24 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಕೊಕ್ಕಡ ಸಂತ ಜೋನರ ಹಿ.ಪ್ರಾ.ಶಾಲೆ ಕೌಕ್ರಾಡಿ ಶಾಲಾ ಪ್ರಾರಂಭೋತ್ಸವ

ಕೊಕ್ಕಡ: ಸಂತ ಜೋನರ ಹಿ.ಪ್ರಾ.ಶಾಲೆ ಕೌಕ್ರಾಡಿ-ಕೊಕ್ಕಡ 2024-25ನೇ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವವನ್ನು ಮೇ 31ರಂದು ಶಾಲೆಗೆ ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳನ್ನು ಹಾಗೂ ನೂತನವಾಗಿ ಬಂದಿರುವ ಶಾಲಾ ಸಂಚಾಲಕ ವಂ. ಫಾ. ಅನಿಲ್ ಪ್ರಕಾಶ್ ಡಿಸಿಲ್ವಾ ಇವರನ್ನು ಬ್ಯಾಂಡ್ ಸೆಟ್‌ನ ಮೂಲಕ ಭವ್ಯ ಮೆರವಣಿಗೆಯೊಂದಿಗೆ ಸ್ವಾಗತಿಸಲಾಯಿತು.

ಗಣ್ಯರಿಂದ ದೀಪ ಬೆಳಗಿಸಿ ಜೊತೆಗೆ ಹೊಸ ಮಕ್ಕಳಿಗೆ ಹೂ ನೀಡಿ, ಪುಸ್ತಕ ವಿತರಿಸುವ ಮೂಲಕ ಸಮಾರಂಭದ ಉದ್ಘಾಟನೆಯನ್ನು ಮಾಡಲಾಯಿತು

ಶಾಲಾ ಸಂಚಾಲಕ ಫಾ. ಅನಿಲ್ ಪ್ರಕಾಶ್ ಡಿಸಿಲ್ವಾ ಅಧ್ಯಕ್ಷತೆಯನ್ನು ವಹಿಸಿ ಶುಭ ಹಾರೈಸಿದರು. ಜೆಸಿಐ ಇಂಡಿಯ ವಲಯ ತರಬೇತುದಾರರು ಜೀವನದ ಎಲ್ಲಾ ಹಂತಗಳಲ್ಲಿ ವಿದ್ಯಾರ್ಥಿ ಜೀವನ ಶ್ರೇಷ್ಠ ಎಂದು ಉತ್ತಮ ಮಾತುಗಳನ್ನಾಡಿದರು.

ಮುಖ್ಯ ಅತಿಥಿಗಳಾಗಿ ಶ್ರೀಮತಿ ಹೇಮಾವತಿ ದಾಮೋದರ್ ಭಟ್, ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷ ಹೆರಾಲ್ಡ್ ಪ್ರಕಾಶ್ ಗಲ್ಭಾವೊ, ಚರ್ಚ್‌ನ ಪಾಲನ ಮಂಡಳಿಯ ಉಪಾಧ್ಯಕ್ಷ ಪ್ರವೀಣ್ ನೋಯೆಲ್ ಮೊಂತೇರೊ, ಹೆತ್ತವರು-ಪೋಷಕರು, ಹಳೆ ವಿದ್ಯಾರ್ಥಿಗಳು, ಶಿಕ್ಷಕ ವೃಂದ ಉಪಸ್ಥಿತರಿದ್ದರು.

ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜೆನೆವಿವ್ ಫೆನಾಂಡಿಸ್ ಪ್ರಾಸ್ತಾವಿಕ ಮಾತುಗಳ ಮೂಲಕ ಶಾಲಾ ನಿಯಮಗಳನ್ನು ತಿಳಿಸಿದರು. ನೂತನ ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದು ಎಂ. ಉಮೇಶ ರವರು ಉಪಾಧ್ಯಕ್ಷರಾಗಿ ಆಯ್ಕೆಯಾದರು.

ಶಿಕ್ಷಕಿ ಶ್ರೀಮತಿ ಅಂಬಿಕಾ ಸ್ವಾಗತಿಸಿ, ಶಿಕ್ಷಕಿ ಶ್ರೀಮತಿ ಅನಿಶಾ ಧನ್ಯವಾದವಿತ್ತರು, ಶಿಕ್ಷಕಿ ಶ್ರೀಮತಿ ಚೈತ್ರ ಕಾರ್ಯಕ್ರಮದ ನಿರೂಪಿಸಿದರು.

Related posts

ಶ್ರೀ ಕ್ಷೇ.ಧ.ಗ್ರಾ.ಯೋ ವಿಜಯಪುರ ಜಿಲ್ಲಾ ನಿರ್ದೇಶಕ ಸಂತೋಷ್ ಕುಮಾರ್ ರೈ ಹೃದಯಾಘಾತದಿಂದ ನಿಧನ

Suddi Udaya

ಅಲಂಕೃತಗೊಂಡ ಮಚ್ಚಿನ ಶಾಲೆ ಹಾಗೂ ಪುಂಜಾಲಕಟ್ಟೆ ಶಾಲೆಯ ಮತದಾನ ಕೇಂದ್ರದಲ್ಲಿ ಬಿರುಸಿನ ಮತದಾನ

Suddi Udaya

ಬೆಳಾಲು: ಪೆರಿಯಡ್ಕ ಕಿರಿಯ ಪ್ರಾಥಮಿಕ ಶಾಲಾ ಪ್ರತಿಭಾ ದಿನಾಚರಣೆ

Suddi Udaya

ಮನೆಯಲ್ಲಿ ಜಾರಿ ಬಿದ್ದು ತಲೆಗೆ ಏಟು: ಚಿಕಿತ್ಸೆ ಫಲಕಾರಿಯಾಗದೆ ಚಾರ್ಮಾಡಿ ಶಾಲಾ ಶಿಕ್ಷಕಿ ಸುಪ್ರಭಾ ಮೃತ್ಯು

Suddi Udaya

ಗೇರುಕಟ್ಟೆ : ಕೊರಂಜ ಭಾರಿ ಮಳೆಗೆ ಚರಂಡಿ ನೀರು ಮನೆಯೊಳಗೆ

Suddi Udaya

ಭಾರತೀಯ ಜನತಾ ಪಾರ್ಟಿಯ ನಾವೂರು ಶಕ್ತಿ ಕೇಂದ್ರದ ಬೂತ್ ಸಮಿತಿಯ ಅಧ್ಯಕ್ಷ ಹಾಗೂ ಕಾರ್ಯದರ್ಶಿಗಳ ಆಯ್ಕೆ

Suddi Udaya
error: Content is protected !!