September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆ: ರುಡ್‌ಸೆಟ್ ಸಂಸ್ಥೆಯಲ್ಲಿ ಸಿಸಿ ಕೆಮರಾ ಅಳವಡಿಸುವಿಕೆ ಮತ್ತು ಜೇನು ಸಾಕಾಣಿಕೆ ತರಬೇತಿ ಕಾರ್ಯಕ್ರಮಗಳ ಸಮಾರೋಪ ಸಮಾರಂಭ

ಉಜಿರೆ: ನಮ್ಮ ದೇಶದ ದೊಡ್ಡ ಆಸ್ತಿ ಯಾವುದೆಂದರೆ ಮಾನವ ಸಂಪನ್ಮೂಲ, ಈ ಸಂಪತ್ತು ನಮ್ಮ ದೇಶವನ್ನು ಒಂದು ಬಲಿಷ್ಠ ದೇಶವನ್ನಾಗಿ ಮಾಡಿದೆ. ದೇಶದ ಪ್ರತಿಯೊಬ್ಬ ಯುವ ಜನತೆಯು ಉದ್ಯೋಗದ ಮೂಲಕ ದೇಶಕ್ಕೆ ಒಂದು ಸಣ್ಣ ಕೊಡುಗೆ ಕೊಟ್ಟರೆ ನಮ್ಮ ದೇಶ ಎಲ್ಲಾ ದೇಶಗಳಿಗಿಂತ ಅಗ್ರಗಣೀಯವಾಗಿ ಬೆಳೆಯುತ್ತದೆ ಎಂದರು.

ಅವರು ರುಡ್‌ಸೆಟ್ ಸಂಸ್ಥೆಯಲ್ಲಿ ನಡೆದ ಸಿಸಿ ಕೆಮರಾ ಅಳವಡಿಸುವಿಕೆ ಮತ್ತು ಜೇನು ಸಾಕಾಣಿಕೆ ತರಬೇತಿ ಕಾರ್ಯಕ್ರಮಗಳ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಎಲ್ಲರಿಗೂ ಉದ್ಯೋಗ ಕೊಡಲು ಸಾದ್ಯವಿಲ್ಲ, ಆದರೆ ರುಡ್‌ಸೆಟ್ ನಂತಹ ಸಂಸ್ಥೆಗಳು ಇಂತಹ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ, ಬೆಳೆದು ನಿಂತಿರುವಂತದ್ದು ಹೆಮ್ಮೆಯ ವಿಷಯ, ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗೆಡೆಯವರು ತುಂಬಾ ದೂರದೃಷ್ಠಿಯಿಂದ ಈ ಸಂಸ್ಥೆಯನ್ನು ಪ್ರಾರಂಭ ಮಾಡಿದ್ದಾರೆ, ಈ ಸಂಸ್ಥೆಯ ಹೆಸರನ್ನು ಉಳಿಸುವ ಕೆಲಸವನ್ನು ಇಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಮಾಡಬೇಕು, ಎಂದು ಬೆಸ್ಟ್ ಫೌಂಡೇಶನ್ ಅಧ್ಯಕ್ಷರೂ ಮತ್ತು ಕೆಪಿಸಿಸಿ ಯ ಪ್ರಧಾನ ಕಾರ್ಯದರ್ಶೀಗಳಾದ ರಕ್ಷಿತ್ ಶಿವರಾಂರವರು ಅಭಿಪ್ರಾಯ ಪಟ್ಟರು.

ಕಾರ್ಯಕ್ರಮದಲ್ಲಿ ರುಡ್‌ಸೆಟ್ ಸಂಸ್ಥೆಯ ನಿರ್ದೇಶಕರಾದ ಎಮ್. ಸುರೇಶ್‌ರವರು ಅಧ್ಯಕ್ಷ ಸ್ಥಾನ ವಹಿಸಿದ್ದರು, ಹಿರಿಯ ಉಪನ್ಯಾಸಕರಾದ ಅಬ್ರಹಾಂ ಜೇಮ್ಸ್‌ರವರು ಕಾರ್ಯಕ್ರಮ ನಿರೂಪಿಸಿ, ಹಿರಿಯ ಉಪನ್ಯಾಕರಾದ ಶ್ರೀಮತಿ ಅನಸೂಯ ವಂದಿಸಿದರು. ಕೆಲವು ಶಿಭಿರಾರ್ಥಿಗಳು ತರಬೇತಿಯ ಅನಿಸಿಕೆಯನ್ನು ವ್ಯಕ್ತಪಡಿಸಿದರು.

Related posts

ಫೆ.7-8: ನಾಲ್ಕೂರು ಹುಂಬೆಜೆ ಪಲ್ಕೆಯಲ್ಲಿ ದೊಂಪದ ಬಲಿ ಮತ್ತು ಶ್ರೀ ಕೊಡಮಣಿತ್ತಾಯ ನೇಮ ಹಾಗೂ ಕಲ್ಲುರ್ಟಿ, ಕಲ್ಕುಡ ದೈವಗಳ ನೇಮೋತ್ಸವ

Suddi Udaya

ನಡ: ಬಸ್ರಾಯ ವೆಂಟೆಡ್ ಡ್ಯಾಮ್ ನಲ್ಲಿ ಸಿಲುಕಿಕೊಂಡಂತಹ ಮರದ ದಿಮ್ಮಿಗಳ ತೆರವು ಕಾರ್ಯ

Suddi Udaya

ಬೆಳ್ತಂಗಡಿ ಲಯನ್ಸ್ ಕ್ಲಬ್ ಸುವರ್ಣ ಸಂಭ್ರಮ: ಪೂರ್ವ ಅಧ್ಯಕ್ಷರಿಗೆ ಮತ್ತು ಸಾಧಕರಿಗೆ ಸನ್ಮಾನ

Suddi Udaya

ಯುವವಾಹಿನಿ ಬೆಳ್ತಂಗಡಿ ಘಟಕದಿಂದ ಆಟಿದ ನೆಂಪು’ ಕಾರ್ಯಕ್ರಮ

Suddi Udaya

ಎಂಡೋ ಪೀಡಿತ ಮಗುವಿನ ಚಿಕಿತ್ಸೆಗೆ ನೇರವಾದ ರಕ್ಷಾಸಮಿತಿ ಸದಸ್ಯ ಕರೀಮ್‌ ಗೇರುಕಟ್ಟೆ

Suddi Udaya

ಬೆಳ್ತಂಗಡಿಯಲ್ಲಿ ನಡೆದ ಮಂಗಳೂರು ವಿಭಾಗದ ಜಿನಭಜನಾ ಸ್ಪರ್ಧೆ: ಕಾರ್ಯಕರ್ತರಿಗೆ ಅಭಿನಂದನೆ

Suddi Udaya
error: Content is protected !!