ಬೆಳ್ತಂಗಡಿ: 2023-24ನೇ ಶೈಕ್ಷಣಿಕ ವರ್ಷದಲ್ಲಿ ಎಸ್‌ಎಸ್‌ಎಲ್‌ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳು 100% ಫಲಿತಾಂಶ ಪಡೆದ ಒಂದು ಸಂಭ್ರಮ.
ಅರ್ಸುಲೈನ್ ಫ್ರಾನ್ಸಿಸ್ಕನ್ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ವರ್ಷಂಪ್ರತಿ ಮೈಸೂರು, ಹುಬ್ಬಳ್ಳಿ ಹಾಗೂ ಮಂಗಳೂರು ಪ್ರಾಂತ್ಯ ವ್ಯಾಪ್ತಿಗೆ ಒಳಪಟ್ಟ ಶಿಕ್ಷಣ ಸಂಸ್ಥೆಗಳಿಗೆ ನಡೆಸುವ ಸ್ಪರ್ದೆಯ ಧ್ಯೇಯ ವಾಕ್ಯ ಭಾರತ ಒಂದು ಪ್ರಜಾಪ್ರಭುತ್ವ ರಾಷ್ಟ್ರ- ಇದರಲ್ಲಿ ಸಂತ ತೆರೇಸಾ ಪ್ರೌಢಶಾಲೆ ಪ್ರಥಮ ಸ್ಥಾನಗಳಿಸಿದ ಮತ್ತೊಂದು ಸಂಭ್ರಮ.
2024-25ನೇ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ ಶೈಕ್ಷಣಿಕ ಬಲವರ್ಧನೆ ವಿಭೃಂಭಣೆಯಿಂದ ಆಚರಿಸಿದ ಸುಸಂಧರ್ಭ.
ಆರೋಗ್ಯ ತ್ರಿವಳಿ ಸಂಭ್ರಮವನ್ನು ಕೇಕ್ ಕತ್ತರಿಸುವ ಮೂಲಕ ಅಭಿನಂದನೆ ಸಲ್ಲಿಸಲಾಯಿತು. ದೇವರ ಅನುಗ್ರಹವನ್ನು ಭಗಿನಿ ಫಿಲೋಮಿನಾ ಡಿಸೋಜ ನೇತೃತ್ವದಲ್ಲಿ ವಿದ್ಯಾರ್ಥಿಗಳು ನಡೆಸಿಕೊಟ್ಟರು.
2024-25ನೇ ಶೈಕ್ಷಣಿಕ ವರ್ಷದ ಶೈಕ್ಷಣಿಕ ಬಲವರ್ಧನೆಯನ್ನು ಸಾಂಕೇತಿಕವಾಗಿ ಗಣ್ಯರು ತೆರೆದ ಪಠ್ಯಪುಸ್ತಕವನ್ನು ಇರಿಸಿ ದೀಪಗಳನ್ನು ಉರಿಸುವ ಮೂಲಕ ಉದ್ಘಾಟಿಸಿದರು. ಶಾಲೆಯಲ್ಲಿ ಸೇವೆ ನೀಡುವ ಸಿಬ್ಬಂದಿ ವರ್ಗದವರು ಸ್ವಪರಿಚಯವನ್ನು ಮಾಡಿದರು. ಅಧ್ಯಕ್ಷೀಯ ಸ್ಥಾನದಿಂದ ಸಂಭ್ರಮಕ್ಕೆ ಕಾರಣೀಕರ್ತರಾದ ಎಲ್ಲರನ್ನೂ ಸಂಚಾಲಕರು ಅಭಿನಂದಿಸಿದರು.
ಸಂಚಾಲಕ ವಂ. ಭಗಿನಿ ತೆರೇಸಾ ಶೇರಾ, ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷೆ ಶ್ರೀಮತಿ ಜಯಲಕ್ಷ್ಮೀ, ಕಾರ್ಯಕಾರಿ ಸಮಿತಿಯ ಸದಸ್ಯರು, ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ನಾರಾಯಣ ಶೆಟ್ಟಿ ಹಾಗೂ ಸಂತ ತೆರೇಸಾ ಕಾಂಪೋಸಿಟ್ ಪಿಯು ಕಾಲೇಜಿನ ಪ್ರಾಂಶುಪಾಲರು ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯಿನಿ ವಂ. ಭಗಿನಿ ಲೀನಾ ಡಿಸೋಜ ಸ್ವಾಗತಿಸಿದರು. ವಿಜ್ಞಾನ ಶಿಕ್ಷಕಿ ಶ್ರೀಮತಿ ನಿಶಾ ಪಿರೇರಾ ಕಾರ್ಯಕ್ರಮ ನಿರೂಪಿಸಿದರು. ಭಗಿನಿ ಜೆಸಿಂತಾ ವಂದಿಸಿದರು.