ಕೊಯ್ಯೂರು : ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನ ಕೊಯ್ಯೂರು ಇಲ್ಲಿ ಶ್ರೀ ಪಂಚದುರ್ಗಾಪರಮೇಶ್ವರಿ ಭಜನಾ ಮಂಡಳಿಯ ವತಿಯಿಂದ 2023-2024 ಸಾಲಿನ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡ ಎರಡು ಭಜನಾ ಮಂಡಳಿಯ ಸದಸ್ಯ ಮಕ್ಕಳಿಗೆ ಸನ್ಮಾನ ಕಾರ್ಯಕ್ರಮವನ್ನು ಕ್ಷೇತ್ರದ ಪ್ರಧಾನ ಅರ್ಚಕರು ಹಾಗೂ ಭಜನಾ ಮಂಡಳಿಯ ಗೌರವಾಧ್ಯಕ್ಷರು ಅಶೋಕ್ ಕುಮಾರ್ ಭಾಂಗಿಣ್ಣಾಯ , ತಾಲೂಕು ಭಜನಾ ಪರಿಷತ್ ಕಾರ್ಯದರ್ಶಿ ಪಿ ಚಂದ್ರಶೇಖರ ಸಾಲ್ಯಾನ್, ಕೊಯ್ಯೂರು ದೇವಸ್ಥಾನದ ಉಳ್ಳಾಲ್ತಿ ದೈವದ ಚಾಕಾರಿ “ದೇವರ ಮಾಣಿ “ಯಾದ ಪುಂಡಲೀಕ ಶೆಟ್ಟಿ ಗೇರುಕಟ್ಟೆ ಹಾಗೂ ಉದ್ಯಮಿ ಕೊಡುಗೈದಾನಿ ಶೇಖರ ಗೌಡ ಕೋರಿಯಾರು ಹಾಗೂ ರಾಮಣ್ಣ ಪೂಜಾರಿ ಕುದ್ಕೊಳಿ ಮತ್ತು ಭಜನಾ ಮಂಡಳಿ ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಎಲ್ಲಾ ಪದಾಧಿಕಾರಿಗಳ ಸಮ್ಮುಖದಲ್ಲಿ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಭಜನಾ ಮಂಡಳಿ ಕಾರ್ಯದರ್ಶಿ ನಾರಾಯಣ ಪೂಜಾರಿ ಗುರ್ಬೋಟ್ಟು, ಕೋಶಾಧಿಕಾರಿ ಡೀಕಯ್ಯ ಗೌಡ ಮಲೆಕಿನ್ಯಾಜೆ, ಸನ್ಮಾನಿತಾ ಮಕ್ಕಳ ಹೆತ್ತವರು, ಭಜನಾ ಮಂಡಳಿಯ ಪದಾಧಿಕಾರಿಗಳು ಹಾಗೂ ಕ್ಷೇತ್ರದ ಭಕ್ತವೃಂದದವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಭಜನಾ ಮಂಡಳಿ ಅಧ್ಯಕ್ಷ ದಿನೇಶ್ ಗೌಡ ಜಾಲ್ನಪ್ಪು ಸ್ವಾಗತಿಸಿ, ಎಲ್ಲಾ ಮಕ್ಕಳ ಸನ್ಮಾನ ಪತ್ರವನ್ನು ವಾಚಿಸಿದರು. ಭಜನಾ ಮಂಡಳಿಯ ಸದಸ್ಯ ಯಶವಂತ ಗೌಡ ಪೂರ್ಯಾಳ ಧನ್ಯವಾದವಿತ್ತರು.