April 2, 2025
ಗ್ರಾಮಾಂತರ ಸುದ್ದಿ

ಕಳಿಯ ಗ್ರಾ. ಪಂ ವ್ಯಾಪ್ತಿಯಲ್ಲಿ ಹಲವಾರು ಕಡೆಗಳಲ್ಲಿ ವಿದ್ಯುತ್ ತಂತಿಗಳು ಅಪಾಯದ ಸ್ಥಿತಿಯಲ್ಲಿ :ಸೂಕ್ತ ಕ್ರಮಕ್ಕೆ ನಾಗರಿಕರ ಆಗ್ರಹ

ಪರಪ್ಪು- ಕೊಯ್ಯೂರು ರಸ್ತೆಯ ಪದಗೋಳಿ ಸಮೀಪ

—————————————————

ಗೇರುಕಟ್ಟೆ: ಕಳಿಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಲವಾರು ಕಡೆಗಳಲ್ಲಿ ವಿದ್ಯುತ್ ತಂತಿಗಳು ಅಪಾಯದ ಸ್ಥಿತಿಯಲ್ಲಿ ಇದ್ದು, ಇದರ ಬಗ್ಗೆ ಮೆಸ್ಕಾಂ ಇಲಾಖೆ ಕ್ರಮ ಕೈಗೊಳ್ಳುವಂತೆ ನಾಗರಿಕರು ಆಗ್ರಹಿಸಿದ್ದಾರೆ.

ಪರಪ್ಪು ರಸ್ತೆ ಬದಿಯ ಸಮೀಪದ ಸುಣ್ಣಲಡ್ಡ ಕಾಂಪ್ಲೆಕ್ಸ್ ಹತ್ತಿರದ ನೆಲಕ್ಕೆ ಹಾಕಿಕೊಂಡಿರುವ ಅಕೇಶಿಯ ಮರಕ್ಕೆ ತಂತಿ ತಾಗುವುದಕ್ಕೆ ಕೇವಲ (½)ಅರ್ಧ ಅಡಿ ಮಾತ್ರ ಇದೆ.

ಪರಪ್ಪು- ಕೊಯ್ಯೂರು ರಸ್ತೆಯ ಪದಗೋಳಿ ಸಮೀಪದ ಮಾರ್ಗ ಬದಿಯಲ್ಲಿ ರುವ ಅಪಾಯಕಾರಿ ಒಣಗಿದ ಮರವೊಂದಿದ್ದು, ಸಾವಿರಾರು ವಾಹನ, ಜನರು ಓಡಾಡುವ ಸ್ಥಳ ಇದಾಗಿದೆ.


ಪೆಲತ್ತಳಿಕೆ ಕಾಸಿಂ ಮನೆಯ ತೋಟದಲ್ಲಿ ಹಾಗೂ ಸಾರ್ವಜನಿಕ ಟಾರು ರಸ್ತೆಯ ಪಕ್ಕದಲ್ಲಿರುವ 3 ವರ್ಷಗಳ ಹಿಂದೆ ಒಣಗಿದ ಅಪಾಯದಲ್ಲಿರುವ ಮರವೊಂದಿದೆ.

ದೇರ್ಜಾಲು ಅನಂದ ಪೂಜಾರಿ ಯವರ ತೋಟದಲ್ಲಿ ಬಾಳೆ ಗಿಡ ಮತ್ತು ಹಲಸಿನ ಮರದ ಕೊಂಬೆಗಳು ವಿದ್ಯುತ್ ಸ್ಪರ್ಶಿಸಿ ಸುಟ್ಟು ಕರಕಲಾಗಿದೆ.

ರಕ್ತೇಶ್ವರಿಪದವು ಕ್ರಾಸ್ ರಸ್ತೆ ಮೇಲ್ಬಾಗದಲ್ಲಿ ತಂತಿಯ ಮೇಲೆ ಮರದ ಕೊಂಬೆ ತಾಗುತ್ತಿವೆ. (ಕಳೆದ ತಿಂಗಳು ಬೈ ಹುಲ್ಲಿನ ವಾಹನಕ್ಕೆ ಬೆಂಕಿ ತಗುಲಿದ ಹತ್ತಿರದ ಸ್ಥಳ),

ಪೇಲತ್ತಳಿಕ್ಕೆ ಮನೆಯ ಮುಂಭಾಗದಲ್ಲಿರುವ ತಂತಿಗಳು ಮರಕ್ಕೆ ತಾಗುತ್ತಿವೆ ಇದರ ಬಗ್ಗೆ ಮೆಸ್ಕಾಂ ಇಲಾಖೆ ಕ್ರಮ ಕೈಗೊಳ್ಳುವಂತೆ ನಾಗರಿಕರು ಆಗ್ರಹಿಸಿದ್ದಾರ

Related posts

ಬಿ ಎಸ್ ಸಿ ಫ್ಯಾಷನ್ ಡಿಸೈನ್ ಪರೀಕ್ಷೆ: ಆಳ್ವಾಸ್ ವಿದ್ಯಾರ್ಥಿನಿ ರಮ್ಯಾ ಮಂಗಳೂರು ವಿ.ವಿ. ಗೆ ದ್ವಿತೀಯ ರ್‍ಯಾಂಕ್

Suddi Udaya

ಎಸ್‌ಎಸ್‌ಎಲ್‌ಸಿ ಫಲಿತಾಂಶ: ಮೂಡಬಿದ್ರೆ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಗೆ ಶೇ. 100 ಫಲಿತಾಂಶ

Suddi Udaya

ಲೋಕಸಭಾ ಚುನಾವಣೆ: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಉಸ್ತುವಾರಿಗಳ ನೇಮಕ

Suddi Udaya

ಸುಲ್ಕೇರಿಮೊಗ್ರು ಶ್ರೀ ದೈವ ಕೊಡಮಣಿತ್ತಾಯ ಬ್ರಹ್ಮ ಬೈದರ್ಕಳ ಗರಡಿ, ವಾರ್ಷಿಕ ಜಾತ್ರೋತ್ಸವ

Suddi Udaya

ಮುಂಡೂರು ಶ್ರೀ ಉದ್ಭವ ಗಣಪತಿ ಶ್ರೀ ನಾಗಾಂಬಿಕಾ ದೇವಸ್ಥಾನದಲ್ಲಿ ನಾಗರ ಪಂಚಮಿಯ ವಿಶೇಷ ಪೂಜೆ

Suddi Udaya

ನಿಟ್ಟಡೆ: ಕುಂಭಶ್ರೀ ಆಂಗ್ಲ ಮಾಧ್ಯಮ ವಸತಿ ಶಾಲೆ ಕಾಲೇಜು ವಿದ್ಯಾರ್ಥಿ ಸಂಘದ ಉದ್ಘಾಟನೆ

Suddi Udaya
error: Content is protected !!