ನಾವೂರು: ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನ ಸೇವಾ ಟ್ರಸ್ಟ್ ವತಿಯಿಂದ ಮೇ 31ರಂದು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ 2024-25ನೇ ಸಾಲಿನ ಭಗವದ್ಗೀತಾ ತರಗತಿಗಳನ್ನು ದೇವಸ್ಥಾನದ ಪ್ರಧಾನ ಅರ್ಚಕರಾದ ವೇ| ಮೂ| ದಿನೇಶ್ ಭಟ್ ದೀಪ ಪ್ರಜ್ವಲನೆ ಮಾಡುವ ಮೂಲಕ ಉದ್ಘಾಟಿಸಿ ಚಾಲನೆ ನೀಡಿದರು.
ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನ ಸೇವಾ ಟ್ರಸ್ಟ್ ಅಧ್ಯಕ್ಷ ಹರೀಶ್ ಮೊರ್ತಾಜೆ, ಪ್ರೌಢಶಾಲಾ ಮುಖ್ಯ ಶಿಕ್ಷಕ ರಾಜೇಂದ್ರ ಎಂ., ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ರೋಹಿಣಿ ಕೆ., ಟ್ರಸ್ಟಿಗಳಾದ ಹರೀಶ್ ಕಾರಿಂಜ, ಗಣೇಶ್ ನಾವೂರು, ತನಿಯಪ್ಪ ನಲ್ಕೆ, ತಿಮ್ಮಪ್ಪ ಗೋಲ್ತರ, ಶ್ರೀಮತಿ ಪೂರ್ಣಿಮ ಧರ್ಣಪ್ಪ ಮೂಲ್ಯ, ನಾವೂರಿನ ವೈದ್ಯರಾದ ಡಾ| ಪ್ರದೀಪ್ ಮೊದಲಾದವರು ಉಪಸ್ಥಿತರಿದ್ದರು.
ಕಳೆದ 8 ವರ್ಷಗಳಿಂದ ಪ್ರತಿ ಬುಧವಾರ ನಾವೂರು ದೇವಸ್ಥಾನದಲ್ಲಿ ಭಗವದ್ಗೀತಾ ಪಾಠ-ಪಠಣ ತರಗತಿ ನಡೆಯುತ್ತಿದ್ದು ವಿದ್ಯಾರ್ಥಿಗಳು ಈಗಾಗಲೇ 12 ಹಾಗೂ 15 ಅಧ್ಯಾಯವನ್ನು ಕಂಠಪಾಠ ಮಾಡಿರುತ್ತಾರೆ. ಈ ವರ್ಷ 16 ಅಧ್ಯಾಯದ ಪಾಠ ಮುಂದುವರಿಯಲಿದ್ದು ಊರಿನ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ.