ದುಶ್ಚಟಗಳಿಗೆ ಯುವ ಸಮುದಾಯ ಬಲಿಯಾಗಬಾರದು ಎಂದು ಬೆಳ್ತಂಗಡಿ ತಾಲೂಕಿನ ಜನ ಜಾಗೃತಿ ವೇದಿಕೆಯ ನಿಕಟ ಪೂರ್ವ ಅಧ್ಯಕ್ಷ ಪಿ.ಕೆ ರಾಜು ಪೂಜಾರಿಯವರು ಕರೆ ನೀಡಿದರು.


ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ಗುರುವಾಯನಕೆರೆ, ಸರಕಾರಿ ಪ್ರೌಢ ಶಾಲೆ ನಾರಾವಿ, ಲಯನ್ಸ್ ಕ್ಲಬ್ ಬೆಳ್ತಂಗಡಿ, ಲಿಯೋ ಕ್ಲಬ್ ಬೆಳ್ತಂಗಡಿ, ಜನಜಾಗೃತಿ ವೇದಿಕೆ ನಾರಾವಿ ವಲಯ ಇವುಗಳ ಸಂಯುಕ್ತ ಆಶ್ರಯದಲ್ಲಿ ನಾರಾವಿ ಸರಕಾರಿ ಪ್ರೌಡ ಶಾಲೆಯಲ್ಲಿ ಆಯೋಜಿಸಲಾಗಿದ್ದ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ದುಶ್ಚಟ ದುರಭ್ಯಾಸಗಳನ್ನ ಮನ ಪರಿವರ್ತನೆಯ ಮೂಲಕ ಹೋಗಲಾಡಿಸುವ ಉದ್ದೇಶದಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಯವರು ಜನಜಾಗೃತಿ ವೇದಿಕೆಯನ್ನು ಕಟ್ಟಿದ್ದಾರೆ. ಇದರಿಂದಾಗಿ ಸಾಕಷ್ಟು ಸಮಾಜ ಪರಿವರ್ತನೆಯ ಕಾರ್ಯಕ್ರಮಗಳ ಮೂಲಕ ಸಾವಿರಾರು ಕುಟುಂಬಗಳಲ್ಲಿ ನೆಮ್ಮದಿಯ ಜೀವನ ನಡೆಸಲು ಸಾಧ್ಯ ಆಗಿದೆ ಎಂದರು.


ಬೀಡಿ ಸೇವನೆಯ ಮೂಲಕ ಟಿಬಿ ಕಾಯಿಲೆ ಬರುತ್ತದೆ ಬೀಡಿ ಸೇವನೆಯ ಸದಸ್ಯರ ಸಂಖ್ಯೆಯ ಪ್ರಮಾಣ ಕಡಿಮೆಯಾಗುತ್ತಿರುವುದು ಉತ್ತಮ ಬೆಳವಣಿಗೆ ಎಂದು ವಿಶ್ಲೇಷಿಸಿದರು. ಈ ಬೆಳವಣಿಗೆಗಳು ತಿಳವಳಿಕೆ ಹಾಗೂ ಜಾಗೃತಿಯ ಮೂಲಕ ಸಾದ್ಯ ಆಗಿದೆ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ತಾಲೂಕ ಜನಜಾಗೃತಿ ವೇದಿಕೆಯ ನಿಕಟ ಪೂರ್ವ ಅಧ್ಯಕ್ಷ ಕಿಶೋರ್ ಹೆಗ್ಡೆ ಮಾತನಾಡುತ್ತ ಹಿಂದಿನ ಕಾಲದಲ್ಲಿ ಮಕ್ಕಳಿಗಾಗಿ ತಂದೆ ತಾಯಿ ಆಸ್ತಿ ಮಾಡುತ್ತಿದ್ದರು ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡುವ ಮೂಲಕ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡುತ್ತಿದ್ದಾರೆ ಹಾಗಾಗೀ ಮಕ್ಕಳು ತಮ್ಮ ಬದುಕನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕೇ ಹೊರತು ದುರಭ್ಯಾಸಗಳಿಗೆ ಒಳಗಾಗಬಾರದು ಇಂಥಹ ಸಂಕಲ್ಪವನ್ನು ವಿದ್ಯಾರ್ಥಿ ದೆಸೆಯಲ್ಲಿಯೇ ವಿದ್ಯಾರ್ಥಿಗಳು ಮಾಡಬೇಕು ಎಂದು ವಿವರಿಸಿದರು.


ಪೂಜ್ಯರ ಮಾರ್ಗದರ್ಶನದಲ್ಲಿ ಜನಜಾಗೃತಿ ವೇದಿಕೆ ಸಮಾಜ ಕಂಟಕರಾಗಿದ್ದವರನ್ನು ಸಮಾಜ ಚಿಂತಕರಾಗಿ ಮಾಡುವ ಕೆಲಸವನ್ನು ಹಾಗು ವಿದ್ಯಾರ್ಥಿಗಳನ್ನು ಎಚ್ಚರಿಸುವ ಕೆಲಸವನ್ನೂ ಜನ ಜಾಗೃತಿ ವೇದಿಕೆ ಮಾಡುತ್ತಿದೆ ಎಂದು ವಿವರಿಸಿದರು.
ವೇದಿಕೆಯಲ್ಲಿ ಮುಖ್ಯೋಪಾದ್ಯಾಯರಾದ ಶ್ರೀಮತಿ ಸುಶೀಲಾ, ನಾರಾವಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಾಜವರ್ಮ ಜೈನ್, ಮಾಜಿ ಉಪಾಧ್ಯಕ್ಷರಾದ ಉದಯ ಹೆಗ್ಡೆ, ಲಯನ್ಸ್ ಕ್ಲಬ್ ಅಧ್ಯಕ್ಷರಾದ ಉಮೇಶ್ ಶೆಟ್ಟಿ, ನಿಯೋಜಿತ ಕಾರ್ಯದರ್ಶಿ ಕಿರಣ್ ಶೆಟ್ಟಿ, ಜನ ಜಾಗೃತಿ ವೇದಿಕೆಯ ನಾರಾವಿ ವಲಯದ ಅದ್ಯಕ್ಷರಾದ ನಿತ್ಯಾನಂದ ನಾವರ, ಸದಸ್ಯರಾದ ವಸಂತ ಗುಣಶೀಲ, ಕೇಂದ್ರ ಒಕ್ಕೂಟದ ಅಧ್ಯಕ್ಷ ರಾದ ಸದಾನಂದ ಬಂಗೇರಾ, ಗ್ರಾಮ ಸಮಿತಿ ಅಧ್ಯಕ್ಷರಾದ ರಾಮ ಶೆಟ್ಟಿ ಜಗದೀಶ್ ಹೆಗ್ಡೆ, ಒಕ್ಕೂಟದ ಅಧ್ಯಕ್ಷ ರಾದ ಸುರೇಶ್ ದಾಸ್, ಉಪಸ್ಥಿತರಿದ್ದರು.


ಮೇಲ್ವಿಚಾರಕರಾದ ಶ್ರೀಮತಿ ದಮಯಂತಿ, ಸೇವಾ ಪ್ರತಿನಿಧಿ ಗಳಾದ ಹರಿಣಾಕ್ಷಿ , ರೇಷ್ಮಾ, ಮಮತಾ ಶೆಟ್ಟಿ ಹಾಜರಿದ್ದರು.
ನಾರಾವಿ ಪಟ್ಟಣದಲ್ಲಿ ಗುಂಪಿನ ಸದಸ್ಯರು ಹಾಗೂ ವಿದ್ಯಾರ್ಥಿಗಳು ಜಾಥಾ ನಡೆಸಿದರು.

Related posts

ಹಿರಿಯ ವ್ಯಂಗ್ಯಚಿತ್ರ ಕಲಾವಿದ ಬಿ. ವಿಲ್ಸನ್‌ ರಿಂದ ಹುಬ್ಬಳ್ಳಿಯಲ್ಲಿ ವ್ಯಂಗ್ಯಚಿತ್ರ ತರಬೇತಿ

Suddi Udaya

ಪ್ರತಿಭಾ ಕಾರಂಜಿ ಸ್ಪರ್ಧೆ: ಬೆಳ್ತಂಗಡಿ ಎಸ್‌ಡಿಎಂ ಆಂಗ್ಲ ಮಾಧ್ಯಮ ಶಾಲೆಗೆ ಹಲವು ಪ್ರಶಸ್ತಿ

Suddi Udaya

ಪುಂಜಾಲಕಟ್ಟೆ: ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ನೂತನ ಕಛೇರಿ ಉದ್ಘಾಟನೆ ಹಾಗೂ ರಕ್ತದಾನ ಶಿಬಿರ

Suddi Udaya

ಶಿಬಾಜೆ ಭಂಡಿಹೊಳೆಯಲ್ಲಿ ಪ್ರಕೃತಿ ಪ್ರಿಯರಿಂದ ರಸ್ತೆ ಸ್ವಚ್ಛತಾ ಅಭಿಯಾನ

Suddi Udaya

ಬದುಕು ಕಟ್ಟೋಣ ಬನ್ನಿ ತಂಡದಿಂದ “ಕನಸು ಇದು ಭರವಸೆಯ ಬೆಳಕು”: ವಿದ್ಯಾರ್ಥಿಗಳೊಂದಿಗೆ 78 ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ

Suddi Udaya

ಹತ್ಯಡ್ಕ ಕಾಪು -ಉಪ್ಪರಡ್ಕ ದೈವಸ್ಥಾನದಲ್ಲಿ ದೈವಗಳ ವಾರ್ಷಿಕ ಜಾತ್ರೆ

Suddi Udaya
error: Content is protected !!