24 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಆರಂಬೋಡಿ : ಶ್ರೀಮತಿ ಧನ್ಯಶ್ರೀ ಕೆ. ಮತ್ತು ಮನೋಜ್ ಶೆಟ್ಟಿ ದಂಪತಿಗಳಿಂದ ಆರಂಬೋಡಿ ಗ್ರಾಮದ ಎಲ್ಲಾ ಸರಕಾರಿ ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳಿಗೆ ಉಚಿತ ನೋಟ್ ಪುಸ್ತಕ ವಿತರಣೆ

ಆರಂಬೋಡಿ ಐತೇರಿಯ ಶ್ರೀಮತಿ ಧನ್ಯಶ್ರೀ ಕೆ. ಮತ್ತು ಮನೋಜ್ ಶೆಟ್ಟಿ ದಂಪತಿಗಳಿಂದ ಶಾಲಾ ಪ್ರಾರಂಭೋತ್ಸವದ ಪ್ರಯುಕ್ತ ಉಚಿತ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮವು ಮೇ 31ರಂದು ನಡೆಯಿತು.

ಆರಂಬೋಡಿ ಗ್ರಾಮದ ಎಲ್ಲಾ ಸರಕಾರಿ ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳಾದ ಸರಕಾರಿ ಪ್ರಾಥಮಿಕ ಶಾಲೆ ಆರಂಬೋಡಿ, ಸರಕಾರಿ ಪ್ರಾಥಮಿಕ ಶಾಲೆ ಹೊಕ್ಕಾಡಿಗೋಳಿ, ಸರಕಾರಿ ಪ್ರಾಥಮಿಕ ಶಾಲೆ ಕಡ್ತಲಬೆಟ್ಟು, ಸರಕಾರಿ ಪ್ರಾಥಮಿಕ ಶಾಲೆ ಮಂಚಕಲ್, ಸರಕಾರಿ ಪ್ರಾಥಮಿಕ ಶಾಲೆ ಪಿಲ್ಲಂ, ಸರಕಾರಿ ಪ್ರಾಥಮಿಕ ಶಾಲೆ ಹನ್ನೆರಡು ಕವಲು, ಸರಕಾರಿ ಪ್ರಾಥಮಿಕ ಶಾಲೆ ಗುಂಡೂರಿ, ಸರಕಾರಿ ಪ್ರಾಥಮಿಕ ಶಾಲೆ ರಾಯಿ, ಸರಕಾರಿ ಪ್ರಾಥಮಿಕ ಶಾಲೆ ಗುತ್ಯಡ್ಕ ಶಾಲೆಗಳಿಗೆ ಉಚಿತ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು.

ಈ ವೇಳೆ ಶ್ರೀ ಧನ್ಯಶ್ರೀ ಕೆ ಮನೋಜ್ ಶೆಟ್ಟಿ ಅವರ ಪರವಾಗಿ ಅವರ ತಂದೆ ಹರಿಯಪ್ಪ ಶೆಟ್ಟಿ ವಿತರಿಸಿದರು.

ಈ ಸಂದರ್ಭದಲ್ಲಿ ಎಸ್ ಡಿ ಎಮ್ ಸಿ ಅಧ್ಯಕ್ಷರು, ಮುಖ್ಯೋಪಾಧ್ಯಾಯರು, ಅಧ್ಯಾಪಕ ವೃಂದ, ಹಳೆ ವಿದ್ಯಾರ್ಥಿಗಳು ಜೊತೆಗಿದ್ದರು.

Related posts

ಶಾಸಕ ಹರೀಶ್ ಪೂಂಜರವರ ಜನ್ಮದಿನದ ಪ್ರಯುಕ್ತ ಸಾಮಾಜಿಕ ಜಾಲತಾಣ ಸಹಸoಚಾಲಕ ಸಂದೀಪ್ ರೈ ಧರ್ಮಸ್ಥಳ ರವರಿಂದ ಕೊಕ್ಕಡದ ಎಂಡೋಸಲ್ಫಾನ್ ಪುನರ್ವಸತಿ ಕೇಂದ್ರದ ವಿಶೇಷ ಮಕ್ಕಳಿಗೆ ವಿಶೇಷ ಭೋಜನ

Suddi Udaya

ಬೆಳ್ತಂಗಡಿ: 13ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣೆ

Suddi Udaya

ಸುಲ್ಕೇರಿ: ಶ್ರೀ ನೇಮಿನಾಥ ಸ್ವಾಮಿ ಬಸದಿಯ ನೂತನ ಗೋಪುರದ ಶಿಲಾನ್ಯಾಸ

Suddi Udaya

ಉಜಿರೆ: ಶ್ರೀ ಧ. ಮಂ. ಪ.ಪೂ. ಕಾಲೇಜಿನಲ್ಲಿ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ

Suddi Udaya

ಎಸ್.ಡಿ.ಪಿಐ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ನೂತನ ಅಧ್ಯಕ್ಷರಾಗಿ ಅಕ್ಬರ್ ಬೆಳ್ತಂಗಡಿ, ಕಾರ್ಯದರ್ಶಿಯಾಗಿ ಅಶ್ಫಾಕ್ ಪುಂಜಾಲಕಟ್ಟೆ ಆಯ್ಕೆ

Suddi Udaya

ಬೆಳ್ತಂಗಡಿ: ಸ್ನೇಹ ಜ್ಯೋತಿ ಮಹಿಳಾ ಒಕ್ಕೂಟದ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya
error: Content is protected !!