39.6 C
ಪುತ್ತೂರು, ಬೆಳ್ತಂಗಡಿ
April 6, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಪ್ರಥಮ ದರ್ಜೆ ಸಹಾಯಕ ಎಂ.ಆ‌ರ್. ಪ್ರಸನ್ನರಿಗೆ ಬೀಳ್ಕೊಡುಗೆ

ಬೆಳ್ತಂಗಡಿ: ಪಂಚಾಯತ್‌ ರಾಜ್‌ ಇಂಜಿನಿಯರಿಂಗ್ ಇಲಾಖೆಯ ಬೆಳ್ತಂಗಡಿ, ಬಂಟ್ವಾಳ ಮತ್ತು ಬೈಂದೂರು ಉಪವಿಭಾಗಗಳಲ್ಲಿ 34 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ, ಮೇ 31ರಂದು ವೃತ್ತಿಯಿಂದ ವಯೋ ನಿವೃತ್ತಿ ಹೊಂದಿದ ಬೆಳ್ತಂಗಡಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಪ್ರಥಮ ದರ್ಜೆ ಸಹಾಯಕ ಎಂ.ಆ‌ರ್. ಪ್ರಸನ್ನರನ್ನು ಆತ್ಮೀಯವಾಗಿ ಬೀಳ್ಕೊಡುವ ಸಮಾರಂಭವು ಮೇ 31ರಂದು ಬೆಳ್ತಂಗಡಿಯ ಅಂಬೇಡ್ಕ‌ರ್ ಭವನದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಪಂಚಾಯತ್‌ ರಾಜ್ ಇಲಾಖೆಯ ಬೆಳ್ತಂಗಡಿ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ನಿತಿನ್ ಕುಮಾರ್, ಸಹಾಯಕ ಇಂಜಿನಿಯರ್‌ಗಳಾದ ಸುಜಿತ್ ಹಾಗೂ ಹರ್ಷಿತ್, ಇಂಜಿನಿಯರ್ ಹರೀಶ್ ಕಾರಿಂಜ, ಬೆಳ್ತಂಗಡಿ ತಾಲೂಕು ಸಿವಿಲ್‌ ಗುತ್ತಿಗೆದಾರರ ಸಂಘದ ಗೌರವಾಧ್ಯಕ್ಷ ಗಿರಿರಾಜ ಬಾರಿತ್ತಾಯ, ಕಾರ್ಯದರ್ಶಿ ಕೃಷ್ಣ ಕುಮಾ‌ರ್, ಇಲಾಖೆಯ ಸಿಬ್ಬಂದಿಗಳು, ಸಿವಿಲ್‌ ಗುತ್ತಿಗೆದಾರರ ಸಂಘದ ಸದಸ್ಯರು ಹಾಗೂ ನಿವೃತ್ತರ ಸ್ನೇಹಿತರು ಭಾಗವಹಿಸಿದ್ದರು.

ಸರಕಾರಿ ಸೇವೆಯಿಂದ ನಿವೃತ್ತರಾದ ಎಂ.ಆರ್. ಪ್ರಸನ್ನ ಹಾಗೂ ಅವರ ಧರ್ಮಪತ್ನಿ ಜಲಜಾರನ್ನು ಸಮ್ಮಾನಿಸಿ ಗೌರವಿಸಲಾಯಿತು. ಎಂ.ಆ‌ರ್. ಪ್ರಸನ್ನ ಮಾತನಾಡಿ ತನ್ನ ಸೇವಾವಧಿಯಲ್ಲಿ ಸಹಕರಿಸಿದ ಎಲ್ಲರನ್ನೂ ಸ್ಮರಿಸಿ, ಕೃತಜ್ಞತೆ ಸಲ್ಲಿಸಿದರಲ್ಲದೇ; ತನಗೆ ನೀಡಿದ ಆತ್ಮೀಯ ಸಮ್ಮಾನಕ್ಕೆ ಅಭಿವಂದನೆ ಸಲ್ಲಿಸಿದರು.

Related posts

ಪಿಲ್ಯ: ಆರೋಗ್ಯ ಕ್ಷೇಮ ಕೇಂದ್ರದ ಉದ್ಘಾಟನೆ

Suddi Udaya

ಉಜಿರೆ: ಶ್ರೀ ಧ. ಮಂ. ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

Suddi Udaya

ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ನಿಂದ ಕುಕ್ಕಾವು ಸೇತುವೆ ಬಳಿ ಧ್ಯಾನಸಕ್ತ ಸದಾಶಿವನ 12 ಅಡಿ ಎತ್ತರದ ಪ್ರತಿಮೆ ಲೋಕಾರ್ಪಣೆ

Suddi Udaya

ಬೆಳಾಲು: ನಿವೃತ್ತ ಶಿಕ್ಷಕ ಬಾಲಕೃಷ್ಣ ಭಟ್ ಕೊಲೆ ಪ್ರಕರಣ: ಇಬ್ಬರು ಆರೋಪಿಗಳು ಐದು ದಿನ ಪೊಲೀಸ್ ಕಸ್ಟಡಿಗೆ

Suddi Udaya

ತೆಂಕಕಾರಂದೂರು: ಕೃಷಿಕ ಕೇಶವ ಪೂಜಾರಿ ನಿಧನ

Suddi Udaya

ಶ್ರೀ ಕ್ಷೇತ್ರ ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ಸಾರ್ವಜನಿಕ ಗಣೇಶೋತ್ಸವದ ಪೂರ್ವಭಾವಿ ಸಭೆ

Suddi Udaya
error: Content is protected !!
ಸುದ್ದಿ ಉದಯ ವಾಟ್ಸಪ್‌ ಗ್ರೂಪ್‌ಗೆ ಸೇರಿ