April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ ಶ್ರೀ ಧ.ಮಂ. ಆಂಗ್ಲ ಮಾಧ್ಯಮ ಶಾಲಾ ಪ್ರಾರಂಭೋತ್ಸವ: ಎಸ್ ಎಸ್ ಎಲ್ ಸಿ ಸಾಧಕ ಚಿನ್ಮಯಿ ಜಿ.ಕೆ ರವರಿಂದ ಶೈಕ್ಷಣಿಕ ವರ್ಷಕ್ಕೆ ಚಾಲನೆ

ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವವು ವಿಭಿನ್ನ ರೀತಿಯಲ್ಲಿ ನಡೆಯಿತು.

ಎಸ್ ಎಸ್ ಎಲ್ ಸಿ ಯಲ್ಲಿ ರಾಜಕ್ಕೆ ದ್ವಿತೀಯ ಸ್ಥಾನ ಪಡೆದ ಚಿನ್ಮಯ್ ಜಿ ಕೆ ದೀಪ ಬೆಳಗಿಸಿ ಶೈಕ್ಷಣಿಕ ವರ್ಷಕ್ಕೆ ಚಾಲನೆಯನ್ನು ನೀಡಿ ಮಕ್ಕಳಿಗೆಲ್ಲ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ತಾರಕೇಸರಿ ಉಪಸ್ಥಿತರಿದ್ದು , ಮಕ್ಕಳಿಗೆ ಶುಭ ಹಾರೈಸಿದರು. ಸಿಆರ್ ಪಿ ಶ್ರೀಮತಿ ವಾರಿಜ ಮುಖ್ಯ ಅಭ್ಯಂಗತರಾಗಿ ಆಗಮಿಸಿ , ಚಿನ್ಮಯ್ ಜಿಕೆ ಯಂತಹ ವಿದ್ಯಾರ್ಥಿಗಳು ಇನ್ನಷ್ಟು ಈ ಸಂಸ್ಥೆಯಿಂದ ಹೊರಬರಲಿ ಎಂದು ಶೈಕ್ಷಣಿಕ ವರ್ಷಕ್ಕೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿ ಶ್ರೀಮತಿ ಹೇಮಲತಾ ಎಂ ಆರ್ , ಶಾಲಾ ಶಿಕ್ಷಕ ವೃಂದ, ಪೋಷಕರು ಉಪಸ್ಥಿತರಿದ್ದರು.
ಸಹ ಶಿಕ್ಷಕ ಮುರುಳಿ ಪಿ ನಿರೂಪಿಸಿದ ಕಾರ್ಯಕ್ರಮದಲ್ಲಿ , ವಿದ್ಯಾರ್ಥಿ ಆಯುಷ್ ಎನ್ ಪ್ರೋತ್ಸಾಹದಾಯಕ ಮಾತುಗಳಾನ್ನಾಡಿದರು.

Related posts

ಮೊಗ್ರು ಸ.ಕಿ.ಪ್ರಾ. ಶಾಲೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ

Suddi Udaya

ಅರಸಿನಮಕ್ಕಿ ಗ್ರಾ.ಪಂ.ನಿಂದ ಚರಂಡಿ ದುರಸ್ಥಿ ಕಾರ್ಯ

Suddi Udaya

ಅಳದಂಗಡಿ: ಮಹಿಳೆ ನೇಣು ಬಿಗಿದು ಆತ್ಮಹತ್ಯೆ

Suddi Udaya

ವೇಣೂರು : ಅಯೋಧ್ಯಾ ಆಂದೋಲನದಲ್ಲಿ ಭಾಗವಹಿಸಿದ ಕರಸೇವಕರಿಗೆ ಗೌರವಾರ್ಪಣೆ

Suddi Udaya

ರೀಜೆಂಟ್ ಮಳಿಗೆ ಅಳದಂಗಡಿಯಿಂದ- ಗರ್ಡಾಡಿ ಹೊನ್ನಕಟ್ಟೆಗೆ ಸ್ಥಳಾಂತರಗೊಂಡು ಶುಭಾರಂಭ

Suddi Udaya

ಸಿಡಿಲು ಮಳೆ: ಶಿಶಿಲ ರವಿ ರವರ ಮನೆಗೆ ಅಪಾರ ಹಾನಿ

Suddi Udaya
error: Content is protected !!