April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಶಾಲಾ ಕಾಲೇಜು

ಮಚ್ಚಿನ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದ ಪೂರ್ವ ತಯಾರಿಯಾಗಿ ಶ್ರಮದಾನ ಕಾರ್ಯಕ್ರಮ

ಮಚ್ಚಿನ: ಗುರುವಾಯನಕೆರೆ ಯೋಜನ ಕಛೇರಿ ವ್ಯಾಪ್ತಿಯ ಮಚ್ಚಿನ ಸರಕಾರಿ ಪ್ರೌಢಶಾಲೆಯಲ್ಲಿ ಜೂ.5ರಂದು ನಡೆಯಲಿರುವ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದ ಪೂರ್ವ ತಯಾರಿಯಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿಸಿ ಟ್ರಸ್ಟ್, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರಿಂದ ಗಿಡ ನಾಟಿ ಕಾರ್ಯಕ್ರಮಕ್ಕೆ ಹೊಂಡ ರಚನೆ, ಶಾಲಾ ಕೈತೋಟ ರಚನೆ, ಮಡಂತ್ಯಾರು ಹಾಗೂ ಮಚ್ಚಿನ, ಪಾಲಡ್ಕ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕರ ನೇತೃತ್ವದಲ್ಲಿ ಶ್ರಮದಾನ ನಡೆಯಿತು.

ಈ ಸಂದರ್ಭದಲ್ಲಿ ವಲಯ ಮೇಲ್ವಿಚಾರಕ ವಸಂತ ಕುಮಾರ್ ರವರು ಮಾಹಿತಿ ಮಾರ್ಗದರ್ಶನ ನೀಡಿದರು. ಶಾಲಾ ಶಿಕ್ಷಕ ಸುಭಾಷ್, ಸೇವಾ ಪ್ರತಿನಿಧಿ ಪರಮೇಶ್ವರ್, ಶ್ರೀಮತಿ ಹರಿಣಾಕ್ಷಿ ಉಪಸ್ಥಿತರಿದ್ದರು.
ಮಡಂತ್ಯಾರು ಘಟಕದ ಬಾಲಕೃಷ್ಣ ಹಾರಬೆ, ದಯಾನಂದ ಹಚ್ಚಬೆ, ಯೋಗೀಶ್ ಕೋಡ್ಲಕ್ಕೆ, ಸುಜೀತ್ ಕುಮಾರ್, ಪುರುಷೋತ್ತಮ ಪುಂಜಾಲಕಟ್ಟೆ, ಸತೀಶ್ ಆಚಾರ್ಯ ಮತ್ತು ಮಚ್ಚಿನ -ಪಾಲಡ್ಕ ಘಟಕದ ಪ್ರಭಾಕರ ಮುದಲಡ್ಕ, ಹೊನ್ನಪ್ಪ ಮೂಲ್ಯ, ಜಯ ಪೂಜಾರಿ, ಅವಿನಾಶ್ ಶ್ರಮದಾನದಲ್ಲಿ ಸಹಕರಿಸಿದರು.

Related posts

ಧರ್ಮಸ್ಥಳ ಭಜನಾ ಕಮ್ಮಟದಲ್ಲಿ ಭಾಗವಹಿಸಲು ಅರ್ಹ ಅಭ್ಯರ್ಥಿಗಳಿಗೆ ಅವಕಾಶ

Suddi Udaya

ಗೋಕರ್ಣನಾಥ ಕೋ ಅಪರೇಟಿವ್ ಬ್ಯಾಂಕ್ ಚುನಾವಣೆ: ಯುವವಾಹಿನಿ ಕೇಂದ್ರ ಸಮಿತಿ ನಿಕಟಪೂರ್ವಾಧ್ಯಕ್ಷ ಬಳಂಜ ಬೈಲಬರಿ ಹರೀಶ್ ಕೆ ಪೂಜಾರಿಯವರಿಗೆ ಗೆಲುವು

Suddi Udaya

ಬೆಳ್ತಂಗಡಿ ಸಂತ ಲಾರೆನ್ಸ್ ಚರ್ಚ್‌ನಲ್ಲಿ ಆತ್ಯಾಕರ್ಷವಾಗಿ ಗಮನ ಸೆಳೆದ ಗೋದಲಿ

Suddi Udaya

ಶಿಶಿಲ: ಒಟ್ಲ ನಿವಾಸಿ ನಾರಾಯಣ ಪೂಜಾರಿ ಹೃದಯಾಘಾತದಿಂದ ನಿಧನ

Suddi Udaya

ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ: ಶ್ರೀ ಮಂಜುನಾಥ ಸ್ವಾಮಿ ದಶ೯ನ

Suddi Udaya

ಧರ್ಮಸ್ಥಳ ಮಾನ್ವಿಶ್ರೀ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆ

Suddi Udaya
error: Content is protected !!