25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬಳಂಜ: ಅಟ್ಲಾಜೆ ದ.ಕ ಜಿ.ಪಂ. ಕಿ.ಪ್ರಾ ಶಾಲಾ ಪ್ರಾರಂಭೋತ್ಸವ ಸಂಭ್ರಮ: ಯುವ ಉದ್ಯಮಿ ಪ್ರವೀಣ್ ಪೂಜಾರಿ ಲಾಂತ್ಯಾರುರವರಿಂದ ಮಕ್ಕಳಿಗೆ ಕಲಿಕಾ ಸಾಮಾಗ್ರಿ ವಿತರಣೆ

ಬಳಂಜ: ದ.ಕ ಜಿ.ಪಂ. ಕಿ.ಪ್ರಾ ಶಾಲೆ ಅಟ್ಲಾಜೆ ಇಲ್ಲಿ 2024-25 ನೇ ಶೈಕ್ಷಣಿಕ ಸಾಲಿನ ಶಾಲಾ ಪ್ರಾರಂಭೋತ್ಸವವು ಮೇ 31ರಂದು ನೆರವೇರಿತು.

ಒಂದನೇ ತರಗತಿಗೆ ದಾಖಲಾದ ಮಕ್ಕಳನ್ನು ಆರತಿ ಬೆಳಗಿ ಸಂಭ್ರಮದಿಂದ ಸ್ವಾಗತಿಸಲಾಯಿತು.

ಕಾರ್ಯಕ್ರಮದ ವೇದಿಕೆಯಲ್ಲಿ ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ ಜಗದೀಶ್ ಕೆ, ಉಪಾಧ್ಯಕ್ಷೆ ಶ್ರೀಮತಿ ರೂಪಲತಾ, ಸರ್ವೋದಯ ಫ್ರೆಂಡ್ಸ್ ಅಟ್ಲಾಜೆಯ ಅಧ್ಯಕ್ಷ ಸುರೇಶ್ ಹೇವ, ಯುವ ಉದ್ಯಮಿ ನವೀನ್ ಲಾಂತ್ಯಾರ್, ಚಂದ್ರಶೇಖರ್, ಶಾಲಾ ಮುಖ್ಯ ಶಿಕ್ಷಕ ಪ್ರಮೋದ್ ಎಸ್, ಸಹಶಿಕ್ಷಕಿ ಶ್ರೀಮತಿ ಶ್ವೇತಾ ಆರ್.ಡಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸರಕಾರದಿಂದ ಕೊಡಮಾಡಿದ ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಹಾಗೂ ಶಾಲಾ ಕೊಡುಗೈ ದಾನಿಯಾದ ಪ್ರವೀಣ್ ಲಾಂತ್ಯಾರು ಶಾಲಾ ಮಕ್ಕಳಿಗಾಗಿ ನೀಡಿದ ಬರವಣಿಗೆಯ ಪುಸ್ತಕಗಳು, ಪೆನ್ಸಿಲ್ ಇತ್ಯಾದಿ ಕಲಿಕಾ ಸಾಮಾಗ್ರಿಗಳನ್ನು ವಿತರಣೆ ಮಾಡಲಾಯಿತು. ನಂತರ ಸಿಹಿ ತಿಂಡಿಯನ್ನು ನೀಡಲಾಯಿತು.

Related posts

ನೀತಿ ಸಂಹಿತೆ ಜಾರಿ: ಸೆ.21-25 ರೊಳಗೆ ಮಹಾಸಭೆ ನಡೆಸುವವರು ಚುನಾವಣಾಧಿಕಾರಿಯಿಂದ ಅನುಮತಿ ಪಡೆಯುವಂತೆ ವಿನಂತಿ

Suddi Udaya

ಬೆಳ್ತಂಗಡಿ : ಕೆಇಬಿ ರಸ್ತೆ -ರೆಂಕೆದಗುತ್ತು-ಮಲ್ಲೊಟ್ಟು ಸಂಪರ್ಕ ರಸ್ತೆಗೆ ಅನುದಾನ ಒದಗಿಸುವಂತೆ ಡಾ. ಡಿ ವೀರೇಂದ್ರ ಹೆಗ್ಗಡೆಯವರಿಗೆ ಮನವಿ

Suddi Udaya

ಆಟೋ ಚಾಲಕ ಯಶೋಧರ ಗೌಡ ಅಸೌಖ್ಯದಿಂದ ನಿಧನ

Suddi Udaya

ಮಂಗಳೂರು ಕಥೋಲಿಕ್ ಸಭಾ ವತಿಯಿಂದ ಬೆಳ್ತಂಗಡಿ ಪತ್ರಕರ್ತ ಹೆರಾಲ್ಡ್ ಪಿಂಟೊ ರಿಗೆ ಸನ್ಮಾನ ಕಾರ್ಯಕ್ರಮ

Suddi Udaya

ನಾಳ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ದೇವರಿಗೆ ಕದಿರು ಅರ್ಪಣೆ, ಹೊಸ ಅಕ್ಕಿ ಊಟ

Suddi Udaya

ಬೆಳ್ತಂಗಡಿ: ಅಪ್ಸರಾ ಫ್ಯಾಶನ್ ಸೆಂಟರ್‌ನಲ್ಲಿ ಮನ್ಸೂನ್ ಆಫರ್; ವಿಶೇಷ ಡಿಸ್ಕೌಂಟ್ ಸೇಲ್

Suddi Udaya
error: Content is protected !!